ಸುದ್ದಿಗಳು

‘ಕೀಕೀ’ ಸವಾಲನ್ನು ಸ್ವೀಕರಿಸಿದ ವಿವಾದಾತ್ಮಕ ನಟಿ

ಹೈದರಾಬಾದ್, ಆ.10: ‘ಕೀಕೀ ಛಾಲೆಂಜ್’ ಯುವಜನತೆಯನ್ನು ಪ್ರಚೋದಿಸುವ ವಿಷಯ ಪ್ರಮಾದವೇ ಸರಿ. ಸಾಗುತ್ತಿರುವ ಕಾರಿನಿಂದ ಇಳಿದು, ಹಾಡಿಗೆ ತಕ್ಕ ಹಾಗೆ ಹೆಜ್ಜೆ ಹಾಕುವುದು ಈ ಸವಾಲಿನ ಉದ್ದೇಶ. ಈ ನಿಟ್ಟಿನಲ್ಲಿ ದೇಶಾದ್ಯಂತ ಯುವಕರು ಸೇರಿದಂತೆ ಅನೇಕರು, ಈ ಸವಾಲನ್ನು ಸ್ವೀಕರಿಸುವುದರ ಮೂಲಕ ಭಾರೀ ಸುದ್ದಿಯಾಗುತ್ತಿದ್ದಾರೆ. ಕೆನಡಾದಲ್ಲಿ ಪ್ರಾರಂಭವಾಗಿರುವ ಈ ‘ಚೆರ್ರಿ ಕೃತ್ಯ(ನೃತ್ಯ)’, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಈ ನಿಟ್ಟಿನಲ್ಲಿ ವಿವಾದಾತ್ಮಕ ನಟಿ ಶ್ರೀರೆಡ್ಡಿ ಈ ಸವಾಲನ್ನು ಸ್ವೀಕರಿಸಿ ಸಂಚಲನ ಸೃಷ್ಟಿಸುತ್ತಿದ್ದಾರೆ.

ರೋಮಾಂಚಕ ಅನುಭವ

ಈ ಹಾಡು, ನೃತ್ಯದ ಜೊತೆಗೆ ವಿನೋದವಾದ ಸಾಹಸ ಕೂಡಿರುವುದು ವಿಶೇಷ. ಈ ನೃತ್ಯ ಒಂದು ರೀತಿಯಲ್ಲಿ ರೋಮಾಂಚಕತೆಯಿಂದ ಕೂಡಿದ ಮಜಾ ನೀಡುತ್ತದೆ ಎನ್ನುವುದು ಮಾತ್ರ ಸತ್ಯ.  ನಿಟ್ಟಿನಲ್ಲಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೃತ್ಯ ಪ್ರದರ್ಶಗಳನ್ನು ಹಂಚಿಕೊಂಡು ರಾತ್ರೋ ರಾತ್ರಿ ಪ್ರಸಿದ್ದಿಯಾಗುತ್ತಿರುವುದನ್ನು ದಿನವೂ ನೋಡುತ್ತಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ

ಈ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ ವಿವಾದಾತ್ಮಕ ನಟಿ ಶ್ರೀರೆಡ್ಡಿ ಕ್ಯಾಸ್ಟಿಂಗ್ ಕೌಚ್  ಬಿಟ್ಟು ಕೀಕೀ ಚಾಲೆಂಜ್ ಹಿಂದೆ ಬಿದ್ದಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸವಾಲನ್ನು ಸ್ವೀಕರಿಸಿರುವ  ಈ ನಟಿ ಹಾಟ್ ಹಾಟ್ ಆಗಿ ಸಾಹಸಮಯ ದೃಶ್ಯಗಳಲ್ಲಿ ಹೆಜ್ಜೆ ಹಾಕಿರುವ ವೀಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ  ವೀಡಿಯೋ ತುಣುಕು ಸಂಚಲನ ಸೃಷ್ಟಿಸುತ್ತಿದೆ ಎನ್ನಲಾಗಿದೆ.

Tags

Related Articles