ಸುದ್ದಿಗಳು

ಯಶಸ್ವಿಯಾಯ್ತು ಸುಮಲತಾರವರ ‘ಸ್ವಾಭಿಮಾನಿ ಸಮ್ಮಿಲನ’

ಮಂಡ್ಯ, ಏ.16:

ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಇಂದು ಕೊನೆಯ ದಿನ. ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಬೀಳಲಿದೆ. ಈಗಾಗಲೇ ಅಭ್ಯರ್ಥಿಗಳ ಪ್ರಚಾರ ಭರದಿಂದ ಸಾಗಿದೆ. ಇನ್ನೂ ಹೈ ವೋಲ್ಟೇಜ್ ಕ್ಷೇತ್ರವಾದ ಮಂಡ್ಯದಲ್ಲೂ ಸುಮಲತ ಅಬ್ಬರದ ಪ್ರಚಾರದ ನಡೆಸಿದರು. ಇದೇ ವೇಳೆ ಸ್ವಾಭಿಮಾನಿ ಸಮ್ಮಿಲನ  ಎನ್ನುವ ಟೈಟಲ್ ಇಟ್ಟುಕೊಂಡು ರೋಡ್ ಶೋ ನಡೆಸಲಾಯ್ತು. ಈ ವೇಳೆ ಜೋಡೆತ್ತುಗಳ ಪ್ರಚಾರಕ್ಕೆ ಜನ ಸಾಗರವೇ ಹರಿದು ಬಂದಿತ್ತು.

ಸುಮಲತ ಹಿಂದೆ ಜನ ಸಾಗರ

ರೋಡ್ ಶೋನಲ್ಲಿ ದರ್ಶನ್, ಯಶ್, ಸುನೀತಾ ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ, ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಾಳಿಕಾಂಬ ದೇವಸ್ಥಾನದಿಂದ ರೋಡ್‌ ಶೋ ಮೂಲಕ ಸಿಲ್ವರ್ ಜುಬ್ಲಿ ಮೈದಾನದಲ್ಲಿ ಪ್ರಚಾರ ಸಭೆ ನಡೆಸಿದ್ರು.. ಈ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಸಮ್ಮಿಲನಕ್ಕೆ  ಜನ ಸಾಗರವೇ ಹರಿದು ಬರುತ್ತಿದೆ. ಜನಪದ ಕಲಾವಿದರು ಮತ್ತು ವಾದ್ಯದವರು ಸುಮಲತಾ, ದರ್ಶನ್ ಮತ್ತು ಯಶ್ ಅವರನ್ನು ಸ್ವಾಗತಿಸಿದ್ರು. ಇತ್ತ ಸಮಾವೇಶಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದು, ಸಮಾವೇಶದ ಕುರ್ಚಿಗಳು ಭರ್ತಿಯಾಗಿ ಜನರು ನಿಂತಿದ್ದಾರೆ. ಸಮಾವೇಶದಲ್ಲೂ ರೈತ ಸಂಘ ಮತ್ತು ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.

ದಯವಿಟ್ಟು ಮತ ಹಾಕಿ ಎಂದ ಯಶ್

ಇನ್ನೂ ಸಿಲ್ವರ್ ಜುಬ್ಲಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದೇ ವೇಳೆ ಮಾತನಾಡಿದ ಯಶ್, ಸ್ವಾಭಿಮಾನ ಇರುವವರು ಇಲ್ಲಿ ಬಂದು ನಿಲ್ಲೋದು, ಮೊಬೈಲ್ ನಲ್ಲಿ ಆಫರ್ ಕೊಟ್ಟೋವ್ರು ಬಿಸಿಲಿರುತ್ತೆ ಅಂತಾರೆ, ಮೊದಲು ಪೇಮೆಂಟ್ ಕೊಡಿ ಅಂತಾರೆ. ರ‍್ಯಾಲಿಯಲ್ಲಿ ನೋಡಿದ್ದೇವೆ. ಬೆವರು ಸುರಿಸಿ ದುಡಿದವರು ದುಡ್ಡು ನೀಡಿದ್ದಾರೆ. ದುಡಿದ ದುಡ್ಡಲ್ಲಿ ಎಳನೀರು ಜ್ಯುಸ್ ಕೊಟ್ಟಿದ್ದಾರೆ. ಯಾವನೇನಾದ್ರೂ ಅಭಿಮಾನಿದ ಬಗ್ಗೆ ಮಾತನಾಡಿದ್ರೆ ಸುಮ್ಮನೆ ಇರೋದಿಲ್ಲ. ನೋಡೋಕೆ ಬರುತ್ತಾರಂತೆ ಆದರೆ ಓಟ್ ಹಾಕೋಲ್ಲವಂತೆ.. ನಮಗೂ ತಾಳ್ಮೆ ಇದೆ. ನಾವು ಪ್ರಚಾರಕ್ಕೆ ರಾಜಕೀಯಕ್ಕೆ ಹೋಗಿದ್ದೇವೆ ಯಾರು ನಮ್ಮನ್ನು ಇಷ್ಟು ಕೆಟ್ಟದಾಗಿ ಮಾತನಾಡಿಲ್ಲ.. ನಡೆಸಿಕೊಂಡಿಲ್ಲ ಅಂತಾ ಸಿಎಂಗೆ ಪರೋಕ್ಷವಾಗಿ ಟಾಂಗ್ ಕೊಟ್ರು. ದಯವಿಟ್ಟು ಮತ ಹಾಕಿ ನಿಮ್ಮ ಆಶಿರ್ವಾದ ಇರಲಿ ಎಂದರು.

ನನ್ನಂತ ಕಚಡ ಇನ್ಯಾರು ಇಲ್ಲ ಎಂದ ದರ್ಶನ್

ಇನ್ನು ದರ್ಶನ್ ಮಾತನಾಡಿ, ಏನು ಐಟಿ ರೈಡ್, ಏನಣ್ಣ ಐಟಿ ರೈಡ್.. ನಮ್ಮ ತೋಟದಲ್ಲಿ ಐಟಿ ರೈಡ್ ಆಯ್ತು.. ನಮ್ಮ ತೋಟದಲ್ಲಿ ಡೈರಿ ಸಿಕ್ತು. ಅದರಲ್ಲಿ ಪ್ರಾಣಿಗಳ ಬಗ್ಗೆ ಬರೆದಿಟ್ಟಿದ್ದೇನೆ ಅಷ್ಟೇ. ಇಷ್ಟು ದಿನ ಮಾತನಾಡಿಲ್ಲ ಅಂತಿದ್ರು. ನನ್ನಂಥ ಕಚಡ ಮಗನನ್ನು ಇನ್ನೊಬ್ಬ ಇಲ್ಲ. ಇನ್ನು ಇದೇ ವೇಳೆ ತಂದೆ ಸಾವಿನ ದಿನಗಳನ್ನು ನೆನೆಸಿಕೊಂಡರು ನಟ ದರ್ಶನ್. ನಾನು ಅನುಭವಿಸಿದ್ದೇನೆ. ಅಮ್ಮ ಬಂದು ಹೇಳಿದಾಗಿ ನಾವು ನಿಮ್ಮ ಹಿಂದೆ ಇದ್ದೇವೆ ಎಂದು ಹೇಳಿದ್ದೇವೆ. ಮಾಡಿರುವ ಕೆಲಸ ನೋಡಿ ಓಟ್ ಕೇಳಿ.. ನೂರು ಜನ ಅವರ ಪ್ರಚಾರದಲ್ಲಿದ್ದರೆ 10 ಜನ ಡಿ ಬಾಸ್ ಎನ್ನುತ್ತಿದ್ದರು ಅದಕ್ಕೆ ಕುಮಾರಸ್ವಾಮಿಯವರಿಗೆ ಧನ್ಯವಾದ. ನಿಲ್ಲುತ್ತೇವೆ. ಮಾಡುತ್ತೇವೆ ಅಂದಿದ್ದೆವು ಪೆರೇಡ್ ಮಾಡುತ್ತಿದ್ದೇವೆ. ಇವತ್ತಿಗೆ ನಮ್ಮ ಕೆಲಸ ಮುಗೀತು.. ನಿಮ್ಮ ಕೆಲಸ ಮುಂದಿದೆ. 2 ದಿನ ಯೋಧರ ತರ ಕೆಲಸ ಮಾಡೋಣ.. ನಿಮ್ಮ ಕಾಲು ಮುಗಿದು ಕೇಳುತ್ತೇನೆ ದಯವಿಟ್ಟು ಅಮ್ಮನಿಗೆ ಓಟ್ ಹಾಕಿ ಎಂದರು.

