ಸುದ್ದಿಗಳು

ನನ್ನ ಬೆಂಗಾವಲಾಗಿ ನಿಂತು ನನ್ನನ್ನು ಬೆಂಬಲಿಸಿದವರಿಗೆ ಸುಮಲತಾ ಧನ್ಯವಾದ

ಬೆಂಗಳೂರು, ಏ.20:

ನಟಿ ಸುಮಲತ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಚುನಾವಣೆ ಎದುರಿಸಿದ್ದಾರೆ. ಈ ನಟಿಗೆ ಯಶ್ ದರ್ಶನ್ ಹಾಗೂ ಪುತ್ರ ಅಭಿ ಸಾಥ್ ನೀಡಿದರು.. ಇನ್ನೂ ಕಾರ್ಯಕರ್ತರು, ಅಭಿಮಾನಿಗಳು, ಮಂಡ್ಯ ಜನತೆ ಕೂಡ ಸಾಥ್ ನೀಡಿದ್ದರು, ಇದೀಗ ಈ ವಿಚಾರವಾಗಿ ನಟಿ ತಮ್ಮ ಫೇಸ್ ಬುಕ್ ನಲ್ಲಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

Image may contain: 3 people, beard and crowd

ಪೋಸ್ಟ್ ನಲ್ಲಿ ಏನಿದೆ..?

ತುಂಬಾ ಅಭಿಮಾನಿಗಳದ್ದು ಒಂದೇ ಪ್ರಶ್ನೆ ಅಂಬರೀಶ್ ಅಭಿಮಾನಿಗಳಿಗೆ ನೀವು ಕೃತಜ್ಞತೆ ಸಲ್ಲಿಸಿಲ್ಲ ಅಂತ … ಅಂಬರೀಶ್ ಅಭಿಮಾನಿಗಳಿಗೆ ಹೇಗೆ ನಾನು ಕೃತಜ್ಞತೆ ಸಲ್ಲಿಸಲಿ ಯಾವ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ ..ಮನೆಯ ಸದಸ್ಯರು ಅಂಬರೀಶ್ ಅಭಿಮಾನಿಗಳು.. ಗೊತ್ತು ನನಗೆ ರಾಜ್ಯದ ಮೂಲೆ ಮೂಲೆಗಳಿಂದ ಅಂಬರೀಶ್ ಅಭಿಮಾನಿಗಳು ನನ್ನ ಈ ನಡೆಯನ್ನು ಮೆಚ್ಚಿ ನನ್ನನ್ನು ಹುರಿದುಂಬಿಸಿದ್ದಾರೆ ..ಮಂಡ್ಯದ ಜನತೆಯಲ್ಲಿ ಸದಾ ವಿನಂತಿಸಿಕೊಂಡಿದ್ದಾರೆ ಅಮ್ಮನನ್ನು ಗೆಲ್ಲಿಸಿ ಅತ್ತಿಗೆಯನ್ನು ಗೆಲ್ಲಿಸಿ ಅಕ್ಕನನ್ನು ಗೆಲ್ಲಿಸಿ ಎಂದು …ಈ ಪ್ರೀತಿ ಸಂಪಾದನೆ ಅಂಬರೀಶ್ ಆಸ್ತಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ನನ್ನ ಧರ್ಮ ..ಅಂಬರೀಶ್ ಅನ್ನುವ ಶಕ್ತಿಯೊಂದಿಗೆ ದರ್ಶನ್ .ಯಶ್ ಅನ್ನುವ ಶಕ್ತಿಯೂ ಒಟ್ಟಾಗಿದೆ …ಈಗ ಪ್ರತಿಯೊಬ್ಬರೂ ನಮ್ಮ ಮನೆಯ ಸದಸ್ಯರೇ ..ಆ ಸದಸ್ಯರಲ್ಲಿ ಯಾವುದೇ ಭೇದ ಭಾವಗಳಿಲ್ಲ ಎಲ್ಲರೂ ಒಟ್ಟಾಗಿ ನನ್ನ ಬೆಂಗಾವಲಾಗಿ ನಿಂತು ನನ್ನನ್ನು ಬೆಂಬಲಿಸಿದ್ದೀರಿ …ಅಷ್ಟೇ ಅಲ್ಲದೆ ನನ್ನ ಈ ನಡೆಯನ್ನು ನನ್ನ ಹೋರಾಟವನ್ನು ಮೆಚ್ಚಿ ಸಾಕಷ್ಟು ಜನ ರಾಜ್ಯದ ಮೂಲೆ ಮೂಲೆಗಳಿಂದ ನನ್ನನ್ನು ಬೆಂಬಲಿಸಿದ್ದಾರೆ ಅವರಿಗೂ ನನ್ನ ವಿಶೇಷವಾದ ಕೃತಜ್ಞತೆಗಳು

ಸುಮಲತಾ ಅಂಬರೀಶ್..

ಧನ್ಯವಾದ ಅರ್ಪಿಸಿದ ಸುಮಕ್ಕ

ಹೀಗೆ ಸುಮಲತ ಪ್ರತಿಯೊಬ್ಬರಿಗೂ ಕೂಡ ಧನ್ಯವಾದ ಅರ್ಪಿಸಿದ್ದಾರೆ. ಇನ್ನೂ  18ರಂದು ಚುನಾವಣೆ ನಡೆದಿದೆ. ಬಾರೀ ಜಿದ್ದಾ ಜಿದ್ದಿನ ಕ್ಷೇತ್ರವಾದ ಮಂಡ್ಯ ಕಡೆ ಇಡೀ ಕರ್ನಾಟಕ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಜೋಡೆತ್ತುಗಳ ಹೋರಾಟ, ಸುಮಲತ ಅವರ ಮಾತುಗಳು ನಿಜಕ್ಕೂ ಕೈ ಹಿಡಿಯುತ್ತಾ ಅನ್ನೋದನ್ನು ಫಲಿತಾಂಶ ಬರುವವರೆಗೂ ಕಾಯಬೇಕಾಗಿದೆ.

Image may contain: 5 people, people smiling, people standing, flower and outdoor

ಕೊಟ್ಟ ಮಾತಿನಂತೆ ಮಂಡ್ಯಕ್ಕೆ ತೆರಳಿ ಟೀ ಕುಡಿದ ಅಭಿಷೇಕ್ ಅಂಬರೀಶ್

#sumalthaambareesh #sandalwood #politics #mandya #sumalathaambareeshpolitics

Tags