ಸುದ್ದಿಗಳು

ಲಂಡನ್ ನಲ್ಲಿ ಸಂಸದೆ ಸುಮಲತಾ ಅಂಬರೀಷ್

ಸುಮಲತಾ ಅಂಬರೀಷ್ ಮಂಡ್ಯದ ಸಂಸದೆ. ಚಿತ್ರರಂಗದಲ್ಲೂ ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿರುವ ಸುಮಲತಾ ಸದ್ಯ ಲಂಡನ್ ಗೆ ತೆರಳಿದ್ದಾರೆ. ಲಂಡನ್‌ ನಲ್ಲಿ ಲ್ಯಾಂಬೆತ್ ಸೇತುವೆಯಲ್ಲಿ 12 ನೇ ಶತಮಾನದ ಶ್ರೀ ಬಸವಣ್ಣ ಪ್ರತಿಮೆ  ಅನಾವರಣಗೊಳಿಸಿದ್ದಾರೆ. ಈ ವಿಷಯವನ್ನು ಸ್ವತಃ ಸುಮಲತಾ ಅಂಬರೀಷ್ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ

“ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಬ್ರಿಟಿಷ್ ಸಂಸತ್ತಿಗೆ ಸಮೀಪವಿರುವ ಲಂಡನ್‌ ನ ಲ್ಯಾಂಬೆತ್ ಸೇತುವೆಯಲ್ಲಿ ಅನಾವರಣಗೊಳಿಸಿದ ನಮ್ಮ 12 ನೇ ಶತಮಾನದ ದೂರದೃಷ್ಟಿ ಮತ್ತು ಸಾಮಾಜಿಕ ಸುಧಾರಕ ಶ್ರೀ ಬಸವಣ್ಣ ಅವರ ಪ್ರತಿಮೆಗೆ ಹೂಮಾಲೆ ಮತ್ತು ಗೌರವ ಸಲ್ಲಿಸಿದ ಕ್ಷಣ.ಲಾಂಬೆತ್ತಿನ ಮಾಜಿ ಮೇಯರ್ ಆದ ನೀರಜ್ ಪಾಟೀಲ್ ಕೂಡ ಇದ್ದರು”. ಎಂದು ಬರೆದುಕೊಂಡಿದ್ದಾರೆ

ಪುಟ್ಟ ಮರಿಯ ‘ಯುವರತ್ನ’ ಕ್ರೇಜ್ ಗೆ ಫಿದಾ ಆದ ಪವರ್ ಸ್ಟಾರ್

#sumalatha #london #sumalathaambareesh

Tags