ಸುದ್ದಿಗಳು

ಹೊಸ ಬಿರುದುಗಳಲ್ಲಿ ಚಂದನವನದ ಸ್ಟಾರ್ ನಟರು…

ಶಿವಣ್ಣ, ಪುನೀತ್, ದರ್ಶನ್ ಹಾಗೂ ಸುದೀಪ್ ಅವರುಗಳಿಗೆ ಬಂದ ಬಿರುದುಗಳು

ಬೆಂಗಳೂರು, ನ.23: ಸದ್ಯ ಚಂದನವನದ ಸ್ಟಾರ್ ಕಲಾವಿದರಾದ ಡಾ. ಶಿವರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್ , ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದರ್ಶನ್ ಅವರಿಗೆ ಹಳೆಯ ಬಿರುದುಗಳೊಂದಿಗೆ ಹೊಸ ಹೊಸ ಬಿರುದುಗಳು ಅವರ ಹೆಸರಿನೊಂದಿಗೆ ಸೇರಿಕೊಂಡಿವೆ. ಹೀಗಾಗಿ ಅವರ ಅಭಿಮಾನಿಗಳೆಲ್ಲರೂ ಸಂತಸ ವ್ಯಕ್ತ ಪಡಿಸಿದ್ದಾರೆ.

ಶಿವಣ್ಣ ಈಗ ‘ಭರತ ಚಕ್ರವರ್ತಿ’

ಚಂದನವನದ ಅತ್ಯಂತ ಬಿಝಿ ನಟರಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಈಗಾಗಲೇ ‘ಸೆಂಚೂರಿ ಸ್ಟಾರ್’, ‘ಕರುನಾಡ ಚಕ್ರವರ್ತಿ’ ಸೇರಿದಂತೆ ಹಲವಾರು ಬಿರುದುಗಳು ಸಂದಿವೆ. ಈಗ ಅವರಿಗೆ ಬಂದಿರುವ ಹೊಸ ಹೆಸರು ಭರತ ಚಕ್ರವರ್ತಿ.

ಹೌದು ‘ಟಗರು’ ಚಿತ್ರದ ಯಶಸ್ಸಿನ ನಂತರ ಈ ಚಿತ್ರದ ನಿರ್ಮಾಪಕ ಶ್ರೀಕಾಂತ್ ಮತ್ತು ಅಭಿಮಾನಿಗಳು ಅವರಿಗೆ ಈ ಬಿರುದು ನೀಡಿದ್ದಾರೆ. ಇದಲ್ಲದೇ ಇತ್ತೀಚೆಗೆ ಅವರು ಆಸ್ಪ್ರೇಲಿಯಾಗೆ ಹೋದಾಗ ಅಲ್ಲಿ ‘ಮುಂಬಾ ಸ್ಟಾರ್’ ಎಂದು ಬಿರುದನ್ನು ನೀಡಿ ಗೌರವಿಸಲಾಗಿದೆ.

‘ಯುವರತ್ನ’ ಪುನೀತ್ ರಾಜ್ ಕುಮಾರ್

‘ರಾಜಕುಮಾರ’ ಚಿತ್ರದ ನಂತರ ನಿರ್ದೇಶಕ ಸಂತೋಷ್ ಆನಂದ ರಾಮ್ , ಮತ್ತೊಮ್ಮೆ ಪುನೀತ್ ಅವರಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಯುವರತ್ನ’ ಎಂಬ ಹೆಸರಿಡಲಾಗಿದೆ. ಇದು ಅವರ ಅಭಿಮಾನಿಗಳಿಗೂ ಖುಷಿಯಾಗಿದೆ. ಹಾಗಾಗಿ ಅವರಿಗೆ ‘ರಾಜರತ್ನ’ ಹಾಗೂ ‘ಯುವರತ್ನ’ ಎಂದು ಕರೆಯಲಾಗುತ್ತಿದೆ.

‘ಕರುನಾಡ ಕಲಾ ಕುಲತಿಲಕ’

ಇತ್ತಿಚೆಗೆ ನಟ ದರ್ಶನ್ ಕತಾರ್ ನಡೆದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಹಿಸಿದರು. ಅಲ್ಲಿ ಅವರಿಗೆ ‘ಕರುನಾಡ ಕಲಾ ಕುಲತಿಲಕ’ ಎಂದು ಬಿರುದನ್ನು ನೀಡಿ ಸನ್ಮಾನಿಸಲಾಯಿತು.

 

ಸುದೀಪ್ ಈಗ ‘ಬಾದ್ ಷಾ’

ಎಸ್ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈ ಚಿತ್ರದ ಪೋಸ್ಟರ್ ವೊಂದು ಇತ್ತಿಚೆಗೆ ಬಿಡುಗಡೆಯಾಗಿತ್ತು. ಈ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿ, ಕಸರತ್ತು ಮಾಡಿಕೊಳ್ಳುತ್ತಾ ಬಂದಿರುವ ಸುದೀಪ್ ರಿಗೆ ಚಿತ್ರತಂಡವೂ ‘ಬಾದ್ ಷಾ’ ಎಂಬ ಬಿರುದನ್ನು ಕೊಟ್ಟಿದೆ. ಹೀಗಾಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Tags