ಸುದ್ದಿಗಳು

ಬಹಿರಂಗವಾಯ್ತು ಸ್ಟಾನ್ ಲೀ ಅವರ ಸಾವಿನ ಕಾರಣ…!

ಕಾಮಿಕ್ ಪುಸ್ತಕದ ಲೇಖಕ ಸ್ಟಾನ್ ಲೀ

ನವೆಂಬರ್, 30: ಮಾರ್ವೆಲ್ ಕಾಮಿಕ್ಸ್ ಸೃಷ್ಟಿಕರ್ತ ಸ್ಟ್ಯಾನ್ ಲೀ ಅವರ ಸಾವಿನ ಪ್ರಮಾಣಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅವರು ಹೃದಯ ವೈಫಲ್ಯ ಮತ್ತು ಉಸಿರಾಟದ ಸಮಸ್ಯೆಯಿಂದ ಮರಣ ಹೊಂದಿದ್ದಾರೆಂದು ದೃಢಪಟ್ಟಿದೆ.

ಸ್ಟಾನ್‍ ಲೀ ನಿಧನದ ಅಸಲೀ ಕಾರಣ ಬಹಿರಂಗ

ಮರಣ ಪ್ರಮಾಣಪತ್ರವನ್ನು ಲಾಸ್ ಏಂಜಲೀಸ್ ನ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಪೀಪಲ್‍ ಪತ್ರಿಕೆ ವರದಿಯ ಪ್ರಕಾರ, ಲೀ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಅವರು ತೆಗೆದುಕೊಂಡ ಆಹಾರ, ಪಾನೀಯ, ವಾಂತಿ ಅಥವಾ ಲಾಲಾರಸದ ರೂಪದಲ್ಲಿ ಶ್ವಾಸಕೋಶಗಳಿಗೆ ಸೇರ್ಪಡೆಗೊಂಡ ವೇಳೆ ಸಾವು ಸಂಭವಿಸಿದೆ.

ಪತ್ರಿಕೆಯ ವರದಿ ಪ್ರಕಾರ, ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಮತ್ತು ಇದೇ ಕಾರಣಕ್ಕಾಗಿ ಹಲವಾರು ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು. ಮಾರ್ವೆಲ್ ಬ್ರಹ್ಮಾಂಡವನ್ನು ಏಕಾಂಗಿಯಾಗಿ ಕೆಲವು ಅಸಾಧಾರಣ ಸೂಪರ್ ಹೀರೋಗಳೊಂದಿಗೆ ನೇಯ್ದ ವ್ಯಕ್ತಿ. ಚಲನಚಿತ್ರ ಮತ್ತು ಕಾಮಿಕ್‍ ನಲ್ಲಿ ಅವರ ಕೆಲಸದ ಆಧಾರದ ಮೇಲೆ ತನ್ನ ವಿಶೇಷ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು.

ಬ್ಲ್ಯಾಕ್ ಪ್ಯಾಂಥರ್, ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಬ್ಲ್ಯಾಕ್ ವಿಡೋ, ಥೋರ್, ಹಲ್ಕ್, ಕ್ಯಾಪ್ಟನ್ ಅಮೇರಿಕಾ ಸೇರಿದಂತೆ ಸೂಪರ್‍ ಹೀರೋ ಪಾತ್ರಗಳ ಹಿಂದಿನ ಬರಹಗಾರ ಲಾಸ್ ಏಂಜಲೀಸ್ ನಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ನವೆಂಬರ್ 13ರಂದು ನಿಧನರಾದರು.

Tags

Related Articles