ಸುದ್ದಿಗಳು

ನಿನ್ನೊಂದಿಗೆ ಕಳೆದ ಕ್ಷಣಗಳು ಕವಿತೆಯಂತಾಗಿದೆ ಎಂದು ಬಾಯ್ ಫ್ರೆಂಡ್ ನನ್ನು ಬಣ್ಣಿಸಿದ ಮಾಜಿ ವಿಶ್ವಸುಂದರಿ

ಮುಂಬೈ, ಜ.11: ಇಷ್ಟು ದಿನ ಮದುವೆ ಬೇಡ ಎಂದು ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ರೋಹ್ಮನ್ ಶಾಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ವಿಚಾರ ಕಳೆದ ಹಲವು ದಿನಗಳಿಂದ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಲೇ ಇದೆ. ಇವರು ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದಕ್ಕೆ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಇತ್ತೀಚೆಗೆ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಆದರೆ ಈ ಬಗ್ಗೆ ಸುಷ್ಮಿತಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ರೋಹ್ಮನ್ ನನ್ನ ಅತ್ಯುತ್ತಮ ಗೆಳೆಯ ಎನ್ನುತ್ತಲೇ ಎಲ್ಲೆಡೆ ಅವರೊಂದಿಗೆ ಸುತ್ತಾಡುತ್ತಿದ್ದರು. ಇದೀಗ ಈ ಮಾಜಿ ವಿಶ್ವಸುಂದರಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೋವೊಂದು, 100% ಇವರಿಬ್ಬರು ಕೇವಲ ಗೆಳಯ ಗೆಳತಿಯರಲ್ಲ ಇವರ ನಡುವೆ ಗೆಳತನಕ್ಕೆ ಮೀರಿದ್ದು ಏನೋ ಇದೆ ಎಂಬ ಸುದ್ದಿಗೆ ಪುಷ್ಟಿ ನೀಡುವಂತಿದೆ.

ರೋಹ್ಮನ್ ಒಬ್ಬ ಮಾಡೆಲ್. ಸುಷ್ಮಿತಾಗಿಂತ ವಯಸ್ಸಿನಲ್ಲಿ 15 ವರ್ಷ ಕಿರಿಯರು. ಪ್ರೀತಿಗೆ ಕಣ್ಣಿಲ್ಲ ಎಂಬಂತೆ. ಇವರಿಬ್ಬರ ನಡುವಿನ ಸಾಮರಸ್ಯ ಉತ್ತಮವಾಗಿದೆ. ಹೀಗಾಗಿ ಅವರ ನಡುವೆ ಉತ್ತಮ ಭಾಂದವ್ಯ ಬೆಸೆದಿದೆ. ಇವತ್ತು ರೋಷನ ಅವರ ಹುಟ್ಟುಹಬ್ಬ. ತನ್ನ ಅರ್ಧಾಂಗಿಗೆ ವಿಭಿನ್ನವಾಗಿ ವಿಶ್ ಮಾಡಿರುವ ಸುಷ್ಮಿತಾ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.  ಹ್ಯಾಪಿ ಬರ್ತ್ ಡೇ ಮೈ ರೋಹ್…!!!

ವಿಶ್ವದಲ್ಲಿನ ಎಲ್ಲಾ ಖುಷಿ ನಿನ್ನ ಬಾಹುಬಂಧನದಲ್ಲಿ ಅಡಗಿದೆ. ಎರಡು ಆತ್ಮಗಳು ಒಂದಾಗಿದೆ. ಎಷ್ಟೊಂದು ಸುಂದರ ಕ್ಷಣಗಳು. ಐ ಲವ್ ಯೂ ಎಂದು ಶೀರ್ಷಿಕೆ ನೀಡಿರುವ ಸುಷ್ಮೀತಾ ,ನಿನ್ನ ಬಾಹುಬಂಧನದಲ್ಲಿ ದಿನ ಕಳೆದಿದ್ದೇ ಗೊತ್ತಾಗಿಲ್ಲ ಎಂಬ ಅರ್ಥದಲ್ಲಿ ಕ್ಯಾಪ್ಶನ್ ನೀಡಿದ್ದಾರೆ. ನಿಮ್ಮೊಂದಿಗೆ ಕಳೆದ ಕ್ಷಣಗಳು ಕವಿತೆಯಂತೆ ನನಗೆ ಭಾಸವಾಗುತ್ತಿದೆ. ವಿ ಫಾರ್ ವಿಕ್ಟರಿ, ಕೀಪ್ ಸ್ಮೈಲಿಂಗ್, ಐ ಲವ್ ಸ್ವೀಟ್ ಎಂದು ಬರೆದುಕೊಂಡಿದ್ದಾರೆ.

#bollywood #bollywoodmovies #sushmithasen #sushmithasenboyfriend #balkaninews

Tags