ಸುದ್ದಿಗಳು

ಸಿದ್ದರಾಮಯ್ಯರವರನ್ನು ಭೇಟಿಯಾದ ಸುಮಲತ

ಬೆಂಗಳೂರು, ಫೆ.21:

ಲೋಕಸಭಾ ಚುನಾವಣೆಗೆ ಇನ್ನೇನು ಕಲವೇ ತಿಂಗಳುಗಳು ಬಾಕಿ ಇದೆ. ಹೀಗಿರುವಾಗ ಈಗಾಗಲೇ ಪಕ್ಷಗಳು ಕೂಡ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಚಾರ ಕಾರ್ಯದ ಸಿದ್ದತೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ‌. ಈಗಾಗಲೇ ಕೆಲವೊಂದು ಕ್ಷೇತ್ರಗಳನ್ನು ಹೊರತುಪಡಿಸಿದ್ರೆ ಉಳಿದಂತೆ ಇನ್ನು ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನು ಮುಗಿದಿಲ್ಲ. ಅದರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಕೂಡ ಒಂದು.

ಸಿದ್ದರಾಮಯ್ಯ ಬಳಿ ಸುಮಲತ ಮಾತು

ಹೌದು, ಸದ್ಯ ಬಾರೀ ಸುದ್ದಿಯಲ್ಲಿರುವ ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ದಟ್ಟವಾಗಿದೆ. ಈ ಬೆನ್ನಲ್ಲೇ ನಿನ್ನೆ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಇನ್ನು ಭೇಟಿ ಬಳಿಕ ಸುಮಲತ ಮಾತನಾಡಿದ್ದು ಮಂಡ್ಯ ಅಭಿಮಾನಿಗಳು ಬಹಳಷ್ಟು ಒತ್ತಾಯ ಮಾಡಿದ್ದಾರೆ.

ಅವರ ಅನಿಸಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಬೇಕು ಅಂತ ತೀರ್ಮಾನಿಸಿದ್ದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಭೇಟಿ ಮಾಡಿದ್ದೇನೆ. ಅಭಿಮಾನಿಗಳ ಅಪೇಕ್ಷೆ ಏನೂ ಅನ್ನೋದನ್ನು ಸಿದ್ದರಾಮಯ್ಯ ಮುಂದೆ ಹೇಳಿದ್ದೇನೆ. ಸಿದ್ದರಾಮಯ್ಯ ಈ ಬಗ್ಗೆ ಯೋಚನೆ ಮಾಡುವುದಾಗಿ ತಿಳಿಸಿದ್ದಾರೆ.

ಜನರ ಭಾವನೆಗಳಿಗೆ ಮನ್ನಣೆ ಕೊಡಬೇಕು

ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಏನಿದೆ ಎನ್ನೋದನ್ನು ತಿಳಿದುಕೊಳ್ಳಬೇಕಿದೆ. ಹೀಗಾಗಿ ನಾನು ಅರ್ಜೆಂಟ್ ಮಾಡೋದಿಲ್ಲ. ಮೈತ್ರಿ ವಿಚಾರಕ್ಕೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕಾದರೆ ಆಗ ನಾನು ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡ್ತೀನಿ. ಮಂಡ್ಯದ ಜನರ ಅಭಿಪ್ರಾಯವೇ ಹಂಡ್ರೆಡ್ ಪರ್ಸೆಂಟ್ ಅಂತಿಮ. ಏನೇ ಪರಿಸ್ಥಿತಿ ನಿರ್ಮಾಣವಾದರೂ ಕೂಡ ಜನರ ಅಭಿಪ್ರಾಯವೇ ಅಂತಿಮ. ಪಕ್ಷ ಹೆಲ್ಪ್ ಲೆಸ್ ಅನ್ನುವ ಸಂದರ್ಭ ಬಂದರೂ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡ್ತೀನಿ. ಮಂಡ್ಯದ ಬೆಂಬಲಿಗರು ಆಸೆ ಇಟ್ಟುಕೊಂಡಿದ್ದಾರೆ. ಅವರ ಅನಿಸಿಕೆಯ ಬಗ್ಗೆ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ. ಅಂಬಿ ಅಭಿಮಾನಿಗಳು,ಜನರ ಮನವಿ ಮುಂದಿಟ್ಟಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಿರುವ ಪರಿಸ್ಥಿತಿಯಿಂದ ಕುಳಿತು ಚರ್ಚೆ ಮಾಡುತ್ತೇವೆ ಅಂದಿದ್ದಾರೆ.

ನಾನು ಇದೇ ಪಕ್ಷದಲ್ಲಿ ಇರುತ್ತೇನೆ

ನಾನು ಮೊದಲು ಪಕ್ಷದ ತೀರ್ಮಾನಕ್ಕೆ ಗಮನವಿಟ್ಟಿದ್ದೇನೆ. ಅಂಬಿಯಂತೆ ನೀವು ಮುಂದುವರಿಸಿಕೊಂಡು ಹೋಗಿ ಅಂತ ಜನ ತೀರ್ಮಾನಿಸಿದ್ದಾರೆ‌. ನನಗೆ ಜನರ ಅಭಿಪ್ರಾಯವೇ ಅಂತಿಮ. ನಾನು ಈ ದಿಕ್ಕಿನಲ್ಲಿ ಯಾವತ್ತೂ ಯೋಚನೆ ಮಾಡಿರಲಿಲ್ಲ. ಜನರ ಅನಿಸಿಕೆಯಂತೆ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ.

ಪಕ್ಷದಲ್ಲಿದ್ದಾಗ ನಾಯಕರ ತೀರ್ಮಾನ ಅಂತಿಮವಾಗುತ್ತದೆ. ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ನೆಲೆಯಿದೆ. ಎಲ್ಲರ ವಿಶ್ವಾಸ ತೆಗೆದುಕೊಂಡು ಮುಂದುವರಿಯುತ್ತೇನೆ. ಮಂಡ್ಯ ಜನರ ಋಣ ತೀರಿಸುವುದೇ ನನ್ನ ಕಾಯಕ. 25 ವರ್ಷಗಳಿಂದ ಅವರು ಅಂಬಿ ಮೇಲೆ ಅಭಿಮಾನ ಇಟ್ಟಿದ್ದಾರೆ. ಅವರು ಅಭಿಮಾನ ಅಭಿಷೇಕ್ ಮೇಲೂ ಇದೆ.

ನಾವು ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದೇವೆ. ಹೀಗಾಗಿಯೇ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ. ಅದು ಬಿಟ್ಟು ಬೇರೆ ಕಡೆ ಹೋಗುವ ಚಿಂತನೆಯಿಲ್ಲ. ಪಕ್ಷದಿಂದ ಭರವಸೆಗೆ ಮೊದಲು ಆಧ್ಯತೆ ನೀಡುತ್ತೇನೆ. ನಂತರ ಮುಂದೆ ನೋಡಿ ತೀರ್ಮಾನಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.

‘ರಾಜಸ್ಥಾನ್ ಡೈರಿಸ್’ ನಲ್ಲಿ ಮಾನ್ವಿತಾ ಹರೀಶ್!!

#sandalwood #sumalathaambareesh #balkaninews #politics #siddaramaiah #sumalathaambareeshpolitics

Tags

Related Articles