ಸುದ್ದಿಗಳು

ವಿಜಯ್ ಸೇತುಪತಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ ಕಿಚ್ಚ

ಬೆಂಗಳೂರು, ಜ.16:

ನಟ ವಿಜಯ್ ಸೇತುಪತಿ ತಮ್ಮ ವಿಭಿನ್ನ ನಟನೆಯ ಮೂಲಕವೇ ಅದೆಷ್ಟೋ ಅಭಿಮಾನಿಗಳಿಗೆ ಇಷ್ಟವಾದ ನಟ. ನಟ ಸುದೀಪ್ ಕೂಡ ಕನ್ನಡ ಸಿನಿಮಾಗಳು ಅಷ್ಟೆ ಅಲ್ಲ ಅಲ್ಲದೆ ಪರ ಭಾಷೆಯಲ್ಲೂ ತಮ್ಮ ನಟನೆಯ ಚಾಪೂ ಮೂಡಿಸಿದ್ದಾರೆ. ಇದೀಗ ತೆಲುಗಿನ ಬಹುಕೋಟಿ ವೆಚ್ಚದ ಸೈರಾ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಜೊತೆಯೂ ಕಿಚ್ಚ ನಟಿಸುತ್ತಿದ್ದಾರೆ. ಇದು ತಮಿಳಿನ ಜನಪ್ರಿಯ ನಟ ವಿಜಯ್ ಸೇತುಪತಿ ಜನ್ಮದಿನದ ವಿಶೇಷವಾಗಿ ಕಿಚ್ಚ ವಿಶ್ ಮಾಡಿದ್ದಾರೆ.

ಕಿಚ್ಚನ ಪ್ರೀತಿಯ ವಿಶ್

ಸೈರಾ ಸಿನಿಮಾದಲ್ಲಿ ಈ ಇಬ್ಬರು ಕಲಾವಿದರು ಒಟ್ಟಿಗೆ ನಟಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗಿದೆ. ಇಂದು ವಿಜಯ್ ಸೇತುಪತಿಗೆ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ತಮ್ಮ ನೆಚ್ಚಿನ ಸ್ನೇಹಿತನಿಗೆ ಕಿಚ್ಚ ಪ್ರೀತಿಯಿಂದ ವಿಶ್ ಮಾಡಿದ್ದಾರೆ.

ಸರಳ ವ್ಯಕ್ತಿ ವಿಜಯ್

ಕಳೆದ ಐದು ವರ್ಷದ ಹಿಂದೆಯಷ್ಟೆ ಸರಳ ಸಜ್ಜನಿಕೆಯ ವಿಜಯ್ ಸೇತುಪತಿಯವರನ್ನು ಭೇಟಿಯಾಗಿದ್ದೆ, ಅದಾದ ನಂತರದಲ್ಲಿ ಅವರನ್ನು ಪ್ರತಿ ಬಾರಿ ಭೇಟಿಯಾದಗಲೂ ಕುತೂಹಲ ಮತ್ತು ಆಶ್ಚರ್ಯಕರವಾಗಿತ್ತು. ಅವರ ಸಿನಿಮಾ ಸ್ಕ್ರಿಪ್ಟ್ ಆಯ್ಕೆ, ನಟನೆ, ಒಬ್ಬ ನಟನ ಬೆಳವಣಿಗೆ, ಅಭಿವೃದ್ಧಿ ಎಲ್ಲವೂ ಸೂಪರ್. ಇಂಥಹ ಆಪ್ತನಿಗೆ, ಆತ್ಮೀಯನಿಗೆ ಹುಟ್ಟು ಹಬ್ಬದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.

#kichchasudeep #vijaysethupathi #sandalwood #birthdaywish #balkaninews

 

Tags