ಸುದ್ದಿಗಳು

18 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸುದೀಪ್ ದಂಪತಿ

ಸುದೀಪ್ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಅಕ್ಟೋಬರ್‌ 18ರಂದು ಕಿಚ್ಚ ಸುದೀಪ್‌-ಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 18 ವರ್ಷ ಆಗಿದೆ. ಕೆಲ ಕಾಲ ಇವರಿಬ್ಬರ ದಾಂಪತ್ಯದ ಮಧ್ಯೆ ಬಿರುಕು ಉಂಟಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ತದನಂತರ ಎಲ್ಲ ವಿಷಮಗಳು ಮರೆಯಾಗಿ, ಈ ಮುದ್ದು ದಂಪತಿಯ ಜೀವನದಲ್ಲಿ ಮತ್ತೊಮ್ಮೆ ಮಧುರ ರಾಗ ಮೂಡಿತು.

Image result for kiccha sudeep marriage anniversary

ಮದುವೆಗೂ ಮುನ್ನ ಜೆಟ್‌ ಏರ್‌ವೇಸ್‌ನಲ್ಲಿ ಮತ್ತು ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಪ್ರಿಯಾ. ಕೇರಳದ ನಾಯರ್ ಕುಟುಂಬದ ಪ್ರಿಯಾ ಮತ್ತು ಸರೋವರ್ ಕುಟುಂಬದ ಸುದೀಪ್, ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಒಬ್ಬರೊನ್ನೊಬ್ಬರು ಪ್ರೀತಿಸಿ 2001ರಲ್ಲಿ ಸಪ್ತಪದಿ ತುಳಿದಿದ್ದರು.

ಕಿಚ್ಚ ಹಾಗೂ ಪ್ರಿಯಾ ಅವರಿಗೆ ಸಾನ್ವಿ ಎಂಬ ಮುದ್ದಾದ ಮಗಳು ಇದ್ದಾಳೆ. ಇವರ ದಾಂಪತ್ಯ ಜೀವನ ಹೀಗೆಯೇ ನೂರು ಕಾಲ ಸುಖವಾಗಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

Related image

‘ಆಮ್ಲೆಟ್’ ತಿನ್ನುತ್ತಾ ಹಾಟ್ ಆದ ಸಂಯುಕ್ತಾ ಹೊರ್ನಾಡು

#kicchasudeep #priyasudeep #marriageanniversary

Tags