ಸುದ್ದಿಗಳು

ತಮಾಷೆ ಮಾಡಲು ಹೋಗಿ ತಾನೇ ತಮಾಷೆಯಾದ ಸನ್ನಿಲಿಯೋನ್

ಈ ಬಗ್ಗೆ ಖುಷಿಯಿಂದ ಹೇಳಿಕೊಂಡ ಸನ್ನಿ

ಮುಂಬೈ.ಫೆ.12

ನೀಲಿ ತಾರೆ, ಮಾದಕ ಬೆಡಗಿ ಸನ್ನಿಲಿಯೋನ್ ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಹಾಗೆಯೇ ಅವರು ಇನ್ ಸ್ಟಾಗ್ರಾಮ್ ನಲ್ಲಿ ಸದಾ ಆ್ಯಕ್ಟಿವ್ ಆಗಿದ್ದು, ಅಭಿಮಾನಿಗಳೊಂದಿಗೆ ತಮ್ಮ ಸಿನಿಮಾ ಹಾಗೂ ಜಿವಣದ ಕುರಿತಂತೆ ಹಂಚಿಕೊಳ್ಳುತ್ತಾರೆ. ಈಗ ಅವರೊಂದು ಸುದ್ದಿಯೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮಾಷೆ ಮಾಡಲು ಹೋಗಿ ಅವರೇ ತಮಾಷೆಗೊಳಗಾಗಿದ್ದಾರೆ.

ಪ್ರ್ಯಾಂಕ್ ಗೆ ಒಳಗಾದ ವಿಡಿಯೋ

ಸನ್ನಿಲಿಯೋನ್ ತಮ್ಮ ಚಿತ್ರತಂಡದ ಜೊತೆ ತಮಾಷೆ ಮಾಡಲು ಹೋಗಿ ತಾವೇ ಸಿಕ್ಕಿ ಹಾಕಿಕೊಂಡಿದ್ದಾರೆ. ಸ್ವತಃ ಸನ್ನಿ ಲಿಯೋನ್ ತಾವು ಪ್ರ್ಯಾಂಕ್ ಗೆ ಒಳಗಾದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಸಹೋದ್ಯೋಗಿ ಹಾಗೂ ಮೇಕಪ್ ಆರ್ಟಿಸ್ಟ್ ಗಳನ್ನು ತಮಾಷೆ ಮಾಡಲು ಹೋಗಿದ್ದ ಸನ್ನಿ, ಸ್ವಿಮ್ಮಿಂಗ್ ಪೂಲ್ ಬಳಿ ಹೋಗಿ ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಡ್ಯಾನ್ಸ್ ಮಾಡುತ್ತಿದ್ದಂತೆಯೇ ಅವರು ತನ್ನ ಸ್ನೇಹಿತನನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳಿದ್ದಾರೆ. ಇದನ್ನು ಗಮನಿಸಿದ ಮತ್ತೊಬ್ಬ ಸ್ನೇಹಿತ ಸನ್ನಿ ಅವರನ್ನೇ ಸ್ವಿಮ್ಮಿಂಗ್ ಪೂಲ್ ಗೆ ತಳ್ಳಿದ್ದಾರೆ. ಈ ಮಸ್ತಿಯ ವಿಡಿಯೋವನ್ನು ಸನ್ನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬ್ಯುಸಿಯಾಗಿರುವ ಸನ್ನಿ

ಮೂಲತಃ ವಿದೇಶದವರಾದ ಸನ್ನಿಲಿಯೋನ್ ಈಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು 90ರ ದಶಕದಲ್ಲಿ ನಟ ಗೋವಿಂದ ಹಾಗೂ ನಟಿ ಕರಿಷ್ಮಾ ಕಪೂರ್ ನಟಿಸಿದ `ಕೂಲಿ ನಂ 1′ ಚಿತ್ರದ `ಅ ಜಾನಾ ಅ ಜಾನಾ’ ಹಾಡಿಗೆ ಹೆಜ್ಜೆ ಹಾಕಿದ್ದರು.

ಸದ್ಯ ಮಾಲಿವುಡ್ ಗೆ ಕಾಲಿಟ್ಟಿರುವ ಮಮ್ಮುಟಿ ನಟಿಸಿದ `ಮಧುರ ರಾಜ’ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಈಗ `ರಂಗೀಲಾ’ ಚಿತ್ರದ ಚಿತ್ರೀಕರಣವನ್ನು ಶುರು ಮಾಡಿದ್ದಾರೆ. ಹಾಗೆಯೇ ಕನ್ನಡದ ‘ಲವ್ ಯೂ ಆಲಿಯಾ’ ಹಾಗೂ ‘ಡಿ.ಕೆ’ ಚಿತ್ರಗಳ ಸ್ಪೆಷಲ್ ಹಾಡುಗಳಿಗೆ ಸೊಂಟ ಬಳುಕಿಸಿದ್ದರು.

‘ಉರಿ: ಸರ್ಜಿಕಲ್ ಸ್ಟ್ರೈಕ್’ ಹಿಂದಿಕ್ಕಿದ ‘ಕೆಜಿಎಫ್’

#sunnyloeane- #balkaninews #filmnews, #kannadasuddigalu #sunnyleane, #bollywoodfilms

Tags