ಸುದ್ದಿಗಳು

ರಾಜ್ಯದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿ: ಸುದೀಪ್

ಬೆಂಗಳೂರು,ಆ.18: ಸೆಲೆಬ್ರಿಟಿಗಳು ಏನೇ  ಹೇಳಿದರೂ ಅದನ್ನು ಅಭಿಮಾನಿಗಳು  ಕಟ್ಟಿನಿಟ್ಟಾಗಿ ಪಾಲಿಸುತ್ತಾರೆ. ಸಾಮಾಜಿಕ ಕಳಕಳಿಯಿಂದ ಸ್ಟಾರ್​ ನಟರು ಹಲವು ಕಾರ್ಯಗಳಿಗೆ ಜನರನ್ನು ಪ್ರೇರೇಪಿಸಿದ್ದಾರೆ. ಮಳೆಯ ಅಬ್ಬರದಿಂದ ಪ್ರವಾಹ ಹರಿದು ಬಂದಿದ್ದು, ಕರಾವಳಿ,ಕೇರಳ, ಕೂರ್ಗು ಹೀಗೆ ಎಲ್ಲಾ ಪ್ರದೇಶ ಜಲಾವೃತ್ತಿಯಾಗಿವೆ. ಈ ನಿಟ್ಟಿನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನೆರೆ ಸಂತ್ರಸ್ತರ ನೆರವಿಗೆ ಧಾವಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು. ಈಗ ಕಿಚ್ಚ ಸುದೀಪ್​ ಕೂಡ ಅದೇ ರೀತಿಯಲ್ಲಿ ಕರೆ ನೀಡಿದ್ದಾರೆ.

ಸುದೀಪ್ ಅಭಿಮಾನಿಗಳಲ್ಲಿ ಮನವಿ

ಕರ್ನಾಟಕದಲ್ಲಿ ಮಳೆಯಿಂದಾಗಿ ತೊಂದರೆಗೆ ಒಳಗಾಗಿರುವ ಜನರಿಗೆ ಸಹಾಯ ಮಾಡಿ ಎಂದು ಕಿಚ್ಚ ಸುದೀಪ್ ಅಭಿಮಾನಿ ಸಂಘಗಳಿಗೆ ಕರೆ ನೀಡಿದ್ದಾರೆ.
ಕೊಡಗು, ಮಡಿಕೇರಿ, ಸಕಲೇಶಪುರ ಭಾಗದಲ್ಲಿ ವರುಣನ ಅಬ್ಬರದಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಅವರು ಟ್ವಿಟರ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಸಂತ್ರಸ್ತ ಜನರಿಗೆ ಅಗತ್ಯ ನೆರವು ನೀಡುವತ್ತ ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದೂ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕಿಚ್ಚನಂತೆಯೇ ಅವರ ಪತ್ನಿ  ಪ್ರಿಯಾ ಸಹ ಟ್ವಿಟರ್​ ಮೂಲಕ ಮನವಿ ಮಾಡಿದ್ದಾರೆ.
ಕಿಚ್ಚ ಈ ಹಿಂದೆ ನೀಡಿದ್ದ ಹಲವು ಕರೆಗಳಿಗೆ ಓಗೊಟ್ಟುಅದರಂತೆ ಪಾಲಿಸಿದ್ದ ಅಭಿಮಾನಿಗಳು, ಈ ಬಾರಿಯೂ ಅವರ ಕರೆಯನ್ನು ಪಾಲಿಸುತ್ತಿದ್ದಾರೆ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ನಾವು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚೋಣ..

Tags