ಸುದ್ದಿಗಳು

ಸನ್ನಿಲಿಯೋನ್ ಬಿಕಿನಿ ಫೋಟೋ ವೈರಲ್

ನಟಿ ಸನ್ನಿಲಿಯೋನ್ ಫೋಟೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು, ಅ.11: ಮಾದಕ ಚೆಲುವೆ ಸನ್ನಿ ಲಿಯೋನ್. ಪಡ್ಡೆ ಹುಡುಗರ ದಿಲ್ ಕದ್ದ ನಟಿ. ಸದ್ಯ ಐತಿಹಾಸಿಕ ಸಿನಿಮಾವೊಂದರಲ್ಲಿ ನಿರತರಾಗಿರುವ ಈ ನಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಮಿಂಚುತ್ತಿದ್ದಾರೆ. ಇವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಹಾಟ್ ಲುಕ್ ಗೆ ಫಿದಾ ಆಗಿದ್ದಾರೆ.

 

View this post on Instagram

 

Best friends for life!! @dirrty99 @bluereena @patellegrino Cancun Mexico and our rather large families! Lol

A post shared by Sunny Leone (@sunnyleone) on

ಮೆಕ್ಸಿಕೋದಲ್ಲಿ ಸನ್ನಿ ಲಿಯೋನ್

ಹೌದು, ಸನ್ನಿ ಲಿಯೋನ್ ಅವರು ತನ್ನ ಪತಿ ಹಾಗೂ ಸ್ನೇಹಿತರ ಜೊತೆ ಸದ್ಯ ರಜಾವನ್ನು ಮಜಾ ಮಾಡುತ್ತಿದ್ದಾರೆ. ಮೆಕ್ಸಿಕೋದಲ್ಲಿ ಸನ್ನಿ  ರಜಾದ ವಾಸ್ತವ್ಯ ಹೂಡಿದ್ದಾರೆ. ಮೆಕ್ಸಿಕೋ‌ ನದಿ ದಡದಲ್ಲಿ ತೆಗೆದ ಒಂದು ಫೋಟೋ ಸದ್ಯ ಬಹಳಷ್ಟು ವೈರಲ್ ಆಗಿದೆ.  ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಸನ್ನಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಸನ್ನಿ ಫೋಟೋಗೆ ೨ ಲಕ್ಷ ಮಂದಿ ಫಿದಾ

ಬಿಳಿ ಬಣ್ಣದ ಬಿಕಿನಿ ಧರಿಸಿರುವ ಸನ್ನಿ ನೋಡುಗರನ್ನು ಇನ್ನೊಮ್ಮೆ, ಮಗದೊಮ್ಮೆ ನೋಡುವಂತೆ ಮಾಡಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಈ ಫೋಟೋ ಅಪ್ ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ  ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ. ಇವರ ಫೋಟೋ ಅಷ್ಟೇ ಅಲ್ಲದೆ ತಮ್ಮ ಪತಿ ಹಾಗೂ ಸ್ನೇಹಿತರೊಟ್ಟಿಗಿನ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Tags