ಸುದ್ದಿಗಳು

ಮಂಡ್ಯದಲ್ಲಿ ಅದ್ದೂರಿಯಾಗಿ ನಡೆದ ಸ್ವಾಭಿಮಾನಿ ಸಮ್ಮಿಲನ ವಿಜಯೋತ್ಸವ

ಮಂಡ್ಯ ಜಿಲ್ಲೆಯ ಜನತೆಗೆ ಕೃತಜ್ಞತೆ ಸಮಾವೇಶ ಕಾರ್ಯಕ್ರಮದ ಹಿನ್ನೆಲೆ ನಿನ್ನೆ ಸ್ವಾಭಿಮಾನಿ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಅಂಬಿ ಹಾಗೂ ಸುಮಲತಾ ಅಭಿಮಾನಿಗಳು ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ನಡೆಯುತ್ತಿರುವ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ ಜೋಡೆತ್ತು ಎಂದೆನಿಸಿಕೊಂಡ  ದರ್ಶನ್ ಹಾಗೂ ಯಶ್ ಕೂಡ ಭಾಗಿಯಾಗಿದ್ದರು. ದೀಪ ಬೆಳಗುವುದರ ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದೊಡ್ಡಣ್ಣ ಹೇಳಿದ್ದೇನು..?

ಇನ್ನೂ ಇದೇ ವೇಳೆ ಹಿರಿಯ ನಟ ದೊಡ್ಡಣ್ಣ ಮಾತನಾಡಿ, ನಾನು ಕಳೆದ ಭಾರಿ ಹೇಳಿದ್ದೆ ಮಂಡ್ಯದ ಜನ ಅಧಿಕಾರ ಹಣಕ್ಕೆ ಬಗ್ಗುತಾರ ಅಂತಾ, ಮಂಡ್ಯದ ಜನ ಸ್ವಾಭಿಮಾನಕ್ಕೆ ಬಗ್ಗುತ್ತಾರೆ ಅನ್ನೋದನ್ನು ತೋರಿಸಿಕೊಟ್ಟಿದ್ದೀರಾ. ನಿಮಗೆ ಕೋಟಿ ಕೋಟಿ ನಮಸ್ಕಾರ. ಅಮರನಾಥ್ ಅಂತಾ ಅಂಬರೀಶ್ ತಂದೆ ಅವರಿಗೆ ಹೆಸರನ್ನು ಇಟ್ಟರೇ ಅಂಬರೀಶ್ ಅಂತಾ ಪುಟ್ಟಣ್ಣ ಕಣಗಾಲ್ ಅವರು ಹೆಸರನ್ನು ಇಟ್ಟರು. ಅಂಬರೀಶ್ ಅಂದ್ರೆ ಹೃದಯವಂತ, ಅನ್ನ ಹಾಕಿದವನು ಅಂಬರೀಶ್ ಲೋಕದಲ್ಲಿ ದುಡ್ಡಿಗೆ ಎಲ್ಲರೂ ಮರಳಾಗುತ್ತಾರೆ. ಆದ್ರೆ ಮಂಡ್ಯದ ಜನ ಆಗುವುದಿಲ್ಲಾ ಎಂದು ಹೇಳಿದರು.

ಸಾಯುವವರಿಗೂ ಅಂಬಿ ಹುಟ್ದಬ್ಬ ಮಂಡ್ಯದಲ್ಲಿ

ಇದೇ ವೇಳೆ ಮಾತನಾಡಿದ ನಟಿ ಹಾಗೂ ಸಂಸದೆ ಸುಮಲತ ನಾನು ಇಲ್ಲಿ ಸಂಭ್ರಮ ಆಚರಿಸೋಕೆ ಬಂದಿಲ್ಲ. ನನಗೆ ಇದೊಂದು ದೊಡ್ಡ ಜವಾಬ್ದಾರಿ. ನನ್ನ ಮೇಲೆ ಇದುವರೆಗೂ ಒಂದು ಕಪ್ಪು ಚುಕ್ಕೆ ಬಂದಿಲ್ಲ. ನನಗೆ ಅಂಬರೀಶ್ ಅವರೇ ದಾರಿ.

