ಸುದ್ದಿಗಳು

‘ಸುರಗಿ’ಯ ಪ್ರೇಮಕಥೆಯಲ್ಲಿ ಧನ್ಯಾ ಹಾಗೂ ಮನು ಹೆಗಡೆ

‘ನಿರುತ್ತರ’ ಚಿತ್ರದ ನಂತರ ಭಾವನಾ ನಿರ್ಮಿಸುತ್ತಿರುವ ಸಿನಿಮಾ

ಬೆಂಗಳೂರು, ಡಿ.9: ಮೊನ್ನೆ ತಾನೇ ‘ಸುರಗಿ’ ಚಿತ್ರಕ್ಕಾಗಿ ನಡೆದ ಹಾಟ್ ಫೋಟೋ ಶೂಟ್ ನಿಂದ ಭಾವನಾ ಸುದ್ದಿಯಾಗಿದ್ದರು. ಗಿರಿರಾಜ್ ಬಿ ಎಂ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅವರೇ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಮತ್ತೊಂದು ಜೋಡಿಯೂ ನಟಿಸಲು ಸೇರ್ಪಡೆಗೊಂಡಿದೆ.

ಪ್ರೇಮಕಥೆಯೂ ಇರಲಿದೆ

ಮನಸ್ಸು ಮತ್ತು ದೇಹಗಳ ತುಮುಲಗಳ ನಡುವೆ ಪರಿಸ್ಥಿತಿಗಳು ಹೇಗೆ ಗಂಡು-ಹೆಣ್ಣನ್ನು ಒತ್ತಡಕ್ಕೆ ಸಿಲುಕಿಸುತ್ತವೆ ಮತ್ತು ಆ ದೈಹಿಕ ಸಂಘರ್ಷ, ಮಾನಸಿಕ ಸಂಘರ್ಷದಿಂದ ಅವರು ಹೇಗೆ ಹೊರ ಬರುತ್ತಾರೆ ಎನ್ನುವುದನ್ನು ನಿರ್ದೇಶಕರು ‘ಸುರಗಿ’ ಚಿತ್ರದ ಮೂಲಕ ತೋರಿಸುತ್ತಿದ್ದಾರೆ. ಇನ್ನು ಮತ್ತೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಒಂದು ಪ್ರೇಮಕಥೆಯೂ ಇರಲಿದ್ದು, ಆ ಪ್ರೇಮಕಥೆಗೆ ಪಾತ್ರಗಳಾಗಿ ಧನ್ಯಾ ಬಾಲಕೃಷ್ಣ ಹಾಗೂ ಮನು ಹೆಗಡೆ ಅಭಿನಯಿಸುತ್ತಿದ್ದಾರೆ.

ಚಿತ್ರದ ಬಗ್ಗೆ

ಈಗಾಗಲೇ ‘ಜಟ್ಟ’, ಅದ್ವೈತ’, ‘ಮೈತ್ರಿ’, ‘ಅಮರಾವತಿ’ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ಗಿರಿರಾಜ್ ಅವರಿಗೆ ಇದೊಂದು ವಿಭಿನ್ನ ಬಗೆಯ ಸಿನಿಮಾ. ಈ ಸಿನಿಮಾವನ್ನು ನವಿರಾಗಿ, ಹಾಸ್ಯಮಯವಾಗಿ, ಥ್ರಿಲ್ಲಿಂಗ್ ರೀತಿಯಲ್ಲಿ ತೋರಿಸಲಿದ್ದಾರೆ. “ನನ್ನ ಸಿನಿಮಾಗಳಿಗೆ ಹೋಲಿಸಿದರೆ, ‘ಸುರಗಿ’ ಬೇರೆಯದೇ ಮಾದರಿಯಲ್ಲಿ ಇರಲಿದೆ. ಲವ್ಸ್ಟೋರಿ ಪ್ರಧಾನವಾಗಿರಲಿದೆ’ ಎನ್ನುತ್ತಾರೆ.

ಪ್ರೇಮಿಗಳ ಬಗ್ಗೆ

ಈ ಚಿತ್ರದಲ್ಲಿ ಪ್ರೇಮಿಗಳಾಗಿ ಕಾಣಸಿಕೊಳ್ಳುತ್ತಿರುವ ಮನು ಹೆಗಡೆಯವರು ಪೋಷಕ ನಟ ಮಂಜುನಾಥ್ ಹೆಗಡೆ ಅವರ ಮಗನಾಗಿದ್ದು, ಈಗಾಗಲೇ ‘ದೇವರ ನಾಡಲ್ಲಿ’, ‘ ಕಾನೂರಾಯಣ’, ‘ದಿ ಟೆರರಿಸ್ಟ್’ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಇದೇ ನಿರ್ದೇಶಕರ ‘ರಕ್ತ ಚಂದನ’ ವೆನ್ ಸರಣಿಯಲ್ಲಿ ನಟಿಸಿರುವ ಧನ್ಯಾ ಈಗಾಗಲೇ ತೆಲುಗು , ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಇವರ ಇರಡನೇಯ ಚಿತ್ರವಾಗಿದ್ದು, ರಿಷಿ ನಟನೆಯ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ

ಸುರಗಿಯೆಂದರೆ

‘ಸುರಗಿ’ ಎಂಬ ಹೆಸರನ್ನು ಕೇಳಿದೊಡನೆ ಇದೊಂದು ಆರ್ಟ್ ಸಿನಿಮಾ ಇರಬಹುದು ಅಂತ ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಇದು ಕಮರ್ಷಿಯಲ್ ಸಿನಿಮಾವಾಗಿದೆ. ಇನ್ನು ‘ಸುರಗಿ’ಯೆಂದರೆ, ತಾನು ಒಣಗಿದ ನಂತರವೂ ಸುವಾಸನೆಯನ್ನು ಬೀರುವ ಒಂದು ಜಾತಿಯ ಮತ್ತು ಮಲೆನಾಡಿನಲ್ಲಿ ಬೆಳೆಯುವ ಹೂವು. ಹೀಗಾಗಿ ಇದೇ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ.

Tags