ಸುದ್ದಿಗಳು

ನಾಳೆ ‘ಕೌರವ’ ಬಿ.ಸಿ ಪಾಟೀಲ್ ರ ಪುತ್ರಿ, ನಟಿ ಸೃಷ್ಟಿ ಪಾಟೀಲ್ ರಿಗೆ ಮದುವೆ ಸಂಭ್ರಮ, ಇಂದು ಅರಿಷಿಣ ಶಾಸ್ತ್ರ

ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮ

ಬೆಂಗಳೂರು.ಜ.17

: ನಟ, ನಿರ್ಮಾಪಕ, ನಿರ್ದೇಶಕ ಮತ್ತು ಶಾಸಕ ಬಿ.ಸಿ ಪಾಟೀಲ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲಿ ‘ಕೌರವ’ ಮತ್ತು ‘ದಳವಾಯಿ’ ಅಂತಾನೇ ಪ್ರಖ್ಯಾತಿ ಪಡೆದಿದ್ದಾರೆ.

ನಾಳೆ ಮದುವೆ ಸಮಾರಂಭ

ಬಿ.ಸಿ ಪಾಟೀಲ್ ಹಾಗೂ ವನಜಾ ಪಾಟೀಲ್ ಅವರ ಮಗಳಾದ ನಟಿ ಸೃಷ್ಟಿ ಪಾಟೀಲ್ ಹಾಗೂ ಸುಜಯ್ ಬೇಲೂರ್ ಅವರುಗಳ ನಿಶ್ಚಿತಾರ್ಥ ಕಾರ್ಯಕ್ರಮ ಕಳೆದ ಸಪ್ಟೆಂಬರ್ ನಲ್ಲಿ ನೆರವೇರಿತ್ತು. ಈಗ ವಿವಾಹಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು, ನಾಳೆ ದಿನಾಂಕ 18 ರಂದು ಶುಭ ಮೂಹೂರ್ತ ಬೆಳಿಗ್ಗೆ 08:45 ರಿಂದ 9:15 ರ ಒಳಗೆ ನಡೆಯಲಿದೆ. ಇಂದು ಮಧು ವರರ ಅರಿಶಿಣ ಶಾಸ್ತ್ರ ಅದ್ದೂರಿಯಾಗಿ ನೆರವೇರಿದೆ.

ಸೃಷ್ಟಿ ಪಾಟೀಲ್ ರ ಬಗ್ಗೆ

ಸೃಷ್ಟಿಯವರು ಈಗಾಗಲೇ ಕನ್ನಡದ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಮೂಲಕ ಚಂದನವನಕ್ಕೆ ಪ್ರವೇಶ ಮಾಡಿದ್ದರು. ಈ ಚಿತ್ರದ ನಂತರ ಕಳೆದ ಚುನಾವಣೆಯಲ್ಲಿ ಅಪ್ಪನ ಪರವಾಗಿ ಪ್ರಚಾರ ಮಾಡಿ ತಂದೆಯ ಗೆಲುವಿಗೆ ಕಾರಣವಾದರು.

 

 

ಅಪ್ಪನ ಶಾಲೆ, ರಾಜಕೀಯ, ಸಿನಿಮಾ.. ಹೀಗೆ ಎಲ್ಲವನ್ನೂ ಗಂಡು ಮಗನಂತೆ ನಿಭಾಯಿಸುತ್ತಿರುವ ಸೃಷ್ಟಿ , ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೂಲತಃ ಬೇಲೂರಿನವರಾಗಿರುವ ಸುಜಯ್ ಬೆಂಗಳೂರಿನಲ್ಲಿ ಸ್ವಂತ ಉದ್ಯಮವನ್ನು ಹೊಂದಿದ್ದಾರೆ. ಇವರೊಂದಿಗೆ ಸೃಷ್ಟಿಯವರ ಮದುವೆ ನಾಳೆ ಅದ್ದೂರಿಯಾಗಿ ನಡೆಯಲಿದ್ದು, ದಿನಾಂಕ 21 ಸೋಮವಾರದಂದು ಹಿರೇಕೆರೂರಿನಲ್ಲಿ ಆರತಕ್ಷತೆಯ ಕಾರ್ಯಕ್ರಮ ನೆರವೇರುತ್ತಿದೆ.

#srustipatil #balkaninews #srutipatil, #filmnews, #bcpatil, #marrige

Tags