ಅಂಬರೀಶ್ ಅವರು ಯಾವತ್ತು ಯಾರಿಗೂ ಮೋಸ ಮಾಡಿಲ್ಲ. ರೈತರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುಟುಂಬ ನಮ್ಮದು. ಚುನಾವಣೆಯಲ್ಲಿ ಎಲ್ಲರೂ ಸುಳ್ಳು ಭರವಸೆ ಕೊಡ್ತಾರೆ. ಆದ್ರೆ ನಾನು ಯಾವುದೇ ಸುಳ್ಳು ಭರವಸೆ ಕೊಟ್ಟಿಲ್ಲ. ಪ್ರತಿವರ್ಷ ನೀವು ನಮ್ಮ ಮನೆಗೆ  ಬರ್ತಿದ್ರಿ. ಅಂಬರೀಶ್ ಅವರ ಹುಟ್ಟು ಹಬ್ಬವನ್ನು ಮಂಡ್ಯಕ್ಕೆ ಹಬ್ಬದ ರೀತಿ ಮಾಡ್ತಾ ಇದ್ದೀರಾ. ಪ್ರತಿವರ್ಷ ಅಂಬರೀಶ್ ಅವರ ಹುಟ್ಟು ಹಬ್ಬವನ್ನು ನಾನು ಮಂಡ್ಯದಲ್ಲೇ ಸಾಯುವವರೆಗೂ ಆಚರಣೆ ಮಾಡ್ತೀನಿ ಎಂದಿದ್ದಾರೆ.

ಸೇವೆ ಮಾಡುವ ಅವಕಾಶ ನೀಡಿ

ಚುನಾವಣೆ ಮುಗಿದಿದೆ. ದ್ವೇಷವನ್ನು ಇನ್ಮುಂದೆ ಮರೆತು ಬಿಡಿ. ನಾವೆಲ್ಲಾ ನೀರಿಗಾಗಿ ಹೋರಾಟ ಮಾಡೋಣ. ಎಲ್ಲರೂ ಒಟ್ಟಾಗಿ ಹೋರಾಡೋಣ. ನನಗೆ ಕಾಲವಾಕಾಶ ಕೊಡಿ ನಾನು ನಿಮ್ಮ ಸೇವೆ ಮಾಡ್ತೀನಿ. ಅಂಬರೀಶ್ ಅವರ ಹೆಸರನ್ನು ಉಳಿಸ್ತೀನಿ. ಅವರು ಮಾಡಿದ ಕೆಲಸವನ್ನು ಮುಂದುವರಿಸುತ್ತೇನೆ. ಮಂಡ್ಯದಲ್ಲೇ ಸಂಸದೆಯಾಗಿ ಪ್ರಮಾಣ ಸ್ವೀಕರಿಸಿದರು ಸುಮಲತಾ. ಭಾಷಣದ ವೇಳೆ ಭಾವುಕರಾದರು ಸುಮಲತಾ. ಅಭಿಷೇಕ್ ನ ಅಮರ್ ಚಿತ್ರ ನೋಡಬೇಕು ಅಂತಾ ಅಂಬರೀಶ್ ತುಂಬಾ ಆಸೆ ಹೊಂದಿದ್ರು. ಅಭಿಷೇಕ್ ಸಿನಿಮಾಗೆ ಪ್ರೋತ್ಸಾಹ ನೀಡಿ. ಯಶ್, ದರ್ಶನ್ ಥ್ಯಾಂಕ್ಸ್ ಹೇಳ್ಬೇಡಿ ಅಂತಿದ್ದಾರೆ. ಅವರಿಗೆ ನನ್ನ ಪ್ರೀತಿಯ ಆಶೀರ್ವಾದ. ವೇದಿಕೆ ಮೇಲೆ ಜೋಡೆತ್ತುಗಳನ್ನು ಜೊತೆಯಲ್ಲಿ ನಿಲ್ಲಿಸಿಕೊಂಡು ಗೆಲುವಿಗೆ ಸಹಕರಿಸಿದವರಿಗೆ ಸುಮಲತಾ ಧನ್ಯವಾದ ಅರ್ಪಣೆ ಮಾಡಿದ್ದಾರೆ.

 

‘ಅಮರ್’ ಸಿನಿಮಾದಲ್ಲಿದ್ದಾರೆ ಅಂಬರೀಶ್ ಹಾಗೂ ದರ್ಶನ್…!!!!

#balkaninews #sandalwood #mandya #sumalathapolitics #mandyapolitics #yashanddarshan

 

Tags