ಸುದ್ದಿಗಳು

ಕಿಚ್ಚನ ಹುಟ್ಟುಹಬ್ಬಕ್ಕೆ 2 ಚಿತ್ರಗಳ ಟೀಸರ್ ಬಿಡುಗಡೆ

ಕರುನಾಡ ಚಕ್ರವರ್ತಿಗೆ ಇಂದು 45 ನೇ ಜನ್ಮ ದಿನದ ಸಂಭ್ರಮ

ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ‘ಫೈಲ್ವಾನ್’ ಚಿತ್ರಗಳ ಟೀಸರ್ ಬಿಡುಗಡೆಯಾಗಿವೆ.

ಬೆಂಗಳೂರು, ಸ.02: ಇಂದು ಕಿಚ್ಚ ಸುದೀಪ್ ತಮ್ಮ 45 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾತ್ರಿಯಿಂದಲೇ ಜೆ.ಪಿ.ನಗರದ ಸುದೀಪ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಸೇರಿ ಹುಟ್ಟುಹಬ್ಬ ಆಚರಿಸಿದರು. ಕಿಚ್ಚ ಮೊದಲೇ ಹೇಳಿದಂತೆ ಹಾರ, ತುರಾಯಿ, ಕೇಕ್ ತರುವಂತಿಲ್ಲ ಎಂದಿದ್ದರಿಂದ ಅಭಿಮಾನಿಗಳು ಕಿಚ್ಚನ ನೋಡಿ ಖುಷಿ ಪಟ್ಟರು.

ಟೀಸರ್ ಬಿಡುಗಡೆ

ಕಿಚ್ಚನ ಹುಟ್ಟುಹಬ್ಬಕ್ಕೆ ಅಂತಾ ‘ಪೈಲ್ವಾನ್’ ಹಾಗೂ ‘ಕೋಟಿಗೊಬ್ಬ3’ ಸಿನಿಮಾ ತಂಡಗಳಿಂದ ಎರಡು ಚಿತ್ರಗಳ ಟೀಸರ್ ಬಿಡುಗಡೆ ಮಾಡಲಾಯಿತು. ‘ಪೈಲ್ವಾನ್’ ಸಿನಿಮಾದಲ್ಲಿ ನಿಜಕ್ಕೂ ಸುದೀಪ್ ಅವರ ಕಟ್ಟುಮಸ್ತಾದ ದೇಹ, ಅವರ ವರ್ಕೌಟ್ ನೋಡಿದವರು ಅಬ್ಬಾ ಎನ್ನುವ ಮಟ್ಟಿಗೆ ಇದೆ. ಸುದೀಪ್ ಚೆನ್ನಾಗಿ ವರ್ಕೌಟ್ ಮಾಡಿರೋದು ಈ ಟೀಸರ್ ನಲ್ಲಿ ಗೊತ್ತಾಗುತ್ತದೆ. ಈ ಚಿತ್ರವನ್ನ ಈ ಹಿಂದೆ ‘ಹೆಬ್ಬುಲಿ’ ಎಂಬಂತಹ ಬ್ಲಾಕ್ ಬಸ್ಟರ್ ಚಿತ್ರಕ್ಕೆ ನಿರ್ದೇಶನ ಮಾಡಿದಂತಹ ಕೃಷ್ಣ ಈ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ.

ಕೋಟಿಗೊಬ್ಬ3

ಇನ್ನು ಬಹು ನಿರೀಕ್ಷಿತ ಸಿನಿಮಾ ‘ಕೋಟಿಗೊಬ್ಬ3’ ಸಿನಿಮಾ ತಂಡ ಕೂಡ ಅವರ ಹುಟ್ಟುಹಬ್ಬಕೆಂದು ಟೀಸರ್ ಲಾಂಚ್ ಮಾಡಿದೆ. ಕೇವಲ ಒಂದು ಫೋಟೋದಲ್ಲೇ ಸಿನಿಮಾದ ಕುತೂಹಲ ಹೆಚ್ಚಿಸುವಂತಿದೆ ಈ ಸಿನಿಮಾ. ಈ ಹಿಂದದೆ ಕೋಟಿಗೊಬ್ಬ ಭಾಗ -2 ಚಿತ್ರವನ್ನು ನಿರ್ಮಾಣ ಮಾಡಿದ ಸೂರಪ್ಪ ಬಾಬು ಅವರೇ ಪಾರ್ಟ್-3 ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Tags