ಸುದ್ದಿಗಳು

ಸನ್ನಿ ಡಿಯೋಲ್ ಬದಲು ಸನ್ನಿ ಲಿಯೋನ್ ಎಂದ ರಾಷ್ಟ್ರೀಯ ಸುದ್ದಿ ವಾಹಿನಿ ನಿರೂಪಕ: ವೈರಲ್ ಆಯ್ತು ವಿಡಿಯೋ

ಮುಂಬೈ, ಮೇ.25:

ಮಾದಕ ನಟಿ ಸನ್ನಿ ಲಿಯೋನ್ ಪಡ್ಡೆಹುಡುಗರ ನಿದ್ದೆ ಕದ್ದಿರುವ ಬೆಡಗಿ. ಆಗಾಗ ಈ ನಟಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ತಮ್ಮ ಕೆಲವೊಂದಿಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರುವಾಗಿರುತ್ತಾರೆ. ಆದರೆ ಈ ಬಾರೀ ಈ ನಟಿ ಪೋಸ್ಟ್ ಮಾಡಿರುವ ಒಂದು ಪೋಸ್ಟ್ ಒಂದು ಬಾರೀ ಚರ್ಚೆಗೆ ಗ್ರಾಸವಾಗಿದೆ.

ಸನ್ನಿ ಟ್ವಿಟ್ ಚರ್ಚೆಯಾಗಿದ್ಯಾಕೆ..?

ಪಂಜಾಬ್‍ ನ ಗುರ್ದಾಸ್‍ ಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ  ಸನ್ನಿ ಡಿಯೋಲ್ ಸ್ಪರ್ಧೆ ಮಾಡಿದ್ದರು. ಈ ಚುನಾವಣೆ ಸನ್ನಿ ಡಿಯೋಲ್ ಕೈ ಹಿಡಿದಿದ್ದು, ವಿಜಯ ಮಾಲೆ ಹಾಕಿದ್ದಾರೆ. ಸದ್ಯ ಇವರ ಬಗ್ಗೆ ಎಷ್ಟು ಮತ ಪಡೆದಿದ್ದಾರೆ ಅಂತಾ ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ನಿರೂಪಕರೊಬ್ಬರು ತಮ್ಮ ಡಿಬೇಟ್ ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು. ಬಾಲಿವುಡ್ ನಟ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದೆ.

ಸನ್ನಿ ಲಿಯೋನ್ ಗೆ ಬಂದ ಮತಗಳು

ಹಾಗಾಗಿ ಈ ವಿಡಿಯೋ ನೋಡಿದ ಸನ್ನಿ ಲಿಯೋನ್ ತನಗೆ ಬಂದ ಮತಗಳೆಷ್ಟು ಎಂಬ ಟ್ವಿಟ್ ಮಾಡಿದ್ದಾರೆ. ಸದ್ಯ ಈ ಟ್ವಿಟ್ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಸನ್ನಿ ಮಾಡಿದ್ದ ಟ್ವಿಟ್ ಗೆ ಅಭಿಮಾನಿಗಳು ನೆಟ್ಟಿಗರು ಬಹಳಷ್ಟು ಕಮೆಂಟ್ ಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ ಸನ್ನಿಗೆ ಬರುವ ಮತಗಳ ಲೆಕ್ಕಾಚಾರ ಹಾಕಿದ್ದಾರೆ.

29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ತುಪ್ಪದ ಬೆಡಗಿ ರಾಗಿಣಿ

#balkaninews #sunnyleone #sunnyleonemovies #sunnydeol #twitter #nationalchannel

 

Tags