ಸುದ್ದಿಗಳು

ಸೈರಾ ಸೆಟ್ ನಲ್ಲಿ ಕಿಚ್ಚ ಕುಕ್ಕಿಂಗ್

‘ಸೈರಾ ನರಸಿಂಹ ರೆಡ್ಡಿ’ ಅಕ್ಟೋಬರ್ 2ಕ್ಕೆ ತೆರೆ ಕಾಣುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಅವುಕು ಪ್ರಾಂತ್ಯದ ರಾಜನ ರೋಲ್​ನಲ್ಲಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಹೇಗೆ ಕಾಣಿಸಲಿದ್ದಾರೆಂಬ ಸಣ್ಣ ಸುಳಿವು ಚಿತ್ರತಂಡ ನೀಡಿದ್ದು, ರಾಜನ ಅವತಾರದಲ್ಲಿ ಸ್ಯಾಂಡಲ್​ವುಡ್ ಬಾದ್​ಷಾ ಮೋಡಿ ಮಾಡಿದ್ದಾರೆ.

ಈಗ ಕಿಚ್ಚ ಸುದೀಪ್ ವಿಡಿಯೋವೊಂದು ವೈರಲ್ ಆಗಿದೆ. ಸೈರಾ ಸೆಟ್ ನಲ್ಲಿ ಬಿಡುವಿನ ವೇಳೆ ಆಮ್ಲೇಟ್ ದೋಸೆ ಮಾಡಿ, ಸೆಟ್ ನಲ್ಲಿರುವ ಸ್ನೇಹಿತರಿಗೆ ಉಣಬಡಿಸಿದ್ದಾರೆ.  ಈ ವಿಡಿಯೋ ಈಗ ವೈರಲ್ ಆಗಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

ಸುದೀಪ್ ಬರೀ ನಟ, ನಿರ್ದೇಶಕ ಮಾತ್ರವಲ್ಲ. ಒಳ್ಳೆಯ ಪಾಕ ಪ್ರವೀಣ ಕೂಡ ಹೌದು. ಸುದೀಪ್ ಈ ಹಿಂದೆ ಅನೇಕ ಬಾರಿ ತಮ್ಮ ಕೈ ರುಚಿ ಎಂತಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ.

 

View this post on Instagram

 

Fun Times on th set of #SNR.. Special Omlette Dosa.

A post shared by kicchasudeep (@kichchasudeepa) on

ಸಿದ್ಧಾರ್ಥ್ ಮಹೇಶ್ `ಗರುಡ’ ಟ್ರೇಲರ್ ರಿಲೀಸ್!

#kicchasudeep #kicchamovies  #kicchacooking

Tags