ಸುದ್ದಿಗಳು

‘ಪೈಲ್ವಾನ್’ ಚಿತ್ರದ ಸುನೀಲ್ ಶೆಟ್ಟಿಯ ಪಾತ್ರದ ಗುಟ್ಟು ರಟ್ಟು…!!!

ಬೆಂಗಳೂರು.ಮೇ.22: ಕಿಚ್ಚ ಸುದೀಪ್ ನಟಿಸುತ್ತಿರುವ ‘ಪೈಲ್ವಾನ್’ ಚಿತ್ರದ ಕುರಿತಂತೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಈ ಬಗ್ಗೆ ಸ್ವತಃ ಸುದೀಪ್ ಟ್ವೀಟ್ ಮಾಡಿದ್ದು, ಇಂದು ಸಂಜೆ ಸುನೀಲ್ ಶೆಟ್ಟಿ ಅಣ್ಣನನ್ನು ಒಳಗೊಂಡಿರುವ ಪೋಸ್ಟರ್ ರಿಲೀಸ್ ಮಾಡುತ್ತೇವೆ’ ಎಂದಿದ್ದಾರೆ.

Image result for pailwan photos

ಹೌದು, ಸುದೀಪ್ ಟ್ವೀಟ್ ಮಾಡಿರುವಂತೆ ‘ಪೈಲ್ವಾನ್’ ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅಭಿನಯಿಸಿದ್ದಾರೆ, ಆದರೆ, ಯಾವ ಪಾತ್ರ ಎಂಬುದು ತಿಳಿದಿರಲಿಲ್ಲ, ಈ ಬಗ್ಗೆ ಸುದೀಪ್ ಅವರೇ ತಿಳಿಸಿದ್ದಾರೆ.

‘ಇಂದು ಸಂಜೆ ಸರ್ಕಾರ್ ಎಂಬ ಪಾತ್ರವನ್ನು ವಿವರಿಸುವ ಪೋಸ್ಟರ್ ವೊಂದನ್ನು ರಿಲೀಸ್ ಮಾಡಲಿದ್ದೇವೆ. ಈ ಪಾತ್ರವನ್ನು ಸುನೀಲ್ ಶೆಟ್ಟಿ ನಿರ್ವಹಿಸಿದ್ದಾರೆ’ ಎಂದು ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ. ಈ ಮೂಲಕ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದಾರೆ.

ಅಂದ ಹಾಗೆ ಸುದೀಪ್ ಇದೀಗ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ. ಕನ್ನಡದಲ್ಲಿ ‘ಪೈಲ್ವಾನ್’ , ‘ಕೋಟಿಗೊಬ್ಬ-36’ ಚಿತ್ರಗಳಲ್ಲಿ ನಟಿಸುತ್ತಿದ್ದು, ಇವುಗಳೊಂದಿಗೆ ಬಾಲಿವುಡ್ ನಲ್ಲಿ ‘ದಬಾಂಗ್-3’ ಚಿತ್ರದಲ್ಲಿ ಸಲ್ಮಾನ್ ಖಾನ್ ರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ‘ಪೈಲ್ವಾನ್’ ಹೆಸರೇ ಹೇಳುವಂತೆ, ಇಲ್ಲಿ ಸುದೀಪ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರವು ಏಕಕಾಲಕ್ಕೆ ಬರೋಬ್ಬರಿ 9 ಭಾಷೆಗಳಲ್ಲಿಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನಿರ್ದೇಶಕ ಕೃಷ್ಣ ನಿರ್ಮಾಣ ಮಾಡಿ, ನಿರ್ದೇಶನ ಮಾಡಿದ್ದಾರೆ.

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ..!

#sudeep, #tweet, #about, #pailwana, #movie, #balkaninews #filmnews, #kannadasuddigalu,

Tags