ಸುದ್ದಿಗಳು

ವೈರಲ್ ಆಯ್ತು ಸುಹಾನಾ ಖಾನ್ ಎಟಿಎಂ ಕಾರ್ಡ್ ಸೆಲ್ಫಿ!

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಇತ್ತೀಚಿನ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಆದರೆ ಇಂಟ್ರೆಸ್ಟಿಂಗ್ ವಿಚಾರ ಎಂದರೆ ಇದೆಲ್ಲದರ ನಡುವೆಯೂ ಶಾರೂಖ್ ಸುದ್ದಿಯಲ್ಲಿದ್ದಾರೆ. ಹೌದಾ ಎಂದು ಚಕಿತರಾಗಬೇಡಿ! ಯಾಕೆಂದರೆ ಸುದ್ದಿಯಲ್ಲಿರುವುದು ಸುಹಾನಾ ಖಾನ್. ಆದರೆ ಈಕೆ ಶಾರೂಖ್ ಪುತ್ರಿಯಾದ್ದರಿಂದ ಶಾರೂಖ್ ಸಹ ಚರ್ಚೆಯಲ್ಲಿದ್ದಾರೆ.

ಹೌದು, ಸುಹಾನಾ ಖಾನ್ ಸದ್ಯ ಲಂಡನ್ ನಲ್ಲಿದ್ದಾಳೆ. ಓದು ಮುಗಿದ ಮೇಲೆ ಬಾಲಿವುಡ್ ಎಂಟ್ರಿ ಬಗ್ಗೆ ಯೋಚನೆ ಮಾಡುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾಳೆ. ಆದ್ರೆ ಸುಹಾನಾ ಬಾಲಿವುಡ್ ಗೆ ಬರುವ ಮೊದಲೇ ಲಕ್ಷಾಂತರ ಅಭಿಮಾನಿಗಳ ಮನಸ್ಸು ಕದ್ದಿದ್ದಾಳೆ.

ಹೇಗೆ ಅಂತೀರಾ? ಆಕೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಪ್ರತಿಯೊಂದು ಫೋಟೋಗಳು ಒಂದಲ್ಲಾ ಒಂದು ಕಾರಣಕ್ಕೆ ವೈರಲ್ ಆಗುತ್ತವೆ. ಅಷ್ಟೇ ಅಲ್ಲ ಅಕೆ ಯಾವುದೇ ಪಬ್ಲಿಕ್ ಫಂಕ್ಷನ್ ಗಳಲ್ಲಿ ಭಾಗಿಯಾದರೂ ಆಕೆಯ ಡ್ರೆಸ್ ಸೆನ್ಸ್ ಎಂಥವರನ್ನು ಸೆಳೆಯುವಂತೆ ಮಾಡುತ್ತಿದೆ.

Image result for Shahrukh Khan's daughter's ATM card selfie turns viral!

ಸದ್ಯ ಸುಹಾನಾ ಕನ್ನಡಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾಳೆ. ಈ ಫೋಟೋದಲ್ಲಿ ಸುಹಾನಾ ಫೋನ್ ಹಿಂದೆ ಹಾಕಿರುವ ಎಟಿಎಂ ಕಾರ್ಡ್ ಸ್ಪಷ್ಟವಾಗಿ ಕಾಣ್ತಿದೆ. ಸುಹಾನಾ ಗ್ಲಾಮರಸ್ ಒಂದು ಕಡೆ ಸುದ್ದಿಯಾದ್ರೆ ಆಕೆ ಎಟಿಎಂ ಕಾರ್ಡ್ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಫೋನ್ ಹಿಂಭಾಗದಲ್ಲಿ ಎಟಿಎಂ ಕಾರ್ಡ್ ಇಟ್ಟುಕೊಳ್ತಾಳೆಂದು ಕೆಲವರು ಕಮೆಂಟ್ ಸಹ ಮಾಡಿದ್ದಾರೆ.

ಸದ್ದು ಮಾಡುತ್ತಿದೆ ಶಾರುಖ್ ಪುತ್ರಿಯ ಫೋಟೋ..!!!

#balkaninews #suhanakhan#atmcard #selfieviral #suhanakhaninstagram #suhanakhantwitter

Tags