ಸುದ್ದಿಗಳು

ನಾಳೆಯಿಂದ ಅಂಬರೀಶ್ ಫ್ಯಾಮಿಲಿ ಪ್ಯಾಕೇಜ್ ಶುರು..!!!

ಒಂದಾದರಂತೆ ಒಂದೊಂದೇ ವಿಷಯಗಳು ಬರಲಿವೆ

ಬೆಂಗಳೂರು.ಮೇ.22: ಕೆಲವೊಮ್ಮೆ ಇಂತಹ ಘಟನೆಗಳು ನಡೆಯುವುದು ಬಹಳ ಅಪರೂಪ. ಸ್ಯಾಂಡಲ್ ವುಡ್ ಇದೀಗ ಅಪರೂಪದ ಘಟನೆಗಳಿಗೇ ಶಾಕ್ಷಿಯಾಗುತ್ತಿದೆ. ಏನು ಎಂದರೆ, ನಾಳೆಯಿಂದ ಪೂರ್ತಿ ಅಂಬರೀಶ್ ಫ್ಯಾಮಿಲಿ ಹಬ್ಬವಾಗಿರುತ್ತದೆ.

ಹೌದು, ಈ ತಿಂಗಳು ಪೂರ್ತಿ, ಅಂದರೆ ನಾಳೆಯಿಂದ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬದ ವಿಚಾರಗಳು ಮತ್ತು ಸಿನಿಮಾಗಳು ಸದ್ದು ಮಾಡುತ್ತವೆ. ಒಂದು ಕಡೆ ಸುಮಲತಾರ ರಾಜಕೀಯ ಭವಿಷ್ಯದೊಂದಿಗೆ ಸಿನಿಮಾಗಳ ಭವಿಷ್ಯಗಳು ಸಹ ನಿರ್ಧಾರವಾಗುವ ದಿನಗಳು ಬಂದಿವೆ.

Image result for sumalatha politics

 

ಮಂಡ್ಯದ ಲೋಕಸಭಾ ಚುನಾವಣೆಯು ಇಡೀ ದೇಶದ ತುಂಬಾ ಬಾರೀ ಸದ್ದು ಮಾಡಿತ್ತು. ಸ್ಪರ್ಧಿಗಳಾದ ನಿಖಿಲ್ ಕುಮಾರ್ ಸ್ವಾಮಿ ಮತ್ತು ಸುಮಲತಾರ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು. ಇವರಲ್ಲಿ ನಿಖಿಲ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದರೆ, ಸುಮಲತಾ ಸ್ವತಂತ್ರ ಪಕ್ಷದ ಅಭ್ಯರ್ಥಿಗಳಾಗಿದ್ದರು. ನಾಳೆ ಚುನಾವಣೆಯ ಫಲಿತಾಂಶ.. ಹೀಗಾಗಿ ಗೆಲುವು ಯಾರ ಪಾಲಾಗಲಿದೆ ಎಂಬುದು ಕುತೂಹಲವಿದೆ.

ಇನ್ನು ಶುಕ್ರವಾರ, ಸುಮಲತಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಮತ್ತು ಹರಿಪ್ರಿಯಾ ವೃತ್ತಿ ಬದುಕಿನ 25 ನೇ ಸಿನಿಮಾ ‘ಡಾಟರ್ ಆಫ್ ಪಾರ್ವತಮ್ಮ’ ಕೂಡಾ ಭರ್ಜರಿಯಾಗಿ ತೆರೆಗೆ ಬರುತ್ತಿದೆ. ಬರೀ ಇದೊಂದೇ ಆಗಿದ್ದರೆ, ವಿಶೇಷವೆನಿಸುತ್ತಿರಲಿಲ್ಲ, ಮೇ 31 ರಂದು ಅಭಿಷೇಕ್ ನಟನೆಯ ಚೊಚ್ಚಲ ಸಿನಿಮಾ ‘ಅಮರ್’ ಕೂಡಾ ತೆರೆಗೆ ಬರುತ್ತಿದೆ.

ಇದಷ್ಟೇ ಅಲ್ಲದೇ, ಅಂಬರೀಶ್ ರ ಜನ್ಮದಿನ ಕೂಡಾ ಇದೇ ತಿಂಗಳ 29 ರಂದು ಬಂದಿದೆ. ಅವರಿಂದು ದೈಹಿಕವಾಗಿ ಜೊತೆಯಲ್ಲಿ ಇದ್ದದಿದ್ದರೂ ಮಾನಸಿಕವಾಗಿ ಜೊತೆಯಾಗಿದ್ದಾರೆ. ಹೀಗಾಗಿ ಅವರು ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಅಂತ’ ಆಧುನಿಕ ತಂತ್ರಜ್ಞಾನದಲ್ಲಿ ಮರು ಬಿಡುಗಡೆ ಕಾಣುತ್ತಿದೆ. ಹೀಗಾಗಿ ಒಂದೇ ವಾರದ ಅಂತರದಲ್ಲಿ ಅಪ್ಪ-ಮಗನ ಸಿನಿಮಾಗಳು ತೆರೆಗೆ ಬರುತ್ತಿರುವುದು ವಿಶೇಷ.

‘ಅಂತ’ ಚಿತ್ರವು ಕಳೆದ 38 ವರ್ಷಗಳ ಹಿಂದೆ ತೆರೆಗೆ ಬಂದು ಭರ್ಜರಿ ಯಶಸ್ಸು ಪಡೆದಿತ್ತು. ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಹೀಗಾಗಿ ಈ ಚಿತ್ರದ ಬಗ್ಗೆಯೂ ಕುತೂಹಲವಿದೆ.

ಈ ವಾರ `ವೀಕೆಂಡ್’ ರಹಸ್ಯದ ಅನಾವರಣ!

#sumalatha,#family, #packege, #balkaninews #ambarish, #abhishek, #kannadasuddigalu, #filmnews, #d/oparvathamma,

Tags