ಸುದ್ದಿಗಳು

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಶುಭ ಕೋರಿದ ಕಿಚ್ಚ ಸುದೀಪ್

ಬೆಂಗಳೂರು, ಏ.04:

ಅತೀ ದೊಡ್ಡ ಜನಪ್ರಿಯತೆಗಳು ಪಡೆದ ಶೋಗಳಲ್ಲಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಕೂಡ ಒಂದು. ನಟ ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕ್ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಪ್ರಾರಂಭವಾಗುತ್ತಿದೆ. ಇದೇ ಏಪ್ರಿಲ್ 20ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30ರಿಂದ ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಶೋಗೆ ಪ್ರೇಕ್ಷಕರು ಕಾತುರಾರಗಿದ್ದಾರೆ. ಇದೀಗ ನಟ ಸುದೀಪ್ ವಿಶ್ ಮಾಡಿದ್ದಾರೆ.

ಟ್ವಿಟರ್ ನಲ್ಲಿ ವಿಶ್ ಮಾಡಿದ ಕಿಚ್ಚ

ಇನ್ನೂ ಈ ಬಗ್ಗೆ ಟ್ವಿಟ್ಟರ್ ನಲ್ಲಿ ನಟ ಸುದೀಪ್ ರಮೇಶ್ ಗೆ ವಿಶ್ ಮಾಡಿದ್ದಾರೆ. ಇದೊಂದು ಕೇವಲ ಕಾರ್ಯಕ್ರಮವಲ್ಲ. ಬದಲಾಗಿ ಇಲ್ಲಿ ಅನೇಕರ ಹಳೆಯ ನೆನಪು ಇವೆ. ಇಲ್ಲಿ ಅನೇಕರು ತಮ್ಮ ಜೀವನದ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ. ಬಿಟ್ಟು ಹೋದ ಜೀವನಕ್ಕೆ ಮರಳಿದ್ದಾರೆ. ಇದೊಂದು ಅವಿಸ್ಮರಣೀಯ ಗಳಿಗೆ. ಹೊಸ ಆವೃತ್ತಿಯಲ್ಲಿ ಬರುತ್ತಿರುವ ಇಡೀ ತಂಡಕ್ಕೆ ಶುಭಾಷಯಗಳು.

ಮೊದಲ ಅತಿಥಿ ಯಾರು ಗೊತ್ತೆ..?

ಇನ್ನೂ, 4ನೇ ಸೀಸನ್‌ ನ ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈವರೆಗೆ ನಡೆದ ಮೂರು ಸೀಸನ್‌ ಗಳಲ್ಲಿ 65 ಜನ ಸೆಲೆಬ್ರಿಟಿಗಳು ಇಲ್ಲಿಗೆ ಬಂದು ತಮ್ಮ ಜೀವನದ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದಾರೆ. ನಟಿ ಪ್ರೇಮ, ಮಾಲಾಶ್ರೀ, ರಾಘಣ್ಣ ಅಲ್ಲದೆ ರಾಹುಲ್ ದ್ರಾವಿಡ್, ಅನಿಲ್‌ ಕುಂಬ್ಳೆ ಮೊದಲಾದ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.

ಯುವ ಪ್ರೇಮಿಗಳ ಮನ ಮುಟ್ಟುವಂತಿದೆ ‘99’ ಟ್ರೇಲರ್!!

#weekendwithramesh #sudeep #sudeepandramesh

Tags

Related Articles