ಸುದ್ದಿಗಳು

ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂಸದೆ ಸುಮಲತಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ನಟ ರಾಕ್ ಲೈನ್ ವೆಂಕಟೇಶ್ ಸುಮಲತಾ ಅವರಿಗೆ ಸಾಥ್ ನೀಡಿದರು. ಇನ್ನೂ ಗೆದ್ದ ನಂತರದಲ್ಲಿ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಈ ಸಂಸದೆ ಭೇಟಿ ನೀಡಿದ್ದಾರೆ. ಈ ವೇಳೆ ಸುಮಾರು ಹೊತ್ತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಕಚೇರಿಗೆ ಬಂದಿದ್ದು ಯಾಕೆ..?

ಈ ವೇಳೆ ಮಾತನಾಡಿದ ಸುಮಲತಾ ಚುನಾವಣೆಯಲ್ಲಿ ಬೆಂಬಲ ಸೂಚಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಂದಿದ್ದೆ. ದೆಹಲಿಗೆ ಹೋಗಿದ್ದ ಕಾರಣ, ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಇದ್ದ ಸಮಯದಲ್ಲಿ ಬಂದು ಭೇಟಿಯಾಗಲು ಆಗಲಿಲ್ಲ. ಇಂದಿನ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಈಗ ಸಂಸದೆಯಾಗಿರುವ ಕಾರಣಕ್ಕೆ ಕ್ಷೇತ್ರದ ಕೆಲಸ ಕಾರ್ಯಗಳಿಗೆ, ಅಭಿವೃದ್ದಿ ದೃಷ್ಟಿಯಿಂದ ನಾನು ಕೇಂದ್ರ ಸರ್ಕಾರದ ಸಹಾಯ, ಬೆಂಬಲ ಕೇಳಬೇಕಾಗುತ್ತದೆ.

ಬಾಹ್ಯಾ ಬೆಂಬಲ ಅನಿವಾರ್ಯತೆ ಇಲ್ಲ

ಪ್ರಸಕ್ತ ಬಿಜೆಪಿಗೆ 300ಕ್ಕೂ ಹೆಚ್ಚು ಸಂಖ್ಯಾಬಲ ಇರುವ ಕಾರಣ, ಅವರಿಗೆ ನಮ್ಮ ಬಾಹ್ಯ ಬೆಂಬಲದ ಅನಿವಾರ್ಯತೆ ಇಲ್ಲ. ಆದರೂ ನಾನೇನಾದರೂ ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳುವ ಮುಂಚೆ ನನ್ನ ಕ್ಷೇತ್ರದ ಮತದಾರರನ್ನು ಕೇಳಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.. ಒಟ್ಟಿನಲ್ಲಿ ಅತ್ತ ಬಿಜೆಪಿಗೂ ಸೇರದೆ ಪಕ್ಷೇತರವಾಗಿಯೇ ಮುಂದುವರೆಯುವುದು ಸುಮಲತಾ ಅವರ ಉದ್ದೇಶ. ಇನ್ನೂ ಮಂಡ್ಯ ಜನತೆಯ ಹೇಳಿಕೆ ಮೇಲೆ ಇದೀಗ ಸುಮಲತ ಮುಂದುವರೆಯಲಿದ್ದಾರೆ.

ಕ್ರಿಕೆಟಿಗ ಬೂಮ್ರಾ ಹಾಗೂ ನಟಿ ಅನುಪಮ ಪರಮೇಶ್ವರನ್ ನಡುವೆ ಲವ್ವಿಡವ್ವಿ..?.

#sumalathaambarish #sumalathaambarishmovies #sumalathaambarishvisitbjpoffice

Tags