ಸುದ್ದಿಗಳು

‘ಟ್ರೆಂಡ್ ಗೆ ತಕ್ಕಂಗೆ ಸಿನಿಮಾ ಮಾಡುತ್ತೇನೆ’: ಸುನೀಲ್ ಕುಮಾರ್ ದೇಸಾಯಿ

‘ತರ್ಕ’, ‘ಉತ್ಕರ್ಷ’, ‘ನಿಷ್ಕರ್ಷ’, ‘ಸಂಘರ್ಷ’, ‘ಪರ್ವ’, ‘ಉದ್ಘರ್ಷ’.. ಹೀಗೆ ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಇದೀಗ ಹೊಸ ಬಗೆಯ ಚಿತ್ರ ಮಾಡುವ ಸಿದ್ದತೆಯಲ್ಲಿದ್ದಾರೆ. ವಿಶೇಷವೆಂದರೆ, ಈ ಬಾರಿ ಅವರು ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಲಿದ್ದಾರೆ.

ಅಂದ ಹಾಗೆ ಸುನೀಲ್ ಕುಮಾರ್ ದೇಸಾಯಿ ಈ ಬಾರಿ ಸಸ್ಪೆನ್ಸ್ ಹಾಗೂ ಕ್ರೈಂ ಥ್ರಿಲ್ಲರ್ ಸಿನಿಮಾ ಮಾಡುವ ಬದಲಿಗೆ ಕಾಲಕ್ಕೆ ತಕ್ಕಂತೆ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿಂಪಲ್ ಕಥೆಯನ್ನು, ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದಾರೆ.

‘ನಾನಿನ್ನೂ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಹೋಗುವುದಿಲ್ಲ. ಟ್ರೆಂಡ್ ಗೆ ತಕ್ಕಂತೆ ಸಿನಿಮಾ ಮಾಡುತ್ತೇನೆ. ಸದ್ಯಕ್ಕೆ ಎರಡು ಕಥೆ ಮಾಡಿಟ್ಟುಕೊಂಡಿದ್ದೇನೆ. ಶೀಘ‍್ರದಲ್ಲಿಯೇ ಸಿನಿಮಾ ಶುರುವಾಗಲಿದೆ’ ಎನ್ನುತ್ತಾರೆ ಅವರು.

ಸದ್ಯ ‘ಉದ್ಘರ್ಷ’ ಚಿತ್ರದ ಸೋಲಿನಿಂದ ಹೊರ ಬಂದಿರುವ ದೇಸಾಯಿಯರು, ತಮ್ಮ ನಿರ್ದೇಶನದ ‘ನಿಷ್ಕರ್ಷ’ ಡಿಜಿಟಲ್ ರೂಪದಲ್ಲಿ ಮರು ಬಿಡುಗಡೆಯಾಗುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ಈ ಚಿತ್ರದ ಬಳಿಕ ಹೊಸ ಚಿತ್ರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಟ್ರೆಂಡಿಂಗ್ ಫೋಟೊ: ಬಿಳಿ ಬಿಕಿನಿಯಲ್ಲಿ ಮಲೈಕಾ

#sunilkumardesai #sunilkumardesaiMovies   #nishkarsha #sandalwoodmovies  ‍#kannadasuddigalu

Tags