ಸುದ್ದಿಗಳು

ಹೊಸ ಅವತಾರದಲ್ಲಿ ಸೂರ್ಯ

ಚೆನೈ, ಏ.11:

ಸುಧಾ ಕೊಂಗರ ನಿರ್ದೇಶನದ ಹೊಸ ಚಿತ್ರದಲ್ಲಿ ತಮಿಳಿನ ನಟ ಸೂರ್ಯ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇರುದೈ ಸುತ್ರು ಸಿನಿಮಾ ಮೂಲಕ ಮನೆ ಮಾತಾಗಿರುವ ಸುಧಾ ಕೊಂಗರ ಅವರ ಹೊಸ ಚಿತ್ರದ ಪೂಜೆ ಮೂರು ದಿನದ ಹಿಂದೆಯಷ್ಟೇ ನಡೆದಿದ್ದು ಸೋಮವಾರದಿಂದ ಶೂಟಿಂಗ್ ಆರಂಭವಾಗಿದೆ.

ಸದ್ಯ ಸೆಲವ ರಾಘವನ್‌ ಅವರ ಎನ್‌ಜಿಕೆ ಮತ್ತು ಕೆ ವಿ ಆನಂದ್‌ ಅವರ ಕಾಪನ್‌ ಸಿನಿಮಾಗಳಲ್ಲಿ ಸೂರ್ಯ ಬ್ಯುಸಿಯಾಗಿದ್ದರು. ಇದೀಗ ಎನ್‌ಜಿಕೆ ಬಿಡುಗಡೆಗೆ ಸಿದ್ಧವಾಗಿದೆ. ಇನ್ನೂ ಕಾಪನ್‌ ಸಿನಿಮಾದ ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಕಾಪನ್‌ ಚಿತ್ರದ ಶೂಟಿಂಗ್‌ ಮುಗಿದ ತಕ್ಷಣ ಸೂರ್ಯ ಸುಧಾ ಅವರ ಚಿತ್ರವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಸುಧಾ ಕೊಂಗರ ಅವರ ನಿರ್ದೇಶನದ ಈ ಚಿತ್ರ ನಿಂತು ಹೋಗುತ್ತದೆ ಎಂಬ ವದಂತಿ ಇಡೀ ತಮಿಳು ಚಿತ್ರರಂಗದಲ್ಲಿ ಹರಿದಾಡಿತ್ತು.

ಆದರೆ ಚಿತ್ರತಂಡ ಈಗಾಗಲೇ ಸ್ಕ್ರಿಪ್ಟ್‌ ಪೂಜೆ ನಡೆಸಿದ್ದು ಮತ್ತು ಮುಹೂರ್ತವನ್ನು ನಡೆಸಿದೆ. ಇದರಿಂದ ಆ ವದಂತಿಗಳಿಗೆಲ್ಲಾ ಬ್ರೇಕ್ ಬಿದ್ದಿರುವುದಂತೂ ನಿಜ.

ಅಂಗಳದಲಿ ಹೂವು ಅರಳಲು ನೀ ಜ್ಞಾಪಕ..

#surya #kollywood #tamilmovies #suryamovies #suryahits #suryaandsudhakongara #sudhakongaramovies #suryatwitter #suryaandkarti #suryaandjyotika

Tags

Related Articles