ಸುದ್ದಿಗಳು

ಚುನಾವಣಾ ಆಯೋಗಕ್ಕೆ ಸುಮಲತ ದೂರು…!!!

ಮಂಡ್ಯ ಬೆಳವಣಿಗೆಗಳ ಸಂಬಂಧ ಸದ್ಯ ಸುಮಲತ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು, ಮಾ.25:

ಲೋಕ ಸಮರದ ಕಾವು ಜೋರಾಗಿದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಂತೂ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ‌. ಅಬ್ಬರದ ಪ್ರಚಾರ ಜೋರಾಗಿದೆ. ಇನ್ನೂ ಅಷ್ಟೇ ಅಲ್ಲ ಈ ಬಾರಿ ಮಂಡ್ಯದಲ್ಲಿ ಸ್ಟಾರ್ ಸ್ಪರ್ಧೆ ಏರ್ಪಟ್ಟಿದೆ. ಇದೀಗ ದಿನಕ್ಕೊಂದು ಮಾತುಗಳು, ದಿನಕ್ಕೊಂದು ಬೆಳವಣಿಗೆಗಳ ಸಂಬಂಧ ನಟಿ ಸುಮಲತ ಚುನಾವಣಾ ಆಯೋಗಕ್ಕೆ ದೂರು ದಾಖಲು ಮಾಡಿದ್ದಾರೆ.

ಅಧಿಕಾರ ದುರುಪಯೋಗವಾಗುತ್ತಿದೆ

ಹೌದು, ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ ಸುಮಲತಾ ಅಂಬರೀಶ್. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಸುಮಲತಾ ಅಂಬರೀಶ್. ಮಂಡ್ಯದಲ್ಲಿ ಅಧಿಕಾರ ದುರ್ಬಳಕೆ‌ ಮಾಡಿಕೊಳ್ಳಲಾಗುತ್ತಿದೆ. ವಿರೋಧಿ ಅಭ್ಯರ್ಥಿಗಳು ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸುಮಲತಾ ಅಂಬರೀಶ್ ರಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದರು.

ಹೆಚ್ಚಿನ ಭದ್ರತೆಗೆ ಮನವಿ

ಇನ್ನೂ ದೂರಿನ ಬಳಿಕ ಮಾತನಾಡಿದ  ಸುಮಲತಾ ಅಂಬರೀಶ್, ನಮಗೆ ಬೆದರಿಕೆ ಇದೆ. ‌ರಕ್ಷಣೆ ಇಲ್ಲದಂತೆ ಆಗಿದೆ ನನ್ನ ಫೋನ್ ಕೂಡ ಟ್ಯಾಪ್ ಆಗ್ತಿದೆ.‌ ಅಧಿಕಾರಿಗಳನ್ನೂ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದೇನೆ. ನನ್ನ‌ ಮನೆ ಸುತ್ತ ಗೂಢಚಾರರು ಓಡಾಡ್ತಾ ಇದ್ದಾರೆ. ನಮ್ಮ ಕಾರ್ಯಕರ್ತರು ಎಲ್ಲಿ ಹೋಗ್ತಾರೆ, ನಾನು ಎಲ್ಲಿ ಹೋಗ್ತೀನಿ, ಯಾರ ಹತ್ರ ಮಾತಾಡ್ತೀನಿ ಅಂತಾ ಗೂಢಚರ್ಯೆ ಮಾಡ್ತಿದ್ದಾರೆ. ಈ ವಿಚಾರವನ್ನು ಮುಖ್ಯ ಚುನಾವಣಾಧಿಕಾರಿ ಗಮನಕ್ಕೆ ತಂದಿದ್ದೇನೆ. ಆಡಿಯೋ ವಿಚಾರ ನಾನು ನೋಡಿದ್ದೇನೆ. ಈಗಿನ ಟೆಕ್ನಾಲಜಿಯಲ್ಲಿ ಯಾರೂ ಯಾರ ಆಡಿಯೋ ಬಗ್ಗೆಯಾದ್ರೂ ಮಾತ್ರ ಮಾಡಬಹುದು. ಸಿಎಂ ಸ್ಥಾನದ ಘನತೆಗೆ ತಕ್ಕದ್ದಲ್ಲ ಆಡಿಯೋ ವಿಚಾರ. ಜನ ತೀರ್ಮಾನ ಮಾಡ್ತಾರೆ ಅಂತಾ ಹೇಳಿದರು.

ಮರದ ಕೆಳಗೆ ಊಟ ಮಾಡಿದ ಪವನ್ ಕಲ್ಯಾಣ್ ವಿಡಿಯೋ ವೈರಲ್

#balkaninews #sumalatha #sumalathapolitics #electioncommission #sandalwood #mandyapolitics

Tags