ಸುದ್ದಿಗಳು

ಕ್ಯಾನ್ಸರ್ ಗೆ ಬಲಿಯಾದ ‘ಇಂಗ್ಲೀಷ್-ವಿಂಗ್ಲೀಷ್ ಪೋಷಕ ನಟಿ!

ಮುಂಬೈ,ಆ.20: ಹಿಂದಿ ಚಿತ್ರವಾದ ‘ಇಂಗ್ಲೀಷ್-ವಿಂಗ್ಲೀಷ್’ ನಲ್ಲಿ ದಿವಂಗತ ನಟಿ ಶ್ರೀದೇವಿ ಅದ್ಭುತವಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಚಿತ್ರದಲ್ಲಿ  ಶ್ರೀದೇವಿ ಸಹೋದರಿಯಾಗಿ ನಟಿಸಿದ್ದ ನಟಿಯನ್ನು ನೆನಪಿದೆಯಾ? ಅವರೇ ಸುಜಾತಾ ಕುಮಾರ್ ! ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಸುಜಾತಾ ‘ಮೆಟಾಸ್ಟಟಿಕ್’ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಸುಜಾತಾ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಫೇಸ್ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮರೆಯಾದ ತಾರೆ!!

ನಟಿ ಸುಜಾತಾ ಇನ್ನಿಲ್ಲ. ಆಗಸ್ಟ್ 19,2018 ರ ರಾತ್ರಿ 11.26ಕ್ಕೆ ಸುಜಾತಾ ನಿಧನರಾಗಿದ್ದಾರೆ. ಜೀವನ ಇನ್ಮುಂದೆ ಮೊದಲಿನಂತಿರಲು ಸಾಧ್ಯವಿಲ್ಲ. ಆಗಸ್ಟ್ 20 ರ ಬೆಳಿಗ್ಗೆ ಸುಜಾತಾ ಅಂತ್ಯಕ್ರಿಯೆ ನಡೆಯಲಿದೆ ಎಂದು ಸುಚಿತ್ರಾ ಫೇಸ್ಬುಕ್ ನಲ್ಲಿ ಹಾಕಿದ್ದಾರೆ.

ಬೆನ್ನು ಬಿಡದ ಕ್ಯಾನ್ಸರ್

ಸುಜಾತಾ ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿದ್ದರು. ಕೆಲ ಅಂಗಗಳು ಕೆಲಸ ಮಾಡುವುದು ನಿಲ್ಲಿಸಿದ್ದವು. ಇಂಗ್ಲೀಷ್-ವಿಂಗ್ಲೀಷ್ ಚಿತ್ರ ಬಿಡುಗಡೆಗೂ ಮುನ್ನ 2012ರಲ್ಲಿ ಸುಜಾತಾ ಕ್ಯಾನ್ಸರ್ ನಿಂದ ಗುಣಮುಖನಾಗಿದ್ದೇನೆಂದು ಹೇಳಿದ್ದರು. ಆದರೆ ಮತ್ತೊಮ್ಮೆ ಕ್ಯಾನ್ಸರ್ ಸುಜಾತಾ ದೇಹ ಪ್ರವೇಶ ಮಾಡಿತ್ತು. ಸುಜಾತಾ ಚಿತ್ರವಲ್ಲದೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಂಗ್ಲೀಷ್ ವಿಂಗ್ಲೀಷ್ ಮೊದಲು ಕೆಲ ಚಿತ್ರಗಳಲ್ಲೂ ಸುಜಾತಾ ನಟಿಸಿದ್ದರು. ಆದ್ರೆ ಯಾವ ಚಿತ್ರವೂ ಯಶಸ್ಸು ಕಂಡಿರಲಿಲ್ಲ. ಈ ಕ್ಯಾನ್ಸರ್ ಎಂಬ ಮಾರಕ ಖಾಯಿಲೆಯೇ ಹಾಗೆ ಒಮ್ಮೆ ಬೆಬ್ಬು ಹತ್ತಿದರೆ ಮತ್ತೆ ಅದು ಬೆನ್ನು ಬಿಡುವುದಿಲ್ಲ. ಸುಜಾತ ಅವರ ಕೊಡುಗೆ ಚಿತ್ರರಂಗಕ್ಕೆ ಅಪಾರ. ಇವರನ್ನು ಅಗಲಿದ ಇವರ ಕುಟುಂಬಕ್ಕೆ ಆ ಭಗವಂತ ಧೈರ್ಯ ತುಂಬಲಿ ಎಂದು ನಾವು ಪ್ರಾರ್ಥಿಸೋಣ..

 

Tags

Related Articles