ಸುದ್ದಿಗಳು

ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯನವರೇ ಕಾರಣ – ಜಗದೀಶ್ ಶೆಟ್ಟರ್..!

ಹುಬ್ಬಳ್ಳಿ.ಮೇ.14: ಇಂದು ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಸುದ್ದೀಗೋಷ್ಟಿ ಏರ್ಪಡಿಸಿದ್ದರು. ಈ ವೇಳೆ ಮಂಡ್ಯದ ಲೋಕಸಭಾ ಕ್ಷೇತ್ರದ ಕುರಿತಂತೆ ಮಾತನಾಡಿದ್ದಾರೆ.

Image result for jagadeesh shettar

“ಸರ್ಕಾರಕ್ಕೆ ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಸಮಯ ನಿಗದಿ ಮಾಡಿ ಬಟನ್ ಒತ್ತಿದ್ರೆ ಬಾಂಬ್ ಸ್ಪೋಟ್ ಆಗುತ್ತದೆ . ಅದೇ ರೀತಿ ಮೇ 23 ರ ಫಲಿತಾಂಶ ಬಂದ ಬಳಿಕಸಿದ್ದರಾಮಯ್ಯ ಆ ಬಾಂಬ್ ಅನ್ನು ಬಟನ್ ಒತ್ತುತ್ತಾರೆ. ಸದ್ಯ ಮೈತ್ರಿ ಸರ್ಕಾರದ ಎಲ್ಲ ಗೊಂದಲಗಳ ಕೇಂದ್ರ ಬಿಂದು ಸಿದ್ದರಾಮಯ್ಯ. ಅಷ್ಟೇ ಅಲ್ಲದೇ ಸುಮಲತಾ ಅಂಬರೀಶ್ ರ ಸ್ಪರ್ಧೆ ಹಿಂದೆಯೂ ಇದ್ದಾರೆ’ ಎಂದಿದ್ದಾರೆ.

Image result for sumalatha

ಹೌದು, ಸುಮಲತಾ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಸಿದ್ದರಾಮಯ್ಯ ಆಪ್ತರೆಲ್ಲ ಸುಮಲತಾ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದೆ ಇದಕ್ಕೆ ಸಾಕ್ಷಿ ನಿಖಿಲ ಆರಿಸಿ ಬರುವುದು ಸಿದ್ದರಾಮಯ್ಯಗೆ ಬೇಕಾಗಿಲ್ಲ. ಮೈತ್ರಿಯಲ್ಲಿನ ಮುಸುಕಿನ ಗುದ್ದಾಟ ಈಗ ಹೊರಗೆ ಬರ್ತಾ ಇದೆ’ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿಗೆ ಕೀರ್ತಿ ಸುರೇಶ್..?

#sumalatha, #political, #siddaramaiah, #balkaninews

Tags

Related Articles