ಸುದ್ದಿಗಳು

ರಾಮ್ ಚರಣ್ ಚಿತ್ರದಲ್ಲಿ ಕನ್ನಡದ ಕಿಚ್ಚ!

ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ , ಕಿಯಾರಾ ಅದ್ವಾನಿ  ಜೋಡಿಯಲ್ಲಿ ನೂತನ ಸಿನಿಮಾವೊಂದು ತಾರಕಕ್ಕೇರುತ್ತಿರುವ ಸುದ್ದಿ ತೆಲುಗು ಚಿತ್ರರಂಗದ ಗಲ್ಲಿ ಗಲ್ಲಿಯಲ್ಲಿ  ಹರಿದಾಡುತ್ತಿದೆ. ಯಾಕ್ಷನ್ ಸಿನಿಮಾಗಳ ಸ್ಪೆಷಲಿಶ್ಟ್ ಬೊಯಪಾಟಿ ಶ್ರೀನು ಅವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರಂತೆ. ಟಾಲಿವುಡ್ ಟಾಪ್ ಪ್ರೊಡ್ಯೂಸರ್ ಡಿವಿವಿ ದಾನಯ್ಯಾ ನಿರ್ಮಾಣ ಮಾಡಲಿರುವ  ಯಾಕ್ಷನ್ ಅಂಡ್ ಫ್ಯಾಮಿಲಿ ಎಂಟರ್ಟೈನರ್ ಚಿತ್ರದಲ್ಲಿ ತಮಿಳಿನ ಸ್ಟಾರ್ ನಟರಾದ ಪ್ರಶಾಂತ್ ಸೇರಿದಂತೆ ಆರ್ಯನ್, ರಾಜೇಶ್, ಸ್ನೇಹ, ಮಹೇಶ್ ಮಂಜೇರ್ಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.

ಮೂಲ ವರದಿಗಳ ಪ್ರಕಾರ ಈ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಪ್ರತಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಮತ್ತೊಂದು ವಿಶೇಷತೆ ಏನೆಂದರೆ ಕನ್ನಡದ ಕಿಚ್ಚ ಈ  ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಎಂದು ಸಿನಿ ಮೂಲಗಳು ತಿಳಿಸಿವೆ. ‘ಈಗ’ ಸಿನಿಮಾದ ಮೂಲಕ ತೆಲುಗು ಚಿತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ  ಈ ನಟ ಪ್ರಸ್ತುತ ಮೆಗಾ ಸ್ಟಾರ್ ಚಿರಂಜೀವಿಯವರ ಬಹು ನಿರೀಕ್ಷಿತ ಚಿತ್ರ ‘ಸೈರಾ’ ಕಾಣಿಸಿಕೊಳ್ಳುತ್ತಿರುವುದು ತಿಳಿದ ವಿಷಯ. ಹಾಗೆಯೇ  ಮಗನ ಸಿನಿಮಾದಲ್ಲಿ ನಟಿಸಲು ಮನಸ್ಸು ಮಾಡಿರುವುದು ಅಭಿಮಾನಿಗಳಲ್ಲಿ ಬಾರೀ ನಿರೀಕ್ಷೆ ಹುಟ್ಟಿಸಿದೆ ಎಂದು ಹೇಳಲಾಗಿದೆ.

Tags

Related Articles

Leave a Reply

Your email address will not be published. Required fields are marked *