ಸುದ್ದಿಗಳು

ಪ್ರಬುದ್ಧ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡ ‘ಸಾಹೋ’ ನಿರ್ದೇಶಕ

ಸುಜೀತ್ ನಿರ್ದೇಶನದ, ಪ್ರಭಾಸ್ ನಟಿಸಿರುವ ‘ಸಾಹೋ’ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಂಥ ಕಲೆಕ್ಷನ್ ಮಾಡುತ್ತಿಲ್ಲ.

ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆಯಾದ ಈ ಚಿತ್ರ ಎಲ್ಲಾ ಕಡೆಯಿಂದ ನೆಗೆಟಿವ್ ರೆಸ್ಪಾನ್ಸ್ ಪಡೆದಿದೆ.

ಚಿತ್ರ ಬಿಡುಗಡೆಯ ನಂತರ ಮೌನವಾಗಿದ್ದ ನಿರ್ದೇಶಕರು ಈಗ ಮಾಧ್ಯಮಗಳೊಂದಿಗೆ ಸಂವಹನ ನಡೆಸಿ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ವಿಮರ್ಶಕರು ಚಿತ್ರಕ್ಕೆ ರೇಟಿಂಗ್ ನೀಡುವ ಮೊದಲು ಇನ್ನೂ ಸ್ವಲ್ಪ ಸಮಯ ಕಾಯಬೇಕು. ಏಕೆಂದರೆ ತಟಸ್ಥ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ವಿಮರ್ಶಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಸುಜೀತ್ ಹೇಳಿದ್ದಾರೆ.

ಅಷ್ಟೇ ಅಲ್ಲ, ತಮ್ಮ ಚೊಚ್ಚಲ ಚಿತ್ರ ‘ರನ್ ರಾಜಾ ರನ್’ ಬ್ಲಾಕ್ಬಸ್ಟರ್  ಆಗಿರುವುದಕ್ಕೆ  ಕಾರಣರಾದ ವಿಮರ್ಶಕರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಪ್ರಶಂಸಿಸಿದ್ದಾರೆ ಸುಜೀತ್.

ವಿಮರ್ಶಕರ ಬಗ್ಗೆ ಪ್ರಬುದ್ಧ ಉತ್ತರ ಕೊಟ್ಟ ಸುಜೀತ್ ಈಗ ಮಾಧ್ಯಮ ವಲಯಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ, ಸಾಹೋ ದಿನದಿಂದ ದಿನಕ್ಕೆ ಕಲೆಕ್ಷನ್ ನಲ್ಲಿ ತೀವ್ರ ಕುಸಿತವನ್ನು ಎದುರಿಸುತ್ತಿದೆ.  ವ್ಯಾಪಾರ ವಿಶ್ಲೇಷಕರ ಪ್ರಕಾರ, ವಿತರಕರು ಶೇ.40ರಷ್ಟು ತಮ್ಮ ಹೂಡಿಕೆಯನ್ನು ಕಳೆದುಕೊಳ್ಳಬಹುದು.

ವಿಜಯ್ ದೇವರಕೊಂಡ ನೆಚ್ಚಿನ ಬಾಲಿವುಡ್ ನಟ-ನಟಿ ಯಾರು ಗೊತ್ತಾ?

#balkaninews #sujeeth #saaho #reviewers

Tags