ಸುದ್ದಿಗಳು

ಸುದೀಪ್ ಚಿತ್ರಕ್ಕೆ ಸಾರಥಿಯಾದ ‘ಸುಕ್ಕಾ’ ಸೂರಿ : ಸಿಹಿ ಸುದ್ದಿ ನೀಡಿದ ನಿರ್ಮಾಪಕ ಕೆ.ಪಿ ಶ್ರೀಕಾಂತ್

ಈಗಾಗಲೇ ಸಾಕಷ್ಟು ಸಲ ಕೇಳಿ ಬಂದಿರುವಂತೆ ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾವನ್ನು ‘ಸುಕ್ಕಾ’ ಸೂರಿ ನಿರ್ದೇಶಿಸಲಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ‘ಟಗರು; ಖ್ಯಾತಿಯ ಕೆ.ಪಿ ಶ್ರೀಕಾಂತ್ ನಿರ್ಮಿಸಲಿದ್ದಾರೆ.

ಹೌದು, ಈ ಚಿತ್ರದ ಕುರಿತಂತೆ ಈಗಾಗಲೇ ಸಾಕಷ್ಟು ಸುದ್ದಿಗಳು ಹರಿದಾಡಿವೆ. ‘ಹೌದು, ಈ ಸಿನಿಮಾ ತಡವಾಗಿಯಾದರೂ ಲೇಟೆಸ್ಟ್ ಆಗಿ ಬರಲಿದೆ. ನಟ ಹಾಗೂ ನಿರ್ದೇಶಕರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಆ ಎಲ್ಲಾ ಕೆಲಸಗಳು ಮುಗಿದ ಬಳಿಕ ಈ ಸಿನಿಮಾ ಶುರುವಾಗುತ್ತದೆ’ ಎಂದು ನಿರ್ಮಾಪಕರು ಹೇಳುತ್ತಾರೆ.

ಅಂದ ಹಾಗೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಇದೀಗ ದುನಿಯಾ ವಿಜಯ್ ನಟನೆ ಹಾಗೂ ನಿರ್ದೇಶನ ಮಾಡುತ್ತಿರುವ ‘ಸಲಗ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದಾದ ಬಳಿಕ ಮೂರನೇಯ ಪ್ರಾಜೆಕ್ಟ್ ಶುರುವಾಗಲಿದೆ.

ಇನ್ನು ಕಳೆದ ವರ್ಷ ‘ಟಗರು’ ಚಿತ್ರಮಾಡಿ ಸಖತ್ ಸದ್ದು ಮಾಡಿದ್ದ ಸೂರಿ ಈಗ ಧನಂಜಯ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಇವರ ಸಿನಿಮಾ ಅಂದ್ಮೇಲೆ ಪಕ್ಕಾ ಕ್ರೈಮ್, ರಕ್ತ ಮತ್ತು ಸಾಹಸ ಇದ್ದೇ ಇರುತ್ತದೆ. ಬಹುಶಃ ಈ ಚಿತ್ರದಲ್ಲೂ ಅಂತಹ ಸುಕ್ಕಾ ವಿಷಯಗಳು ಇರಬಹುದು, ಇದ್ದರೆ ಸುದೀಪ್ ಹೇಗೆಲ್ಲಾ ಕಾಣಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳದ್ದು.

ಮದುವೆಗೂ ಮುನ್ನ ಗರ್ಭಿಣಿಯಾದ ‘ದಿ ವಿಲನ್’ ಬೆಡಗಿ!! ಬೇಬಿ ಬಂಪ್ ಫೋಟೋಶೂಟ್ ನಲ್ಲಿ ಸಖತ್ ಮಿಂಚಿಂಗ್!!

#sudeep, #duniyasoori, #filmnews, #balkaninews #filmnews, #kannadasuddigalu

Tags