ಸುದ್ದಿಗಳು

ನನ್ನ ಅಮ್ಮ ಸಹ ಅಂತಹ ಹೋಲಿಕೆ ಸ್ವೀಕರಿಸುವುದಿಲ್ಲ; ಸಾಹೋ ನಿರ್ದೇಶಕ ಸುಜೀತ್

ಸಾಹೋ ನಿರ್ದೇಶಕ ಸುಜೀತ್ ಇದುವರೆಗೂ ಹೆಚ್ಚು ಸಂದರ್ಶನಗಳನ್ನು ನೀಡಿಲ್ಲ, ಜೊತೆಗೆ ತನ್ನನ್ನು ಜನ ಹೇಗೆ ಗ್ರಹಿಸುತ್ತಾರೆ ಎಂಬುದರ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಇಂತಿಪ್ಪ ಸುಜೀತ್ ಇತ್ತೀಚೆಗೆ ಸಂದರ್ಶನಕ್ಕೆ ಸಿಕ್ಕಿದ್ದಾರೆ. ಆಗ ಅವರು ಹೇಳಿದ ಮಾತೊಂದು ಈಗ ಭಾರೀ ಸುದ್ದಿಯಲ್ಲಿದೆ.

ಹೌದು, ಸುಜೀತ್ ಎಸ್.ಎಸ್.ರಾಜಮೌಳಿ ಅವರೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ನನ್ನ ತಾಯಿ ಸಹ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಯಾರಾದರೂ ನನ್ನನ್ನು ರಾಜಮೌಳಿ ಅವರ ಜೊತೆ ಹೋಲಿಸಿದರೆ ನನ್ನ ತಾಯಿ ಮೊದಲು ವಾಸ್ತವವನ್ನು ನೋಡು ಎನ್ನುತ್ತಾರೆ.

ಅಷ್ಟೇ ಅಲ್ಲ, ನಾನು ರಾಜಮೌಳಿ ಅವರ ಮುಂದೆ ಅನನುಭವಿ. ಯಾವಾಗಲೂ ನಾನು ಅವರ ದೊಡ್ಡ ಅಭಿಮಾನಿಯಾಗಿ ಉಳಿಯುತ್ತೇನೆ. ಬಾಹುಬಲಿಯ ನಂತರ ನಾನು ಪ್ರಭಾಸ್ ಅವರೊಂದಿಗೆ ಚಿತ್ರ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಅವರೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ವಿನಮ್ರದಿಂದ ನುಡಿದಿದ್ದಾರೆ.

ನಾನು ಇನ್ನೂ ಕಲಿಯುತ್ತಿದ್ದೇನೆ. ಪ್ರತಿ ಚಿತ್ರದಿಂದಲೂ ಕಲಿಯುವುದು ಇರುತ್ತದೆ. ವಂಶಿ ಮತ್ತು ಪ್ರಮೋದ್ ಅವರು ನನ್ನ ಅತ್ಯುತ್ತಮ ಸ್ನೇಹಿತರು ಇದನ್ನು ಯಾರಿಗಾದರೂ ಕೇಳಿದರು ಹೇಳುತ್ತಾರೆ ಎಂಬುದನ್ನು ಸುಜೀತ್ ತಿಳಿಸಿದ್ದಾರೆ. ಜೊತೆಗೆ ತನ್ನ ತಾಯಿಗೆ, ಪ್ರಭಾಸ್ ಮತ್ತು ನಿರ್ಮಾಪಕರಿಗೆ ಸುಜೀತ್ ಕೃತಜ್ಞತೆ ಸಲ್ಲಿಸಿದ್ದಾರೆ.

ಟಾಪ್ ಲೆಸ್ ಆಗಿ ಪೋಸ್ ಕೊಟ್ಟು ವಿಶೇಷ ಸಂದೇಶ ರವಾನಿಸಿದ ಹಾಲಿವುಡ್ ಮಾಡೆಲ್

#balkaninews #saaho #directorsujeeth #ssrajamouli

Tags