ಸುದ್ದಿಗಳು

ಸುಚೇಂದ್ರ ಪ್ರಸಾದ್ ನಿರ್ದೇಶನದ ‘ಸಂದಿಗ್ಧ’ ಚಿತ್ರಕ್ಕೆ ಇಂಟರ್ ನ್ಯಾಶನಲ್ ಅವಾರ್ಡ್

ಕಳೆದ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ಸಿನಿಮಾ

ಬೆಂಗಳೂರು.ಫೆ.10

ಸಿನಿಮಾದಲ್ಲಿ ಮಾತ್ರವಲ್ಲದೇ, ನಿಜ ಜೀವನದಲ್ಲಿಯೂ ಸ್ವಚ್ಛ ಕನ್ನಡದಲ್ಲಿ ವ್ಯವಹರಿಸುವ ಅಚ್ಚ ಕನ್ನಡಿಗ ಸುಚೇಂದ್ರ ಪ್ರಸಾದ್ ಬರೀ ಕಲಾವಿದರಷ್ಟೇ ಅಲ್ಲ. ಶೂಟಿಂಗ್ ಬಿಡುವಿನ ವೇಳೆ ಮೈಕ್ ಹಿಡಿದು ಆ್ಯಕ್ಷನ್ ಕಟ್ ಕೂಡ ಹೇಳ್ತಾರೆ. ಹೌದು, ಸುಚೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ‘ಸಂದಿಗ್ಧ’ ಚಿತ್ರಕ್ಕೆ ಇಂಟರ್ ನ್ಯಾಶನಲ್ ಅವಾರ್ಡ್ ಬಂದಿದೆ.

ಚಿತ್ರದ ಬಗ್ಗೆ

ಕಳೆದ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ‘ಸಂದಿಗ್ಧ’ ಚಿತ್ರವು ಈ ವರ್ಷದ ಮತ್ತೊಂದು ಚಿತ್ರೋತ್ಸವದಲ್ಲಿ ಪ್ರಶಸ್ತಿ ಮುಡಿಗೇರಸಿಕೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಸದಭಿರುಚಿಯ ಸಿನಿಮಾ ವೇದಿಕೆ ಆಯೋಜಿಸಿದ್ದ ಅಹಮದಾಬಾದ್ ಇಂಟರ್ ನ್ಯಾಷನಲ್ ಚಿಲ್ಡ್ರನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗೆ ಪಾತ್ರವಾಗಿದೆ.

‘ಪ್ರಪಾತ’ ಚಿತ್ರದ ನಂತರ ಸಂದಿಗ್ಧ

ನಟನೆಯೊಂದಿಗೆ ಸದಾ ಒಂದಿಲ್ಲೊಂದು ಸಿನಿಮಾದ ಶೂಟಿಂಗ್, ಡಬ್ಬಿಂಗ್ ನಲ್ಲಿ ಬ್ಯುಸಿಯಿರುವ ಸುಚೇಂದ್ರ ಪ್ರಸಾದ್ ಹತ್ತು ಹಲವು ಡಾಕ್ಯೂಮೆಂಟರಿಗಳನ್ನು ಸಹನಿರ್ದೇಶನ ಮಾಡಿದ್ದಾರೆ. ಹಾಗೆಯೇ ‘ಪ್ರಪಾತ’ ಹೆಸರಿನ ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಈಗ ಅವರು ನಿರ್ದೇಶನ ಮಾಡಿರುವ ‘ಸಂದಿಗ್ಧ’ ಚಿತ್ರದ ಮೂಲಕ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಆಶಯವಿರುವ ಮಕ್ಕಳ ಚಿತ್ರವನ್ನು ಮಾಡಿದ್ದಾರೆ.

“ಇದೊಂದು ಮಕ್ಕಳ ಸಿನಿಮಾ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಆದರೆ ಲೋಕಾನುಭವದ ಕೊರತೆಯಿಂದ ಮಕ್ಕಳನ್ನು ಎಲ್ಲರೂ ದೂರ ಇಡುತ್ತಾರೆ. ಮಕ್ಕಳ ಹಕ್ಕುಗಳು ಮತ್ತು ಅವುಗಳ ದಾಖಲು ಯೋಗ್ಯ ಉಲ್ಲಂಘನೆಯ ಸಾಧ್ಯಾಂತ ಆತ್ಮ ವಿಮರ್ಶೆ ನಡೆಸಿದಾಗ ಎದುರಾಗುವುದೇ ಈ ಚಿತ್ರದ ಕಥಾಹಂದರ” ಎಂದು ನಿರ್ದೇಶಕರು ಹೇಳುತ್ತಾರೆ.

ಈ ಚಿತ್ರವನ್ನು ಜೆ.ಎನ್.ವೈ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾಗಿದ್ದು, ಚಿತ್ರದಲ್ಲಿ ಸುಧಾರಾಣಿ, ರಂಗಾಯಣ ರಘು, ದತ್ತಣ್ಣ, ರೋಹಿಣಿ, ಅಮಾನ್, ಅವಿನಾಶ್, ರಮೇಶ್ ಭಟ್, ಉಮೇಶ್, ಕರಿಸುಬ್ಬು, ಬಿ ಸುರೇಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಹೆಚ್ಚುತ್ತಿರುವ ಆಹಾರದ ಕೊರತೆ, ಬೇಳೆಯಂತಹ ಪದಾರ್ಥ ನಮ್ಮನ್ನು ಉಳಿಸುತ್ತದೆ ಎನ್ನುತ್ತದೆ ಅಧ್ಯಯನ

#suchendraprasad, #balkaninews #sandigna, #filmnews, #kannadasuddigalu

Tags