ಸುದ್ದಿಗಳು

ಕಾಲೆಳದವರಿಗೆ ಖಡಕ್ ಉತ್ತರ ಕೊಟ್ಟ ಸ್ವರಾ..

ಅವಳು ಏನು ಮಾಡುತ್ತಿದ್ದಾಳೆ ಸರ್, ನಿಜಕ್ಕೂ ನಾನು ಗೊಂದಲಕ್ಕೀಡಾಗಿದ್ದೇನೆ?

ಮುಂಬೈ,ಸೆ.09: ವೀರೇ ದಿ ವೆಡ್ಡಿಂಗ್ ಚಿತ್ರದಲ್ಲಿ ನಟಿಸಿದ ಸ್ವರಾ ಭಾಸ್ಕರ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಎಲ್ಲರಿಗಿಂತ ಹೆಚ್ಚು ಈಕೆ ನಟಿಸಿದ ಒಂದು ವಿಡಿಯೋ ಕ್ಲಿಪ್ ಹೆಚ್ಚು ಪ್ರಸಿದ್ದಿ ಪಡೆಯಿತು.  ಹಸ್ತಮೈಥುನ ಮಾಡಿ ಚರ್ಚೆಗೆ ಕಾರಣವಾಗಿದ್ದ ನಟಿ ಸ್ವರಾ ಭಾಸ್ಕರ್ ಆಗಾಗ ವಿವಾದಿತ ವಿಚಾರಕ್ಕೆ ಸುದ್ದಿಗೆ ಬರುತ್ತಾಳೆ. ಟ್ರೋಲಿಗರ ಬಾಯಿಗೆ ಈಕೆ ಸದಾ ಆಹಾರವಾಗಿ ಬಿಟ್ಟಿದ್ದಾಳೆ. ಈಗ ಮತ್ತೊಮ್ಮೆ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿ ಸದ್ದು ಮಾಡಿದ್ದಾಳೆ ಸ್ವರಾ.

ಸ್ವರಾಳ ಹಿಂದೆ ಬಿದ್ದ ನೆಟ್ಟಿಗರು

ಮಾಜಿ ಕೊಮೊಡೊರ್ ಹಾಗೂ ಭಾರತದ ಭದ್ರತೆ ಮತ್ತು ಕಾರ್ಯತಂತ್ರ ವ್ಯವಹಾರಗಳ ಬಗೆಗಿನ ಪ್ರಮುಖ ತಜ್ಞ, ನಟಿ ಸ್ವರಾ ಭಾಸ್ಕರ್​ ಅವರ ತಂದೆ ಚಿತ್ರಾಪು ಉದಯ್ ಭಾಸ್ಕರ್ ಸುಪ್ರೀಂ ತೀರ್ಪ ನನ್ನು ಸ್ವಾಗತ ಮಾಡಿ ಶ್ಲಾಘಿಸಿದ್ದರು. ಎಲ್​​ಜಿಬಿಟಿ ತೀರ್ಮಾನಕ್ಕೆ ಸಂಬಂಧಿಸಿ ವಕೀಲೆ ಮೇನಕ ಗುರುಸ್ವಾಮಿ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದರು.

ಯಾರವಳು?

ಇದನ್ನು ಕಂಡ ನೆಟ್ಟಿಗರು ಸ್ವರಾ ಅವರ ಹಸ್ತಮೈಥುನ ದೃಶ್ಯ ಫೋಟೋವನ್ನು ಮತ್ತೆ ಹರಿಯಬಿಟ್ಟು ಯಾರವಳು? ಅವಳು ಏನು ಮಾಡುತ್ತಿದ್ದಾಳೆ ಸರ್, ನಿಜಕ್ಕೂ ನಾನು ಗೊಂದಲಕ್ಕೀಡಾಗಿದ್ದೇನೆ. ನಿಜವಾಗಿಯೂ ನಾನು ಸ್ವರಾ ಅವರ ದೊಡ್ಡ ಅಭಿಮಾನಿ ಎಂದೆಲ್ಲಾ ವ್ಯಂಗ್ಯವಾಡಿದ್ದಾರೆ.

ಖಡಕ್ ಉತ್ತರ

ಇದಕ್ಕೆ ಖಡಕ್ ಆಗಿ ಉತ್ತರ ನೀಡಿದ ಸ್ವರಾ, ನಾನೊಬ್ಬ ಕಲಾವಿದೆ. ನಾನು ಹಸ್ತಮೈಥುನ ಸಾಧನವನ್ನು ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನಷ್ಟೆ. ಮುಂದಿನ ಬಾರಿ ಏನೇ ಕೇಳುವುದಾದರೆ ನೇರವಾಗಿ ನನ್ನನ್ನೆ ಕೇಳಿ. ನನ್ನ ತಂದೆಯನ್ನು ಕೇಳಬೇಕಿಲ್ಲ, ಹಿರಿಯರನ್ನು ಅವಮಾನಿಸುವುದು ಯಾವ ರೀತಿಯಿಂದ ಸರಿ ಕಾಣುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

Tags