ಸುದ್ದಿಗಳು

ಮತ್ತೆ ಸಿನಿಮಾ ಮಾಡಲಿರುವ ‘ಸ್ವಯಂಕೃಷಿ’ ವೀರೇಂದ್ರ

ಮತ್ತೆ ಸಿನಿಮಾ ಮಾಡಲಿರುವ ‘ಸ್ವಯಂಕೃಷಿ’ ವೀರೇಂದ್ರ ಎಸ್.ಕೆ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ವಂಚನೆ ಮಾಡಿದ್ದ ನಟ

ಬೆಂಗಳೂರು.ಮಾ.16: ತಾನೂ ಬದುಕಬೇಕು, ಬೇರೆಯವರನ್ನೂ ಬದುಕಲು ಬಿಡಬೇಕು ಎನ್ನುವ ಸಿದ್ದಾಂತವಿರುವ ‘ಸ್ವಯಂಕೇಷಿ’ ಹೆಸರಿನ ಚಿತ್ರವನ್ನು ನಿರ್ಮಿಸಿ ನಾಯಕನಟರಾಗಿ ವೀರೇಂದ್ರ ನಟಿಸಿದ್ದರು. ಈ ಸಿನಿಮಾ ಅಂದುಕೊಳ್ಳುವಷ್ಟರಮಟ್ಟಿಗೆ ಹಿಟ್ ಆಗದಿದ್ದರೂ ಸಹ ಬೇರೆಯದ್ದೇ ವಿಷಯದಿಂದಾಗಿ ಸಿಕ್ಕಾಪಟ್ಟೆ ಸೌಂಡು ಮಾಡಿತ್ತು.

ಹೌದು, ನಟ ವೀರೇಂದ್ರರವರು ತಮ್ಮದೇ ‘ಸ್ವಯಂಕೃಷಿ’ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಜನರಿಗೆ ವಂಚನೆ ಮಾಡಿ ಅರೆಸ್ಟ್ ಸಹ ಆಗಿದ್ದರು. ಚಿಟ್ ಫಂಡ್ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದು, ಹಣ ತೊಡಗಿಸಿದವರಿಗೆ ಶೇ. 2ರಂತೆ ಪ್ರತಿ ತಿಂಗಳಿಗೆ ಬಡ್ಡಿ ನೀಡಲಾಗುವುದು ಎಂದು ನಂಬಿಸಲಾಗಿತ್ತು. ಆದರೆ ಅದರ ಅವಧಿ ಮುಗಿದಿರುವುದರಿಂದ ಹಣ ನೀಡಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿತ್ತು.

ಈಗ ಇದೇ ವೀರೇಂದ್ರರವರು ಮತ್ತೊಂದು ಸಿನಿಮಾ ಮಾಡಲು ಗಾಂಧಿನಗರಕ್ಕೆ ಆಗಮಿಸಿದ್ದಾರೆ. ಹೌದು, ಇದೀಗ ಹೊಸ ಚಿತ್ರದ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅಸಲಿಗೆ ‘ಸ್ವಯಂಕೃಷಿ’ ಸಿನಿಮಾ ಯಾರಿಗೂ ಇಷ್ಟವಾಗಿರಲಿಲ್ಲ. ಗಳಿಕೆಯಲ್ಲಿ ಮುಗ್ಗರಿಸಿದ್ದರೂ ಸಹ ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲಿಯೇ ಹುಡುಕಬೇಕು ಎಂಬ ಮಾತಿನಂತೆ ಪುನಃ ಚಿತ್ರರಂಗಕ್ಕೆ ಬರುತ್ತಿದ್ದಾರೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ವೀರೇಂದ್ರರೊಂದಿಗೆ ಅಂಬರೀಶ್ ರಂತಹ ಘಟಾನುಘಟಿ ಕಲಾವಿದರೇ ನಟಿಸಿದ್ದರು. ಈಗ ಏನೇ ಆಗಲಿ, ಅವರು ವಯಕ್ತಿಕವಾಗಿ ಹೇಗೆ ಇರಲಿ. ಆದರೆ ಸಿನಿಮಾ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರೆ ಸಾಕು ಅಲ್ಲವೇ..?? ಹೀಗಾಗಿ ಅವರು ಈ ಬಾರಿಯಾದರೂ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲಿ.

ಪಾದಯಾತ್ರೆ ಮಾಡುತ್ತಲೇ ಸ್ಕ್ರಿಪ್ಟ್ ಮಾಡುತ್ತಿರುವ ನಿರ್ದೇಶಕ

#swayamkrishi, #veerendra, #balkaninews #filmnews, #kannadasuddigalu

Tags