ಸುದ್ದಿಗಳು

ಸನ್ನಿ ಲಿಯೋನ್ ಗೆ ಈ ಕ್ರಿಕೆಟಿಗ ಅಂದರೆ ಇಷ್ಟವಂತೆ..!

ಮಹೇಂದ್ರ ಸಿಂಗ್ ಧೋನಿ ಅಂದರೆ ಇಷ್ಟ

ಮುಂಬೈ,ಸೆ.23: ಖ್ಯಾತ ನೀಲಿ ತಾರೆ, ಮಾದಕ ಬೆಡಗಿ ಸನ್ನಿ ಲಿಯೋನ್ ಅಂದಾಕ್ಷಣ ಹುಡುಗರು ರೋಮಾಂಚನಗೊಳ್ಳುತ್ತಾರೆ. ತನ್ನ ಮಾದಕತೆ ಮೂಲಕ ವಿಶ್ವಾದ್ಯಂತ ಅನೇಕ ತಲೆಗಳಲ್ಲಿ

ಹುಳ ಬಿಟ್ಟಿರುವ ಸನ್ನಿ ಲಿಯೋನ್ ಗೆ ಓರ್ವ ಕ್ರಿಕೆಟಿಗ ಅಂದರೆ ಇಷ್ಟವಂತೆ. ಈಕೆಯ ನೆಚ್ಚಿನ ಆ ಕ್ರಿಕೆಟಿಗ ಯಾರು ಗೊತ್ತೇ..?

ಮಹೇಂದ್ರ ಸಿಂಗ್ ಧೋನಿ ಅಂದರೆ ಇಷ್ಟ

ಈ ಕುರಿತು ಸ್ವತಃ ಸನ್ನಿ ಲಿಯೋನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹೌದು. ಸನ್ನಿ ಲಿಯೋನ್ ಗೆ ಮಹೇಂದ್ರ ಸಿಂಗ್ ಧೋನಿ ಅಂದರೆ ಇಷ್ಟವಂತೆ. ಯಾಕೆಂದರೆ ಧೋನಿ ಎಷ್ಟೇ ಒತ್ತಡದಲ್ಲಿದ್ದರೂ ಎಷ್ಟು ಕೂಲ್ ಆಗಿರುತ್ತಾರಂತೆ. ಏನೇ ಅಸಾಧ್ಯವಾದ ಸಂದರ್ಭಗಳಿದ್ದರೂ ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿ ಕೊಡುವುದರೊಂದಿಗೆ ಅವರು ತುಂಬಾ ಪ್ರಭಾವಿತರಾಗಿದ್ದಾರೆ ಎಂದು ಲಿಯೋನ್ ಹೇಳಿದ್ದಾರೆ. ಅಂದಹಾಗೇ ಈಕೆಗೆ ಭಾರತೀಯ ಕ್ರಿಕೆಟ್ ತಂಡ ಮಾತ್ರ ನೆಚ್ಚಿನ ಟೀಮ್ ಅಂತೆ.

Image result for dhoni

ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ

ಇನ್ನು ಹೊಸ ತಲೆಮಾರಿನ ಕ್ರಿಕೆಟಿಗರ ಕುರಿತು ಮಾತನಾಡಿದ ಸನ್ನಿ , ಹೊಸ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. 2019 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಸನ್ನಿ ಲಿಯೊನ್ ಹೇಳಿಕೊಂಡಿದ್ದಾರೆ.

Image result for kohli

Tags