ಸುದ್ದಿಗಳು

ವೆಬ್ ಹುಡುಕಾಟ: 2018 ರಲ್ಲಿ ಅತಿ ಹೆಚ್ಚು ಸರ್ಚ್ ಗೆ ಒಳಗಾದ ಸನ್ನಿ ಲಿಯೋನ್

ಮತ್ತೆ ಸುದ್ದಿಯಾದ ಮಾದಕ ಬೆಡಗಿ

ಮುಂಬೈ, ಡಿ.9: ಬಾಲಿವುಡ್ ನ ಮಾದಕ ಬೆಡಗಿ ಸನ್ನಿಲಿಯೋನ್, ವೆಬ್ ಹುಡುಕಾಟದಲ್ಲಿ ಮತ್ತೊಮ್ಮೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ 2018 ರಲ್ಲಿ ಹೆಚ್ಚು ಸರ್ಚಾದ ಭಾರತೀಯ ಭಾರತೀಯ ಮಹಿಳಾ ಸೆಲೆಬ್ರಿಟಿಗಳ ಪೈಕಿ ಇವರು ಮೊದಲಿಗರಾಗಿದ್ದಾರೆ.

ವರ್ಷದ ರಿವ್ಯೂ

ಯಾಹೂ ತಾಣ ಬಿಡುಗಡೆ ಮಾಡಿರುವ ಈ ವರ್ಷದ ‘ಇಯರ್ ಇನ್ ರಿವ್ಯೂ ಲಿಸ್ಟ್’ ಪಟ್ಟಿಯಲ್ಲಿ ಪಡ್ಡೆ ಹುಡುಗರ ನೆಚ್ಚಿನ ನಟಿಯಾಗಿರುವ 37 ವರ್ಷದ ಸನ್ನಿ ಲಿಯೋನ್ ಹೆಚ್ಚಾಗಿ ಸರ್ಜ್ ಆಗಿದ್ದಾರೆ.

ಸಿನಿಮಾ ಜೀವನ

ಕೆನಡಿಯನ್ ಮೂಲದವರಾದ ಬಾಲಿವುಡ್ ನಟಿ ಸನ್ನಿ ಲಿಯೋನ್ ನಂತರ ನಟಿ ಶ್ರೀದೇವಿ ಹಾಗೂ ಪ್ರಿಯಾ ಪ್ರಕಾಶ್ ವಾರಿಯರ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕಿ ಸಪ್ನಾ ಚೌದರಿ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ರಾತ್ರೋ ರಾತ್ರಿ ಪಸಿದ್ದಿಗೆ ಬಂದ ಸನ್ನಿ

ಇನ್ನು 2017 ರಲ್ಲಿಯೂ ಸನ್ನಿ ಲಿಯೋನ್ ಕುರಿತಂತೆ ವೆಬ್ ಪೋರ್ಟಲ್ ನಲ್ಲಿ ಹೆಚ್ಚು ಜನರು ಹುಡುಕಾಟ ನಡೆಸಿದ್ದರು. ಆದರೆ, 2018 ಫೆಬ್ರವರಿಯಲ್ಲಿ ಕೇರಳ ಮೂಲದ ಪ್ರಿಯಾ ಪ್ರಕಾಶ್ ವಾರಿಯರ್, ರಾತ್ರೋರಾತ್ರಿ ಪ್ರಸಿದ್ಧಿಗೆ ಬರುವ ಮೂಲಕ ಸನ್ನಿ ಲಿಯೋನ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ತಾನೂ ಮೊದಲ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ವರ್ಷ ಮತ್ತೊಮ್ಮೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

Tags

Related Articles