ಸುದ್ದಿಗಳು

‘ಸೂಪರ್ ಸ್ಟಾರ್’ ಟೈಟಲ್ ವಿವಾದ

'ಸೂಪರ್ ಸ್ಟಾರ್' ಎಂಬ ಹೆಸರಿನಲ್ಲಿ ಜಯರಾಮ್ ಕಾರ್ತಿಕ್

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ‘ಬಾಸ್ ಆಫ್ ಸ್ಯಾಂಡಲ್ ವುಡ್ ’ ಎಂಬ ಟೈಟಲ್ ವಿವಾದವೆದ್ದಿತ್ತು. ಇದೀಗ ‘ಸೂಪರ್ ಸ್ಟಾರ್ ‘ ಎಂಬ ಹೆಸರು ವಿವಾದ ಉಂಟು ಮಾಡಿದೆ.

ಬೆಂಗಳೂರು, ಆ. 28: ಚಂದನವನದಲ್ಲಿ ಮತ್ತೊಂದು ಟೈಟಲ್ ವಿವಾದ ಶುರು ಮಾಡಿದೆ. ಜಯರಾಮ್ ಕಾರ್ತಿಕ್ ಅಭಿನಯದ ‘ಮೇ ಫಸ್ಟ್’ ಚಿತ್ರವು ಕಳೆದ ಶುಕ್ರವಾರ ತೆರೆ ಕಂಡಿತ್ತು. ಈ ಚಿತ್ರದಲ್ಲಿ ನಾಯಕ ಜೆ.ಕೆ ಅವರಿಗೆ ‘ಸೂಪರ್ ಸ್ಟಾರ್’ ಎಂಬ ಹೆಸರನ್ನು ನೀಡಲಾಗಿದೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳು ಗರಂ ಆಗಿದ್ದಾರೆ.

ಉಪೇಂದ್ರ ಒಬ್ಬರೇ ಸೂಪರ್ ಸ್ಟಾರ್

‘ಸೂಪರ್ ಸ್ಟಾರ್ ಟೈಟಲ್ ಉಪ್ಪಿ ಅವರಿಗೆ ಸೇರಿದೆ. ಬುದ್ಧಿವಂತನ ಸಹನೆ ಪರೀಕ್ಷೆ ಮಾಡಬೇಡಿ. ಆ ಟೈಟಲ್ ಬಳಸಿಕೊಂಡಿದ್ದಕ್ಕೆ ಉಪೇಂದ್ರ ಅವರ ಬಳಿ ಕ್ಷಮೆ ಕೇಳಬೇಕು’ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಉಪೇಂದ್ರ ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಕೆ “ಈ ಸಿನಿಮಾ ನೋಡಿದರೆ ಸೂಪರ್ ಸ್ಟಾರ್ ಟೈಟಲ್ ಇಟ್ಟಿದ್ದು ಏಕೆ ಎಂದು ಗೊತ್ತಾಗುತ್ತದೆ. ಇದು ಒಂದು ದೃಶ್ಯದಲ್ಲಿ ಮಾತ್ರ ಬರುತ್ತದೆ. ನಾನೇನೂ ತಪ್ಪು ಮಾಡಿಲ್ಲ. ದಯವಿಟ್ಟು ಅಭಿಮಾನಿಗಳು ಬೇಸರ ಮಾಡಿಕೊಳ್ಳಬಾರದು. ನಾನು ಸಹ ಉಪೇಂದ್ರರ ಅಭಿಮಾನಿ. ಅವರ ಜೊತೆಗೆ ನಾನು ಸ್ಪರ್ಧೆಗೆ ನಿಲ್ಲುವುದಕ್ಕೆಆಗುವುದಿಲ್ಲ” ಎಂದಿದ್ದಾರೆ.

ಈ ಹಿಂದೆಯೂ ವಿವಾದ

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ‘ಬಾಸ್ ಆಫ್ ಸ್ಯಾಂಡಲ್ ವುಡ್’ ಎಂಬ ಬಿರುದನ್ನು ಶಿವರಾಜ್ ಕುಮಾರ್ ಅವರಿಗೆ ನೀಡಿದ್ದಕ್ಕೆ ದರ್ಶನ್ ಅವರ ಅಭಿಮಾನಿಗಳು ಗರಂ ಆಗಿದ್ದರು. ಇದರ ಬಗ್ಗೆ ಅನೇಕ ಚರ್ಚೆಗಳಾಗಿದ್ದವು.

ಇದಕ್ಕೂ ಮೊದಲು “ಮಾಸ್ತಿಗುಡಿ” ಚಿತ್ರದಲ್ಲಿ ನಟ ದುನಿಯಾ ವಿಜಯ್ ಅವರಿಗೆ ‘ಸೂಪರ್ ಸ್ಟಾರ್’ ಟೈಟಲ್ ನೀಡಲಾಗಿತ್ತು. ಆಗಲೂ ಉಪೇಂದ್ರ ಅಭಿಮಾನಿಗಳು ತಿರುಗಿ ಬಿದ್ದಿದ್ದರಿಂದಲೇ ಅದನ್ನು ವಾಪಸ್ ಪಡೆಯಲಾಗಿತ್ತು. ಈಗ ಜಯರಾಮ್ ಕಾರ್ತೀಕ್ ವಿರುದ್ಧ ಉಪ್ಪಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags

Related Articles