ಸುದ್ದಿಗಳು

ಭರ್ಜರಿ ಓಪನಿಂಗ್ ಪಡೆದ ‘ಪೈಲ್ವಾನ್’, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?

ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಅವರ ‘ಪೈಲ್ವಾನ್’ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಓಪನಿಂಗ್ ಪಡೆದಿದೆ.

ಹೌದು, ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಸೆಪ್ಟೆಂಬರ್ 12 ರಂದು ಗುರುವಾರ ನಾಲ್ಕು ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ) ಬಿಡುಗಡೆಯಾಗಿದ್ದು, ಬಹುತೇಕ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ.

ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಪರದೆಗಳಲ್ಲಿ ಸಿಂಗಲ್ ಸ್ಕ್ರೀನ್‌ ನಲ್ಲಿ ಬಿಡುಗಡೆಯಾದ ‘ಪೈಲ್ವಾನ್’ ಚಿತ್ರದ ವಿಶೇಷ ಪ್ರದರ್ಶನ ಬೆಳಗ್ಗೆ ಏರ್ಪಡಿಸಲಾಗಿತ್ತು. ಮೊದಲ ಪ್ರದರ್ಶನ ಬೆಂಗಳೂರಿನ ಅನೇಕ ಕೇಂದ್ರಗಳಲ್ಲಿ ಬೆಳಗ್ಗೆ 5.30 ರ ಸುಮಾರಿಗೆ ಪ್ರಾರಂಭವಾಯಿತು.

ಚಿತ್ರದ ಟಿಕೆಟ್ ಅನ್ನು ಮುಂಗಡ ಕಾಯ್ದಿರಿಸಿದ್ದ ಸುದೀಪ್ ಅವರ ಅಭಿಮಾನಿಗಳು ತೆರೆಯ ಮೇಲೆ ‘ಪೈಲ್ವಾನ್’ ಅಬ್ಬರ ನೋಡಿ ಪ್ರಶಂಸಿಸಿದ್ದಾರೆ. ಇದು ಚಿತ್ರ  ಉತ್ತಮ ಓಪನಿಂಗ್ ಪಡೆಯಲು ಸಹಾಯ ಮಾಡಿದೆ. ಮಲ್ಟಿಪ್ಲೆಕ್ಸ್‌ಗಳು ಬಹುಪಾಲು ಸ್ಕ್ರೀನ್ ಅನ್ನು ‘ಪೈಲ್ವಾನ್’ಗೆ  ಮೀಸಲಿಟ್ಟಿದ್ದವು.

ಈ ಚಿತ್ರವು ಕರ್ನಾಟಕದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಬಿಡುಗಡೆಯಾಗಿದೆ ಎಂದು ರಾಜ್ಯದಲ್ಲಿ ಚಿತ್ರವನ್ನು ವಿತರಿಸುತ್ತಿರುವ ಕಾರ್ತಿಕ್ ಗೌಡ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಇತ್ತೀಚಿನ ಸೂಪರ್ ಸ್ಟಾರ್ ಗಳ ಕನ್ನಡ ಚಿತ್ರಗಳು ಮೊದಲ ದಿನದಂದೇ 8 ಕೋಟಿ ರೂ.ಲಾಭ ಮಾಡುತ್ತಿವೆ. ಮೂಲಗಳ ಪ್ರಕಾರ ಕನ್ನಡ ಭಾಷೆಯಲ್ಲಿ‘ಪೈಲ್ವಾನ್’ ಅಂದಾಜು 10 ಕೋಟಿ ಲಾಭ ಮಾಡಿದೆ. ತೆಲುಗು ರಾಜ್ಯಗಳಲ್ಲಿ 2 ಕೋಟಿ, ಹಿಂದಿಯಲ್ಲಿ 5 ಕೋಟಿ, ಒಟ್ಟಾರೆಯಾಗಿ ತಮಿಳುನಾಡು, ಮಲೆಯಾಳಂ ಮಾರುಕಟ್ಟೆಯ ಪ್ರಕಾರ ಮೊದಲ ದಿನ 18 ಕೋಟಿ ಕಲೆಕ್ಷನ್ ಮಾಡಿದೆ.

‘ಪೈಲ್ವಾನ್’ ಬಜೆಟ್ 45 ಕೋಟಿಯಿದ್ದು, ಒಂದು ವಾರದಲ್ಲಿ ನಿರಾಯಾಸವಾಗಿ 100 ಕೋಟಿ ಗಡಿ ದಾಟಲಿದೆ ಎಂದು ಹೇಳಲಾಗುತ್ತಿದೆ.

ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡ ‘ಗಟ್ಟಿ ಮೇಳ’

#balkaninews #sudeep #pailwaan #1stdayboxofficecollection

Tags