ಸುದ್ದಿಗಳು

ಹೃತಿಕ್ ರ `ಸೂಪರ್-3೦’ ಚಿತ್ರಕ್ಕೆ ಕಬೀರ್ ಎಂಟ್ರಿ..

ಹೃತಿಕ್ ಸಹಾಯಕ್ಕೆ ಕಬೀರ್ ಖಾನ್

ಮುಂಬೈ,ನ.12:ಮಿಟೂ’ ಅಭಿಯಾನ ಬಾಲಿವುಡ್‌ನ ನಟರಿಗೆ ಕಂಟಕಪ್ರಾಯವಾಗುವುದರ ಜೊತೆ ಚಿತ್ರಗಳಿಗೂ ಸಂಕಷ್ಟ ತಂದೊಡ್ಡಿದೆ. `ಹೌಸ್‌ಫುಲ್-೪’, `ಸೂಪರ್-೩೦’.. ಹೀಗೆ ಹಲವಾರು ಚಿತ್ರಗಳ ಶೂಟಿಂಗ್ ಸ್ಥಗಿತಗೊಂಡಿವೆ. ‘ಮಿಟೂ’ ಆರೋಪದಿಂದಾಗಿ ನಿರ್ದೇಶಕ ವಿಕಾಸ್ ಬಾಹ್ಲ್ ಫಿಲ್ಮಂ ಟೀಂನಿಂದ ಹೊರ ನಡೆದ ಬಳಿಕ ನಟ ಹೃತಿಕ್ ರೋಷನ್ ಅವರ `ಸೂಪರ್-೩೦’ ಚಿತ್ರದ ಶೂಟಿಂಗ್‌ ಗೆ ಬ್ರೇಕ್ ಬಿದ್ದಿತ್ತು.

ಮಿಟೂ’ ಆರೋಪ

ನಿರ್ದೇಶಕ ವಿಕಾಶ್ ಅವರು ಶೇ.೯೦ರಷ್ಟು ಶೂಟಿಂಗ್ ಪೂರ್ಣಗೊಳಿಸಿದ್ದರು. ಈ ವೇಳೆ ‘ಮಿಟೂ’ ಆರೋಪದಿಂದ ಅವರು ಟೀಮ್‌ನಿಂದ ಔಟ್ ಆದರು. ಬಾಕಿ ಉಳಿದಿರುವ ಶೇ.೧೦ರಷ್ಟು ಭಾಗ ಚಿತ್ರೀಕರಣದ ಬಗ್ಗೆ ತಲೆಗೆಡಿಸಿಕೊಂಡಿದ್ದ ಹೃತಿಕ್ ಸಹಾಯಕ್ಕೆ ಕಬೀರ್ ಖಾನ್ ಮುಂದಾಗಿದ್ದಾರೆ. ಈ ಚಿತ್ರವು ೨೦೧೯ರ ಜನವರಿ ೨೫ರಂದು ಬಿಡುಗಡೆ ಮಾಡಲು ನಿಗದಿಪಡಿಸಲಾಗಿತ್ತು.

Image result for kabir director of super 30

ಜನವರಿಯಲ್ಲಿ ಬಿಡುಗಡೆ

ಈ ಚಿತ್ರದ ನಿರ್ಮಾಪಕರ ಮತ್ತೊಂದು ಚಿತ್ರವನ್ನೂ ಕಬೀರ್ ನಿರ್ದೇಶನ ಮಾಡುತ್ತಿದ್ದಾರೆ. `ಸೂಪರ್-೩೦’ ಚಿತ್ರ ಪರಿಸ್ಥಿತಿಯನ್ನು ಗಮನಿಸಿದ ಕಬೀರ್ ಉಳಿದ ಶೇ.೧೦ ರಷ್ಟು ಭಾಗವನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇದೇ ವೇಳೆ ನಟಿ ಕಂಗನಾ ರಾಣವತ್ ನಟನೆಯ `ಮಣಿಕಾರ್ಣಿಕಾ’ ಚಿತ್ರವೂ ರಿಲೀಸ್ ಆಗುತ್ತಿದೆ. ರಾಣಿ ಲಕ್ಷ್ಮೀ ಬಾಯಿ ಜೀವನಾಧಾರಿತ ಚಿತ್ರವಾಗಿದೆ.

 

Tags

Related Articles