ಸುದ್ದಿಗಳು

ಅಕ್ಕಮ್ಮಳಾದ ವಠಾರದ ಮೀರಾ..

ಕಾದಂಬರಿಕಾರ ತ.ರಾ.ಸು ಅವರ ಹಲವಾರು ಕೃತಿಗಳು ಈಗಾಗಲೇ ಸಿನಿಮಾಗಳಾಗಿವೆ. ಅವರ ಕೃತಿಗಳನ್ನು ಆಧರಿಸಿ ತಯಾರಾದ ನಾಗರಹಾವು, ಗಾಳಿಮಾತು, ಚಂದವಳ್ಳಿಯ ತೋಟ, ಬೆಂಕಿಯ ಬಲೆ, ಮಸಣದ ಹೂವು, ಹಂಸಗೀತೆ ಚಿತ್ರಗಳು ಈಗಾಗಲೇ ಚಿತ್ರಗಳಾಗಿವೆ. ಡಾ. ರಾಜ್ ಕುಮಾರ್ ಅವರ ಆಕಸ್ಮಿಕ ಚಿತ್ರದ ನಂತರ ತರಾಸು ಅವರ ಯಾವ ಕೃತಿಗಳೂ ಸಿನಿಮಾವಾಗಿರಲಿಲ್ಲ. ಇದೀಗ ಸುಮಾರು ವರ್ಷಗಳ ನಂತರ ನಂದೀಶ್ವರ್ ನಿರ್ದೇಶನದಲ್ಲಿ ‘ಅಕ್ಕಮ್ಮನ ಭಾಗ್ಯ’ ಕೃತಿ ಇದೀಗ ಸಿನಿಮಾವಾಗಿದೆ.

ನೀವು ಕಿರುತೆರೆ ಪ್ರಿಯರಾಗಿದ್ದರೆ ಅದರಲ್ಲೂ ಟಿ.ಎನ್.ಸೀತಾರಾಂ ಅವರ ಧಾರಾವಾಹಿಗಳನ್ನು ನೋಡುವವರಾಗಿದ್ದರೆ ನಿಮಗೆ ಇವರ ಮುಖಪರಿಚಯವಿರುತ್ತದೆ . ವಿವಿಧ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಅವಕಾಶ ಪಡೆಯುತ್ತಿರುವ ಸುಧಾ ಪ್ರಸನ್ನ ಅವರು ಕಿರುತೆರೆಗೆ ಬಂದು 18 ವರ್ಷಗಳಾಗಿವೆ. ಇದೀಗ ಈ ‘ಅಕ್ಕಮ್ಮನ ಭಾಗ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಈ 18 ವರ್ಷಗಳಲ್ಲಿ ಅವರು ಮಾಡಿರುವ ಧಾರಾವಾಹಿಗಳು 75ಕ್ಕೂ ಹೆಚ್ಚು. ಇಷ್ಟು ಧಾರಾವಾಹಿಗಳಲ್ಲಿ ಅವರು ವಿಭಿನ್ನವಾದ ಪಾತ್ರ ಪೋಷಣೆ ಮಾಡುತ್ತಾ ಬಂದಿದ್ದಾರೆ. ಸುಧಾ ಪ್ರಸನ್ನ ಅವರಿಗೆ ಹೊಸ ಹೊಸ ಧಾರಾವಾಹಿಗಳಲ್ಲಿ ಅವಕಾಶ ಸಿಗುತ್ತಿರುವ ಖುಷಿ ಇದೆ. ಸದ್ಯ “ಜೀವನದಿ’, “ಯಾರೇ ನೀ ಮೋಹಿನಿ’ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ‍್ಳದ ಇವರು “ಮಾರಿಕೊಂಡವರು’, “ಮೂಡಲಸೀಮೆಯಲ್ಲಿ’ ಹಾಗೂ “ಅಕ್ಕಮ್ಮನ ಭಾಗ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ಇವೆಲ್ಲವೂ ಕಲಾತ್ಮಕ ಚಿತ್ರವಾಗಿದ್ದು, ನಟನೆಗೆ ಹೆಚ್ಚು ಅವಕಾಶವಿದೆಯಂತೆ.

“ಅಕ್ಕಮ್ಮನ ಭಾಗ್ಯ’ ಚಿತ್ರ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ. “ಅಕ್ಕಮ್ಮನ ಭಾಗ್ಯ’ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಇಡೀ ಸಿನಿಮಾ ನನ್ನ ಸುತ್ತ ಸುತ್ತುತ್ತದೆ. ಈ ತರಹದ ಪಾತ್ರ ಮಾಡಲು ನನಗೆ ಇಷ್ಟ’ ಎನ್ನುತ್ತಾರೆ. ಅಂದಹಾಗೆ, ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಸುಧಾ ಅವರಿಗೆ ಇಲ್ಲವಂತೆ.

ಇದು ಸ್ವತಂತ್ಯ್ರಾ ಪೂರ್ವದಲ್ಲಿ ಮೂವತ್ತರ ದಶಕದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು , ಹಳ್ಳಿ ಯೊಂದರ ಸಾಮಾನ್ಯ ಗೃಹಿಣಿ ಅಕ್ಕಮ್ಮನ ಬದುಕಿನ ಕಥಾನಕ. ಎಲ್ಲರಿಗೂ ಒಳಿತನ್ನು ಬಯಸುವ ಅಕ್ಕಮ್ಮಳಿಗೆ ಕಷ್ಟಗಳು ಸಾಲಿಗಟ್ಟಿ ಬರುತ್ತವೆ. ಆಕೆ ಎಲ್ಲವನ್ನೂ ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುತ್ತಾಳೆ.

ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಂಗಭೂಮಿ ಕಲಾವಿದೆ ಪದ್ಮಾ ಶಿವಮೊಗ್ಗ ನಟಿಸಿದ್ದು ನಾರಾಯಣ್ ಭಟ್, ಮೋಹನ್ ಲಾಲ್ ಪ್ರಮುಖ ನಟರು. ನಿರ್ದೇಶಕ ನಂದೀಶ್ವರ್ ಈ ಹಿಂದೆ “ನರ್ಸಜ್ಜನ ಸರ್ಜರಿ’ ಚಿತ್ರವನ್ನು ನಿರ್ದೇಶನ ಮಾಡಿದ್ದರು.

 

@ ಸುನೀಲ ಜವಳಿ

Tags

Related Articles

Leave a Reply

Your email address will not be published. Required fields are marked *