ಸುದ್ದಿಗಳು

‘ಮರಳಿದ ಬೆಳಕು’ ಕಿರುಚಿತ್ರದಲ್ಲಿ ಸುಮನ್ ನಗರ್ ಕರ್ ಧ್ವನಿ

ಈ ಸಾಮಾಜಿಕ ಸಿನಿಮಾ ಮಾಡಿ ಹೆಸರು ಮಾಡಬೇಕು ಎಂದು ಈ ಚಿತ್ರತಂಡಕ್ಕೆ ಯಾವುದೇ ಆಸೆ ಇಲ್ಲವಂತೆ . ಆದರೆ ಸಾಮಾಜಿಕ ಕಳಕಳಿ ಸಿನಿಮಾ ಮಾಡಿ ಈ ಸಿನಿಮಾವನ್ನು ಹಳ್ಳಿ ಹಳ್ಳಿಗಳಿಗೆ ಹೋಗಿ ಜನರಿಗೆ ತೋರಿಸಿ ಹಳ್ಳಿ ಜನರಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಈ ಸಿನಿಮಾ ತಂಡದ ಉದ್ದೇಶವಾಗಿದೆಯಂತೆ .

ಬೆಂಗಳೂರು, ಜು. 22:  ರೈತರ ಆತ್ಮಹತ್ಯೆ , ಭ್ರೂಣ ಹತ್ಯೆ, ಮಕ್ಕಳ ಶಿಕ್ಷಣ ಸಮಸ್ಯೆಗಳು ಸದ್ಯ ಸಮಾಜದಲ್ಲಿ ಕಾಡುತ್ತಿರುವ ಮುಖ್ಯವಾದ ಸಮಸ್ಯೆಯಾಗಿವೆ ಈ ವಿಚಾರಗಳನ್ನು ಕುರಿತು ಜಾಗೃತಿ ಮಾಡಿಸಲು ಒಂದು ಚಿತ್ರತಂಡ ರೆಡಿಯಾಗಿದೆ. ಈ ಕಿರುಚಿತ್ರದ ಹೆಸರು ಮರಳಿದ ಬೆಳಕು .

ಮರಳಿದ ಬೆಳಕು

ಈಗಾಗಲೇ ಈ ಕಿರುಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಸದ್ಯ ಈ ಸಿನಿಮಾ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದೆ. ಈ ಸಿನಿಮಾದಲ್ಲಿ ಸುಮನ್ ನಗರ್ಕರ್ ಕೂಡ ಭಾಗಿಯಾಗಿದ್ದಾರೆ. ಬಹಳ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ನಟಿ ಸುಮನ್ ನಗರ್ಕರ್ ಈಗ ಬತ್ತೆ ಸಿನಿಮಾಗಳತ್ತ ಮುಖ ಮಾಡಿದ್ದು ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಬ್ರಾಹ್ಮಿ ಸಿನಿಮಾ

ಸುಮನ್ ನಹರ್ಕರ್ ಈಗ ‘ಬ್ರಾಹ್ಮಿ’ ಸಿನಿಮಾದಲ್ಲಿ ಫುಲ್ ಬಿಜಿಯಾಗಿದ್ದಾರೆ. ಆಗೆಯೇ¸ ಸಾಮಾಜಿಕ ಕಳಕಳಿಗಾಗಿ ಮಾಡುತ್ತಿರುವ ಕಿರುಚಿತ್ರ ಮರಳಿದ ಬೆಳಕು ಸಿನಿಮಾಗೆ ಧ್ವನಿ ನೀಡಿದ್ದಾರೆ. ಸುಮನ್ ನಗರ್ಕರ್ ಉತ್ತಮ ನಟಿಯೂ ಹೌದು , ಗಾಯಕಿ ಕೂಡ ಹೌದು. ಆದರೆ ಇವರು ಹಾಡಿದ್ದು ಕಡಿಮೆ . ಸದ್ಯ ಈಗ ನಟನೆ ಜತೆಗ ಮತ್ತೆ ಸುಮನ್ ನಗರ್ಕರ್ ಮತ್ತೆ ಮೈಕ್ ಹಿಡಿದು ಧ್ವನಿ ನೀಡುತ್ತಿದ್ದಾರೆ.

