ಸುದ್ದಿಗಳು

ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸಂಸದೆ ಸುಮಲತಾ ಅಂಬರೀಶ್

ಮಂಡ್ಯ ಲೋಕಸಭಾ ಕ್ಷೇತ್ರದ ನೂತನ ಸಂಸದೆ, ನಟಿ ಸುಮಲತಾ ಅಂಬರೀಶ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ನವಂಬರ್ 24 ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಭೀಕರ ಬಸ್‌ ದುರಂತದಲ್ಲಿ ಮೃತಪಟ್ಟ 30 ಮಂದಿ ಕುಟುಂಬದ ಅವಲಂಬಿತರಿಗೆ ಕೇಂದ್ರ ಸರಕಾರ ತಲಾ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದ್ದಕ್ಕಾಗಿ ಸುಮಲತಾ ಕೇಂದ್ರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಟ್ವೀಟ್ ಮಾಡಿರುವ ಸುಮಲತಾ ‘ಮಂಡ್ಯ ಬಸ್ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನೆರವಾಗಲು ಮುಂದೆ ಬಂದಿರುವ ಮೋದಿಜೀ ಮತ್ತು ಕೇಂದ್ರ ಸರ್ಕಾರಕ್ಕೆ ನನ್ನ ಧನ್ಯವಾದಗಳು. ಇದು ವೈಯಕ್ತಿಕವಾಗಿ ನನಗೂ ನೋವು ತಂದ ಘಟನೆ. ನವೆಂಬರ್ 24 ರಂದು ನಡೆದ ದುರಂತ ಯಾರೂ ಮರೆಯಲಾಗದು’ ಎಂದು ಬರೆದುಕೊಂಡಿದ್ದಾರೆ.

ಸುಮಲತಾರನ್ನು ಹೊಗಳಿ, ನಿಖಿಲ್ ಗೆ ಟಾಂಗ್ ಕೊಟ್ಟ ಸಚಿವ ಸದಾನಂದ ಗೌಡ

#balkaninews #sumalatha #narendramodi #compensation #sumalathainstagram #sumalathatwitter #sumalathafacebook

Tags