ಸುದ್ದಿಗಳು

ಚುನಾವಣೆ ಎಫೆಕ್ಟ್: ಸುಮಲತಾ ಅಂಬರೀಶ್ ಫೇಸ್ಬುಕ್ ಖಾತೆ ಬ್ಲ್ಯಾಕ್..!!!

ಹೊಸ ಖಾತೆಯನ್ನು ಪ್ರಾರಂಭಿಸಿ, ವಿಡಿಯೋ ಮಾಡಿದ ಸುಮಲತಾ

ಬೆಂಗಳೂರು.ಏ.16: ನಾಡಿದ್ದು ಪ್ರಥಮ್ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಇನ್ನು ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರ್ ಹಾಗೂ ಸುಮಲತಾ ಅಂಬರೀಶ್ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿರುವುದು ಎಲ್ಲರಿಗೂ ತಿಳಿದೇ ಇದೆ.

ಒಂದು ಹಂತದಲ್ಲಿ ಮಂಡ್ಯದ ಕ್ಷೇತ್ರಕ್ಕಾಗಿ ಸ್ಪರ್ಧಿಸಿರುವ ಸಮಲತಾ ಅಂಬರೀಶ್ ಅವರನ್ನು ಸೋಲಿಸಲೇ ಬೇಕೆಂದು ಕುಮಾರಸ್ವಾಮಿ ತಂಡ ಪಣ ತೊಟ್ಟಿದ್ದರೆ, ಯಶ್ ಮತ್ತು ದರ್ಶನ್ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕೆಂದು ಹಠತೊಟ್ಟು ಪ್ರಚಾರದ ಮಾಡುತ್ತಿದ್ದಾರೆ.

Image result for sumalatha political party

ಈ ನಡುವೆ ಸುಮಲತಾ ವಿರುದ್ಧ ಮಾತಿನ ಬಾಣಗಳು ಹರಿದು ಬರುತ್ತಿದ್ದರೂ ತಲೆಕೆಡಿಸಿಕೊಳ್ಳದೆ ಧೈರ್ಯವಾಗಿಯೇ ಎಲ್ಲವನ್ನು ಎದುರಿಸುತ್ತಾ ಮತಯಾಚನೆಯಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ ಅವರನ್ನು ಮಣಿಸಲು ವಿರೋಧಿ ಬಣ ಸಾಕಷ್ಟು ಕಸರತ್ತು ಮಾಡುತ್ತಿದೆ.ಇದರ ಭಾಗವಾಗಿಯೇ ಇವರ ಫೇಸ್ಬುಕ್ ಖಾತೆಯನ್ನು ಬ್ಲ್ಯಾಕ್ ಮಾಡಲಾಗಿದೆ.

“ನನ್ನ ಫೇಸ್ ಬುಕ್ ಪೇಜ್ ನ ವರ್ಜಿನಲ್ ಕುತಂತ್ರದ ಭಾಗವಾಗಿ ಬ್ಲಾಕ್ ಮಾಡಿಸಿದ್ದಾರೆ. ಇರಲಿ ಎಲ್ಲವನ್ನು ಎದುರಿಸಲು ನಾನು ತಯಾರಾಗಿದ್ದೀನೆ. ತಕ್ಷಣವೆ ನಾನು ಹೊಸ ಪೇಜ್ ಆರಂಭಿಸಿದ್ದೇನೆ” ಎಂದು ಹೇಳಿ ಫೇಸ್ ಬುಕ್ ಪೇಜ್ ಬ್ಲಾಕ್ ಆಗುತ್ತಿದಂತೆ ಹೊಸ ಪೇಜ್ ತೆರೆದಿದ್ದಾರೆ ಸುಮಲತಾ ಅಂಬರೀಶ್.

ಹೌದು, ಸುಮಲತಾ ರವರು ರಾಜಕೀಯ ವಿಚಾರವಾಗಿ ಪ್ರತೀ ದಿನದ ಬೆಳವಣಿಗೆಗಳನ್ನು ‘ಸುಮಲತಾ ಅಂಬರೀಶ್’ ಎಂಬ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡುತ್ತಿದ್ದರು. ಆದರೆ ಇದೀಗ ಫೇಸ್ ಬುಕ್ ಖಾತೆಯನ್ನು ಬ್ಲಾಕ್ ಮಾಡುವ ಮೂಲಕ ಪ್ರಚಾರದ ಅಬ್ಬರಕ್ಕೆ ಬ್ರೇಕ್ ಹಾಕಲಾಗಿದೆ.

ಸದ್ಯ ಫೇಸ್ ಬುಕ್ ಬ್ಲಾಕ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲವಾದರೂ, ಅವರು ಪುನಃ ತಮ್ಮ ಹೆಸರಿನಲ್ಲಿಯೇ ಹೊಸ ಪೇಸ್ ಬುಕ್ ಖಾತೆಯನ್ನು ಓಪನ್ ಮಾಡಿದ್ದಾರೆ. ಇನ್ನು ಈ ಹೊಸ ಪೇಜ್ ನಲ್ಲೀಗ ಪ್ರಚಾರ ಮತ್ತು ರಾಜಕೀಯ ವಿಚಾರದ ಬೆಳವಣಿಗೆಗಳನ್ನು ಶೇರ್ ಮಾಡುತ್ತಿದ್ದಾರೆ. ಇಂದು ಸ್ವಾಭಿಮಾನಿಗಳ ಸಮ್ಮಿಲನ ಹೆಸರಿನಲ್ಲಿ ಪ್ರಚಾರವಿದ್ದು, ದರ್ಶನ್ ಹಾಗೂ ಯಶ್ ಇಬ್ಬರೂ ಭಾಗವಹಿಸುತ್ತಿದ್ದಾರೆ.

ಮೇ ಅಂತ್ಯದ ವೇಳೆಗೆ ‘ರುಸ್ತುಂ’ ಬಿಡುಗಡೆ!!?!!

#sumalathaamabrish, #facebookpage, #blocked, #balkaninews #kannadasuddigalu, #filmnews, #nikhilkumar,

Tags