ಸಾಮಾಜಿಕ ಕಳಕಳಿಯ ಕಿರುಚಿತ್ರ

ಈ ಕಿರುಚಿತ್ರ ಮರಳಿದ ಬೆಳಕು ಸಿನಿಮಾ ನಿರ್ದೇಶನವನ್ನು ನವೀನ್ ದ್ವಾರಕನಾಥ್ ಮಾಡುತ್ತಿದ್ದು, ನವೀನ್ ಮೂಲತಃ ಐಟಿ ಕೆಲಸ ಮಾಡುವವರು ವಾರ ಪೂರ್ತಿ ಕೆಲಸದಲ್ಲಿ ಬಿಜಿಯಾಗಿರುವ ಇವರು ವಾರದ ಕೊನೆ ದಿನಗಳಾದ ರಜೆ ದಿನಗಳಲ್ಲಿ ಸಿನಿಮಾ ಕೆಲಸ ಮಾಡುತ್ತಾರೆ.  ಈಗ ಸಾಮಾಜಿಕ ಕಳಕಳಿ ಇರುವ ಒಂದು ಕಿರುಚಿತ್ರ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಈ ಕಿರುಚಿತ್ರ ಮರಳಿದ ಬೇಳಕುಗೆ ಹರೀಶ್ ಸಂಗೀತ ನೀಡಿದ್ದು , ಈ ಸಿನಿಮಾದಲ್ಲಿ 5 ಹಾಡುಗಳಿವೆ. ಮೂರು ವರ್ಷಗಳ ಹಿಂದೆಯೇ ಈ ಸಿನಿಮಾ ಶೂಟಿಂಗ್ ಆರಂಭಿಸಿದ್ದರಿಂದ ಈ ಸಿನಿಮಾದಲ್ಲಿ ಸಿ.ಆರ್. ಸಿಂಹ ಅಭಿನಯಿಸಿರುವುದು ಈ ಸಿನಿಮಾದ ಇನ್ನೊಂದು ವಿಶೇಷತೆಯಾಗಿದೆ.

ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು

ಈ ಸಾಮಾಜಿಕ ಸಿನಿಮಾ ಮಾಡಿ ಹೆಸರು ಮಾಡಬೇಕು ಎಂದು ಈ ಚಿತ್ರತಂಡಕ್ಕೆ ಯಾವುದೇ ಆಸೆ ಇಲ್ಲವಂತೆ . ಆದರೆ ಸಾಮಾಜಿಕ ಕಳಕಳಿ ಸಿನಿಮಾ ಮಾಡಿ ಈ ಸಿನಿಮಾವನ್ನು ಹಳ್ಳಿ ಹಳ್ಳಿಗಳಿಗೆ ಹೋಗಿ ಜನರಿಗೆ ತೋರಿಸಿ ಹಳ್ಳಿ ಜನರಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಈ ಸಿನಿಮಾ ತಂಡದ ಉದ್ದೇಶವಾಗಿದೆಯಂತೆ .ಇನ್ನೂ ಈ ಸಿನಿಮಾಗೆ ಕನ್ನಡಸಿನಿಮಾ ರಂಗದ ನಟರು ಬೆಂಬಲ ವ್ಯಕ್ತಪಡಿಸಿದ್ದು . ರಮೇಶ್ ಅರವಿಂದ್, ವಿನಯಾ ಪಸಾದ್, ಮಾಸ್ಟರ್ ಹಿರಣಯ್ಯ ಮೆಚ್ಚುಗೆ ವ್ಯಕ್ತಪಡಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *