ಸುದ್ದಿಗಳು

ಇವೇ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ನೆಚ್ಚಿನ ಚಿತ್ರಗಳು

ಕಮಲ್ ಹಾಸನ್ ನಿನ್ನೆ ಗುರುವಾರ(ಅ.07) ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆಚರಣೆಯ ಅಂಗವಾಗಿ ತಮ್ಮ ತಂದೆ ಶ್ರೀನಿವಾಸನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಅವರ ಕುಟುಂಬ, ನಟ ಪ್ರಭು, ಚಿತ್ರೋದ್ಯಮದ ಸ್ನೇಹಿತರು ಭಾಗವಹಿಸಿದ್ದರು.

ಇಂದು ಕಮಲ್ ತಮ್ಮ ಪ್ರೊಡಕ್ಷನ್ ಹೌಸ್ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ನ ಹೊಸ ಕಚೇರಿಯನ್ನು ತೆರೆದರು. ಈ ಸಂದರ್ಭದಲ್ಲಿ ಮಾರ್ಗದರ್ಶಕ ಕೆ ಬಾಲಚಂದರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಸೂಪರ್ ಸ್ಟಾರ್ ರಜನಿಕಾಂತ್, ನಿರ್ದೇಶಕ ಮಣಿರತ್ನಂ, ಪಿರಮಿಡ್ ನಟರಾಜನ್ ಮುಂತಾದವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ರಜನಿಕಾಂತ್ ಅವರು ತಮ್ಮ ಬಿಡುವಿನ ವೇಳೆಯಲ್ಲಿ ‘ದಿ ಗಾಡ್‌ಫಾದರ್’, ತಿರುವಿಲೈದಾಲ್ ಮತ್ತು ಕಮಲ್ ಹಾಸನ್ ಅವರ ‘ಹೇ ರಾಮ್’ ಎಂಬ ಮೂರು ಚಿತ್ರಗಳನ್ನು ವೀಕ್ಷಿಸುತ್ತೇನೆ. ‘ಹೇ ರಾಮ್‌’ ಚಿತ್ರವನ್ನು 30-40 ಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದೇನೆ ಎಂದರು.

ಈ ಸಂಕಷ್ಟದಿಂದ ಹೊರಬರುತ್ತಾರಾ ಪಾಯಲ್?

#balkaninews #superstarrajnikanth #favoritemovies

Tags