ಸುದ್ದಿಗಳು

ಜಮ್ಮು ಕಾಶ್ಮಿರದ ಪುಲ್ವಾಮ ದಾಳಿ, ಉಗ್ರರ ವಿರುದ್ದ ಗುಡುಗಿದ ಸ್ಟಾರ್ ನಟರು!!

ಬೆಂಗಳೂರು,ಫೆ.15:

ಜಮ್ಮು ಕಾಶ್ಮಿರದ ಪುಲ್ವಾಮನಲ್ಲಿ ಉಗ್ರರ ದಾಳಿಗೆ ಭಾರತದ ಯೋಧರ ಬಲಿ ತೆಗೆದುಕೊಂಡಿದ್ದು 44 ಯೋಧರ ಹತ್ಯೆ ನಡೆದಿದೆ.. ಇನ್ನು ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಿಂತ ದುಪ್ಪಟ್ಟು ಮಂದಿ ಪುಲ್ವಾಮ ದಾಳಿಯಲ್ಲಿ ಅಮರರಾಗಿರುವುದು ಸಹಿಸಲಾರದ ದುಃಖದ ಸಂಗತಿ..

ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರ ಯೋಧರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ನಲ್ಲಿ  ಸಂತಾಪ ಸೂಚಿಸಿದ್ದಾರೆ..

ದರ್ಶನ್ ಟ್ವೀಟ್

“# ಪಲ್ವಾಮಾ ಭಯೋತ್ಪಾದನೆ ಬಗ್ಗೆ ಸುದ್ದಿ ಕೇಳಿ ಬಹಳ ದುಃಖವಾಯಿತು. ಆ ಕೆಚ್ಚೆದೆಯ ಸೈನಿಕರು ಮತ್ತು ಅವರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು.. R.I.P. ಭಯೋತ್ಪಾದನೆ ಮಾನವ ಜನಾಂಗಕ್ಕೆ ತೀವ್ರ ಅಪಾಯವನ್ನುಂಟುಮಾಡುತ್ತದೆ. ಇದನ್ನು ಸಂಪೂರ್ಣವಾಗಿ ಸಮಾಜದಿಂದ ಕಿತ್ತೆಸೆಯಬೇಕು” ಎಂದಿದ್ದಾರೆ.

ಅಪ್ಪು ಟ್ವೀಟ್

ಇನ್ನು ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಕೂಡ ಈ ಘಟನೆಯಿಂದ ದುಃಖಿತರಾಗಿದ್ದು,

#ಪುಲ್ವಾಮಾ ಘಟನೆಯಿಂದ ಆಳವಾಗಿ ದುಃಖಿತನಾಗಿದ್ದಾನೆ … ಹುತಾತ್ಮರ ಮತ್ತು ಅವರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು ಎಂದು ಟ್ವೀಟ್ ಮಾಡಿದ್ದಾರೆ …

ರಶ್ಮಿಕಾ ಮಂದಣ್ಣ ಟ್ವೀಟ್

ತ್ರಿವಿಧ ಸಮಸ್ಯೆಯ ಪರಿಹಾರಿ ಈ “ಮೆಣಸು”

#balkaninews #darshan #sandalwoo #rashmikamandanna #puneethrajkumar

Tags