ಸುದ್ದಿಗಳು

‘ಮನೆ ಮಾರಾಟಕ್ಕಿದೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ವಾಪಸ್ಸಾದ #ಮಿಟೂ ಶೃತಿ ಹರಿಹರನ್

‘ಲೂಸಿಯಾ’ ಶೃತಿಹರಿಹರನ್ ರವರು ಮಂಜು ಸ್ವರಾಜ್ ನಿರ್ದೇಶನದ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ವಿಶೇಷವೆಂದರೆ, ಈ ಚಿತ್ರಕ್ಕೀಗ ಟೈಟಲ್ ನಿಗದಿಯಾಗಿದ್ದು, ಈ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಹೌದು, ಈ ಚಿತ್ರಕ್ಕೆ ‘ಮನೆ ಮಾರಾಟಕ್ಕಿದೆ’ ಎನ್ನುವ ಟೈಟಲ್ ನಿಗದಿ ಮಾಡಲಾಗಿದೆ. ಹಾಗೆಯೇ ‘ದೆವ್ವಗಳಿದೆ ಎಚ್ಚರಿಕೆ’ ಎನ್ನುವ ಸಬ್ ಟೈಟಲ್ ಕೂಡ ಇಡಲಾಗಿದ್ದು, ಸದ್ಯದಲ್ಲಿಯೇ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.

ಈಗಾಗಲೇ ತನ್ನ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಈ ಚಿತ್ರಕ್ಕೆ ನಾಯಕಿಯಾಗಿ ‘ಲೂಸಿಯಾ’ ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಅಂದ ಹಾಗೆ ಇವರ ಪಾತ್ರದ ಕುರಿತಂತೆ ಚಿತ್ರತಂಡ ಏನನ್ನೂ ಬಿಟ್ಟುಕೊಟ್ಟಿಲ್ಲ. ಇನ್ನು #ಮಿಟೂ ಅಭಿಯಾನದ ಬಳಿಕ ಅವರು ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ.

ಚಿತ್ರದಲ್ಲಿ ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿ ಶಂಕರ್ ಈ ನಾಲ್ವರು ಕಾಮಿಡಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಹಾಗೆಯೇ ಕಾರುಣ್ಯ ರಾಮ್ ಕೂಡಾ ಚಿತ್ರದಲ್ಲಿದ್ದು, ಚಿತ್ರವನ್ನು ಎಸ್ ವಿ ಬಾಬು ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತವಿದ್ದು, ಮಂಜು ಸ್ವರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ಈ ಹಿಂದೆ ‘ಶಶಿರ’, ‘ಶ್ರಾವಣಿ ಸುಬ್ರಮಣ್ಯ’, ‘ಶ್ರೀ ಕಂಠ’ ಹಾಗೂ ‘ಪಟಾಕಿ’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.

ಸಾಧುಕೋಕಿಲರವರ ಹೊಸ ಸ್ಟುಡಿಯೋ ಉದ್ಘಾಟಿಸಿದ ಎಸ್. ಪಿ .ಬಾಲಸುಬ್ರಹ್ಮಣ್ಯಂ

#manemaaratakkide. #filmnews, #sruthihariharan, #balkaninews  #filmnews, #kannadasuddigalu

Tags