ಚುನಾವಣೆ ಬಗ್ಗೆ ಸುಮಲತ ಮಾತು

ಇನ್ನು ನಂತರ ಮಾತನಾಡಿದ ಅಭ್ಯರ್ಥಿ ಸುಮಲತ, ನನ್ನ ಬೆಂಬಲಕ್ಕೆ ಇಂದು ನಿಂತಿದ್ದೀರಾ, ನಿಮ್ಮ ಜೊತೆಯಲ್ಲಿಯೇ ಇರ್ತೇನೆ. ನಾಲ್ಕು ವಾರದಲ್ಲಿ ನೋಡುತ್ತಿದ್ದೇನೆ. ಸಮಸ್ಯೆ ಏನಿದೆ. ಈ ಬಗ್ಗೆ ಏನು ಮಾಡಬೇಕು.. ನಿಮ್ಮಿಂದ ನಮಗೆ ಉಪಕಾರ ಆಗಬೇಕು. ಸುಳ್ಳು ಭರವಸೆ ನೀಡಿ ಹೋಗಿದ್ದಾರೆ, ರಸ್ತೆ ಹಾಕಿಸಿಕೊಡಿ ಎಂದಿದ್ದಾರೆ. ಕೆರೆ ನೀರಿಲ್ಲ ವ್ಯವಸ್ಥೆ ಮಾಡಿ ಎಂದಿದ್ದಾರೆ. ಮಾಡುತ್ತೇನೆ. ನನ್ನ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡದಂತಹ ಮಾತುಗಳು ಮಾತನಾಡಿದ್ದಾರೆ. ನನ್ನ ಮಕ್ಕಳಾಗಿ ದರ್ಶನ್ ಯಶ್ ಬಂದಿದ್ದಾರೆ. ಇವರ ಫ್ಯಾಮಿಲಿ ಪೂರ್ತಿ ಬಂದಿದ್ದಾರೆ.. ನಾವೇನಾದ್ರೂ ಮಾತನಾಡಿದ್ದೇವಾ..? ನನಗೆ ನೋವಿದೆ ಅದು ನನಗೆ ಮಾತ್ರಗೊತ್ತು.. ನಾವು ಹೇಳೋದನ್ನು ಬಿಟ್ಟು ಅವರ ಕಣ್ಣೀರು ಹೊರೆಸಬೇಕು.. ಸಿನಿಮಾ ರಂಗದವರನ್ನು ಪಾಯಿಂಟ್ ಔಟ್ ಮಾಡುವಾಗ ನಿಮ್ಮ ಕಡೆ ಮೂರು ಬೆರಳುಇರುತ್ತೆ. ಸಿನಿಮಾ ರಂಗದಲ್ಲಿ ಮಾನವೀಯತೆ ಇದೆ. ಇವೆರೆಲ್ಲಾ ನನ್ನ ಜೊತೆ ಬಂದಿದ್ದಾರೆ. ಎಷ್ಟು ತೊಂದರೆ ಕೊಡ್ತಿದ್ದಾರೆ ಅವರಿಗೆಲ್ಲ.. ಚಿತ್ರ ಹಿಂಸೆಯ ಮಾತನಾಡಿದ್ದಾರೆ. ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಿದರು. ಆದರೆ ಇವರಿಬ್ಬರು ಅವರ ವೈಯಕ್ತಿಕ ಬಗ್ಗೆ ಮಾತನಾಡೋದಿಕ್ಕೆ ಒಂದೇ ನಿಮಿಷ ಸಾಕು. ದಯವಿಟ್ಟು ಮತ ಹಾಕಿ ಎಂದು ಕೇಳೀ ಕೊಂಡಿದ್ದಾರೆ.

ಮತದಾನದ ಅರಿವು ಮೂಡಿಸುವ ‘ಕೊನೆ ಆಸೆ’ ಕಿರುಚಿತ್ರ

#balkaninews #sumaltha #yashanddarshan #sumalathaambareesh #yashpolitics #mandyapolitics

Tags