ಸುದ್ದಿಗಳು

ಮೋಡಿ ಮಾಡುವ ಹೊಸಬರ ‘ಸ್ವೆಚ್ಛಾ’ ಚಿತ್ರದ ಟ್ರೈಲರ್…!!!

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಪ್ರಯೋಗಗಳೊಂದಿಗೆ ಬರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡ ‘ಸ್ವೆಚ್ಛಾ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಈಗಾಗಲೇ ಈ ಚಿತ್ರವು ಸಾಕಷ್ಟು ಗಮನ ಸೆಳೆದಿದ್ದು, ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹಳ್ಳಿ ಹುಡುಗನೊಬ್ಬ ಚಿಕ್ಕ ವಯಸ್ಸಿನಲ್ಲೇ ಪ್ರೀತಿಗೆ ಬಿದ್ದಾಗ ಅವನ ಜೀವನದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ ಎಂಬುದನ್ನು ಸುರೇಶ್ ರಾಜ್ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.

ಇನ್ನು ಚಿತ್ರಕ್ಕೆ ಹಿತೇಶ್ ನಾಯಕರಾಗಿದ್ದು, ಪವಿತ್ರ ನಾಯಕ್, ಮಾಲಾಶ್ರೀ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಈ ಚಿತ್ರದ ಬಹುತೇಕ ಕಥೆ ಮತ್ತು ಸನ್ನಿವೇಶಗಳು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತದೆ. ಈಗಾಗಲೇ ಸಿನಿಮಾ ಮುಗಿದಿದ್ದು, ಸೆನ್ಸಾರ್ ಮನೆಯ ಅಂಗಳದಲ್ಲಿದೆ.

ಬಹಳ ರುಚಿ ಈ ಬಾಳೆ ಹಣ್ಣಿನ ದೋಸೆ

#swecha #swechamovietrailor #kannadafilm, #kannadamovie, #kannadanews

Tags