ಸುದ್ದಿಗಳು

‘ಗಿರಿಜಾ ಮೀಸೆ’ ಬಿಡುತ್ತಿರುವ ಸುದೀಪ್

ಮುಂದಿನ ಚಿತ್ರಕ್ಕಾಗಿ ಗಿರಿಜಾಮೀಸೆ ಅವತಾರದಲ್ಲಿ ಕಿಚ್ಚ

ಇತ್ತಿಚೆಗಷ್ಟೇ ನಡೆದ ‘ದಿ ವಿಲನ್’ ಚಿತ್ರದ ಧ್ವನಿಸುರುಳಿ ಸಮಾರಂಭದಲ್ಲಿ ನಟ ಸುದೀಪ್, ಗಿರಿಜಾ ಮೀಸೆಯಲ್ಲಿ ಕಂಗೊಳಿಸುತ್ತಿದ್ದರು. ಅದಕ್ಕೆ ಇಲ್ಲಿದೆ ಕಾರಣ.

ಬೆಂಗಳೂರು, ಆ. 24: ನಟ-ನಿರ್ದೇಶಕ ಸುದೀಪ್, ತಮ್ಮ ಗಟಪ್ ಬದಲಿಸಿಕೊಂಡಿದ್ದಾರೆ. ಜೊತೆಗೆ ‘ಗಿರಿಜಾ ಮಿಸೆ’ಯನ್ನೂ ಬಿಟ್ಟುಕೊಂಡು ಭರ್ಜರಿಯಾಗಿಯೇ ಮೀಸೆ ತಿರುವುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ಅವರು ಈಗಲೇ ತಯಾರಿಯನ್ನು ನಡೆಸಿದ್ದಾರೆ.

ದಿ ವಿಲನ್

ಚಂದನವನದ ಬಹು ನಿರೀಕ್ಷಿತ ಚಿತ್ರಗಳಲ್ಲೊಂದಾದ ‘ದಿ ವಿಲನ್’ ಚಿತ್ರವು ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ. ಈಗಾಗಲೇ ಚಿತ್ರವು ತನ್ನ ಹಾಡುಗಳನ್ನು ಬಿಡುಗಡೆ ಮಾಡಿ ಸದ್ದು ಮಾಡುತ್ತಿದೆ. ಇನ್ನು ಸುದೀಪ್ ಅವರು ಈ ಚಿತ್ರ ಸೇರಿದಂತೆ ‘ಅಂಬಿ ನಿಂಗೆ ವಯಸ್ತೋ’ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಅದೂ ಸಹ ಬಿಡುಗಡೆಯ ಹಂತದಲ್ಲಿದೆ.

ಫೈಲ್ವಾನ್ ಅಥವಾ ಸೈರಾ

ಈ ಎರಡು ಚಿತ್ರಗಳೊಂದಿಗೆ ಸುದೀಪ್ ಅವರು ‘ಫೈಲ್ವಾನ್’ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಪಕ್ಕಾ ‘ಪೈಲ್ವಾನ್’ ನಂತೆಯೇ ಕಾಣಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಮೈ ಹುರಿಗೊಳಿಸೋದಷ್ಟೇ ಅಲ್ಲದೇ, ಹುರಿಮೀಸೆ ಬಿಟ್ಟಿದ್ದಾರೆ. ಆದರೆ ಈ ಹೊಸ ಅವತಾರವು, ‘ಪೈಲ್ವಾನ್’ ಚಿತ್ರಕ್ಕಾಗಿಯೋ ಅಥವಾ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರಕ್ಕಾಗಿಯೋ ಎಂಬುದು ಮಾತ್ರ ತಿಳಿದು ಬಂದಿಲ್ಲ.

ನಟ ಸುದೀಪ್ ರವರು ಹೀಗೆ ಚಿತ್ರದಿಂದ ಚಿತ್ರಕ್ಕೆ ಭಿನ್ನ ಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ವಿಶೇಷ ಗೆಟಪ್ ನೊಂದಿಗೆ ಮಿಂಚಲು ತಯಾರಿ ನಡೆಸಿದ್ದಾರೆ.

Tags